
ಬೆಂಗಳೂರು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಪ್ರಕರಣವೊಂದು ಸ್ಪಷ್ಟ ಉದಾಹರಣೆಯಾಗಿದೆ. ದೇಶಕ್ಕಾಗಿ ಸೇವೆ ಸಲ್ಲಿಸಿದ ವೀರ ಯೋಧನ ಕುಟುಂಬಕ್ಕೆ ಭೂಮಿ ಮಂಜೂರು ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಸುಮಾರು 55 ವರ್ಷಗಳಿಂದಲೂ ಮಾಜಿ ಸೈನಿಕನ ವಿಧವೆ ಪತ್ನಿ ಕಚೇರಿ-ಕಚೇರಿಗೆ ಅಲೆದಾಡುತ್ತಿದ್ದು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ತುಮಕೂರು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಟಿ.ಎಸ್. ವಿರೂಪಾಕ್ಷಪ್ಪ ಅವರ ಪತ್ನಿ ಎನ್‌ಕೆ ಲಲಿತಾಂಬಿಕಾ (89) ಅವರು ಈ ಸಂಬಂಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರಿಗೆ ರಾಜ್ಯ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ಕೋಟಾದಡಿಯಲ್ಲಿ 1969 ರಲ್ಲಿ ನನ್ನ ಪತಿಗೆ 4 ಎಕರೆ "ಗುಡ್ಡಗಾಡು" ಭೂಮಿಯನ್ನು ನೀಡಲಾಗಿತ್ತು. ತುಮಕೂರು ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 26, ಪ್ಲಾಟ್ ಸಂಖ್ಯೆ 7 ರಲ್ಲಿ ಭೂಮಿಯನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ಭೂ ಗುಡ್ಡಗಾಡು ಪ್ರದೇಶವಾಗಿದ್ದರಿಂದ ಕೃಷಿಗೆ ಯೋಗ್ಯವಾಗಿರಲಿಲ್ಲ. ಭೂಮಿಯನ್ನು ಪರಿಗಣಿಸಿದರೂ ನಮಗೆ ಸ್ವಾಧೀನ ಪತ್ರವನ್ನು ಹಸ್ತಾಂತರಿಸಿಲ್ಲ. ಪರ್ಯಾಯ ಭೂಮಿಯನ್ನೂ ಹಂಚಿಕೆ ಮಾಡಿಲ್ಲ, ಹೀಗಾಗಿ ಸರ್ಕಾರಕ್ಕೆ ಭೂಮಿ ಮಂಜೂರು ಮಾಡುವಂತೆ ಅಥವಾ ನಿವೇಶನವನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಅಲ್ಲದೆ, ಸ್ವಾಧೀನ ಪತ್ರಕ್ಕಾಗಿ 55 ವರ್ಷಗಳಿಂದ ಖರ್ಚು ಮಾಡಿದ ಹಣದಿಂದ ಕೃಷಿ ಭೂಮಿಯನ್ನೇ ಖರೀದಿಸಬಹುದಿತ್ತು... 1969 ರಲ್ಲಿ ಪ್ರಾರಂಭವಾದ ಸ್ವಾಮಿ ವಿವೇಕಾನಂದರ ಮಾತುಗಳಲ್ಲಿ ನಂಬಿಕೆಯಿಟ್ಟು, 'ಎದ್ದೇಳಿ, ಎಚ್ಚರಗೊಳ್ಳಿ ಮತ್ತು ಗುರಿ ತಲುಪುವವರೆಗೆ ನಿಲ್ಲಬೇಡಿ' ಎಂಬ ನನ್ನ ಹೋರಾಟವು 89ನೇ ವಯಸ್ಸಿನಲ್ಲಿಯೂ ಮುಂದುವರೆದಿದೆ ಎಂದು ಹೇಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೂರನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭೂಮಿ ಮಂಜೂರು ಮಾಡಿ 55 ವರ್ಷಗಳು ಕಳೆದಿವೆ. ಆದರೆ, ಮಂಜೂರಾತಿ ಕಾಗದದ ಮೇಲಷ್ಟೇ ಇದೆ, ವಾಸ್ತವಾಗಿ ಹಸ್ತಾಂತರ ಮಾಡಿಲ್ಲ. ಸರ್ಕಾರ ಹೆಸರಿಗಷ್ಟೇ ಭೂಮಿ ನೀಡಿದೆ, ಗುಡ್ಡಗಾಟು ಪ್ರದೇಶ ನೀಡುವ ಉದ್ದೇಶವಾದರೂ ಏನಿದೆ? ಇದು ಸ್ವಾತಂತ್ರ್ಯ ಹೋರಾಟಗಾರ ಮತ್ತು ಅವರ ಕುಟುಂಬಕ್ಕೂ ಮಾಡಿದ ಮೋಸವಲ್ಲದೆ ಬೇರೇನೂ ಅಲ್ಲ. ಇದು ಅಂದಿನ ಜಿಲ್ಲಾಧಿಕಾರಿಯಾಗಿದ್ದ ತಹಶೀಲ್ದಾರ್ ಮಾಡಿದ ವಂಚನೆಯ ಸ್ಪಷ್ಟ ಪ್ರಕರಣವಾಗಿದೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ವಿಚಾರದಲ್ಲಿ ಕಂದಾಯ ಸಚಿವರು ಮಧ್ಯಪ್ರವೇಶಿಸುವಂತೆ ಸೂಚಿಸಿರುವ ಅವರು, ಯೋಧನ ಪತ್ನಿಗೆ ನಿವೇಶನ ಮಂಜೂರು ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ತಾಕೀತು ಮಾಡಿದ್ದಾರೆ.
Advertisement