ಬೆಂಗಳೂರಿಗೆ ಲಾಲ್ ಬಾಗ್, ಕಬ್ಬನ್‌ ನಂತಹ ಮತ್ತಷ್ಟು ಪಾರ್ಕ್ ಗಳ ಅಗತ್ಯವಿದೆ: ಸಚಿವ ಈಶ್ವರ್ ಖಂಡ್ರೆ

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಪ್ರಕೃತಿಯ ಮೇಲೆ ಬೀರುವ ಪರಿಣಾಮ ಕುರಿತು ಮಾತನಾಡಿದ ಖಂಡ್ರೆ, ಮರ ಗಿಡ ಬೆಳೆಸುವುದು ನಮ್ಮ ಮುಂದಿರುವ ಏಕೈಕ ಪರಿಹಾರವಾಗಿದೆ.
Eshwar B Khandre
ಈಶ್ವರ್ ಖಂಡ್ರೆ
Updated on

ಬೆಂಗಳೂರು: ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ನಿರ್ಮಾಣವಾಗಿ ಶತಮಾನಗಳೇ ಕಳೆದಿದ್ದು, ಬೆಂಗಳೂರಿಗೆ ಇನ್ನೂ ಹೆಚ್ಚಿನ ಅಂತಹ ಉದ್ಯಾನವನಗಳ ಅಗತ್ಯವಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಮಂಗಳವಾರ ಹೇಳಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, 150 ವರ್ಷಗಳ ನಂತರವೂ ಬೆಂಗಳೂರಿನಲ್ಲಿ ಲಾಲ್ ಬಾಗ್ ಅಥವಾ ಕಬ್ಬನ್ ಪಾರ್ಕ್‌ನಂತಹ ಪ್ರಮುಖ ಉದ್ಯಾನವನಗಳು ಇಲ್ಲ ಎಂದರು.

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಪ್ರಕೃತಿಯ ಮೇಲೆ ಬೀರುವ ಪರಿಣಾಮ ಕುರಿತು ಮಾತನಾಡಿದ ಖಂಡ್ರೆ, ಮರ ಗಿಡ ಬೆಳೆಸುವುದು ನಮ್ಮ ಮುಂದಿರುವ ಏಕೈಕ ಪರಿಹಾರವಾಗಿದೆ. ಈ ಕುರಿತು ಕುರಿತು ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಒಬ್ಬ ವ್ಯಕ್ತಿ ಆರಾಮವಾಗಿ ಬದುಕಲು ಏಳು ಮರಗಳು ಬೇಕಾಗಿದ್ದರೆ, ಬೆಂಗಳೂರಿನಲ್ಲಿ ಏಳು ಮಂದಿಗೆ ಒಂದೇ ಮರ ಎಂಬಂತಾಗಿದೆ. ರಾಜಧಾನಿಯ ಜನಸಂಖ್ಯೆ 1.5 ಕೋಟಿಗೆ ಸಮೀಪಿಸಿರುವುದರಿಂದ ಸೂಕ್ತ ಕ್ರಮಗಳಿಗೆ ಇದು ಸಕಾಲವಾಗಿದೆ. ನಗರದ ಹಸಿರನ್ನು ಹೆಚ್ಚಿಸಲು ಕಾರ್ಪೊರೇಟ್ ಸಂಸ್ಥೆಗಳು ಮುಂದೆ ಬರಬೇಕು ಎಂದರು.

ಯಲಹಂಕ ಸಮೀಪದ ಮಾದಪ್ಪನಹಳ್ಳಿಯಲ್ಲಿ ಖಾಸಗಿ- ಸಾರ್ವಜನಿಕ ಸಹಭಾಗಿತ್ವದಲ್ಲಿ 153 ಎಕರೆ ಪ್ರದೇಶದಲ್ಲಿ ಯೋಜಸಿರುವ ಜೈವ ವೈವಿಧ್ಯ ಉದ್ಯಾನವನ ಪಾರ್ಕ್ ನಂತಹ ಯೋಜನೆಗಳಿಂದ ಬಹಳ ಉಪಯೋಗವಿದೆ. ಇದರ ಅಂದಾಜು ವೆಚ್ಚ ಸುಮಾರು ರೂ. 250 ಕೋಟಿ ಆಗಿದ್ದು, ಇದು ರಾಜ್ಯದ ಸಂಪನ್ಮೂಲಗಳನ್ನು ವಿಸ್ತರಿಸುತ್ತದೆ. ಆದ್ದರಿಂದ, ಕಾರ್ಪೊರೇಟ್ ಸಂಸ್ಥೆಗಳು ಮುಂದೆ ಬಂದು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.

Eshwar B Khandre
ಮಾನವ-ಪ್ರಾಣಿ ಸಂಘರ್ಷ: ಕೇರಳದ ಜನರಿಗೆ ಯಾವುದೇ ಪರಿಹಾರ ನೀಡಿಲ್ಲ; ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ

1960ರ ದಶಕದಲ್ಲಿ ಎಚ್‌ಎಂಟಿಗೆ ಕೈಗಾರಿಕೆ ಸ್ಥಾಪಿಸಲು ನೀಡಿದ್ದ ಜಾಗದಲ್ಲಿ ಉದ್ಯಾನವನವನ್ನು ಸ್ಥಾಪಿಸಲಾಗುತ್ತಿದೆ. ಈಗ ಕೈಗಾರಿಕೆ ಸ್ಥಗಿತಗೊಂಡಿರುವುದರಿಂದ ಎಚ್‌ಎಂಟಿಯ ವಶದಲ್ಲಿರುವ ಭೂಮಿಯನ್ನು ಬೇರೆ ಉದ್ದೇಶಕ್ಕೆ ಪರಿವರ್ತಿಸಲಾಗದ ಕಾರಣ ಅರಣ್ಯವಾಗಿಯೇ ಉಳಿದಿದೆ. ಇದನ್ನು ಮತ್ತೊಂದು ಪ್ರಮುಖ ಉದ್ಯಾನವಾಗಿ ಮಾಡಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com