ಬೆಂಗಳೂರು: ಮದುವೆಗೆ ಒಂದು ದಿನ ಮೊದಲು 25 ವರ್ಷದ ಯುವಕನ ಅಪಹರಣ, ದರೋಡೆ!

ಜಿಗಣಿ ಕೈಗಾರಿಕಾ ಪ್ರದೇಶದ ಬಳಿಯ ಶಿಕಾರಿಪಾಳ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.
Representational image
ಸಾಂದರರ್ಭಿಕ ಚಿತ್ರ
Updated on

ಬೆಂಗಳೂರು: ಆಗಸ್ಟ್ 17 ರಂದು ನಡೆಯಲಿರುವ ತನ್ನ ಮದುವೆಗೆ ಸ್ನೇಹಿತರು ಮತ್ತು ಸಂಬಂಧಿಕರನ್ನು ಆಹ್ವಾನಿಸಲು ನಗರಕ್ಕೆ ಬಂದಿದ್ದ ಮಂಡ್ಯದ 25 ವರ್ಷದ ಯುವಕನನ್ನು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾರುಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅಪಹರಿಸಿ ದರೋಡೆ ಮಾಡಿದ್ದಾರೆ.

ಜಿಗಣಿ ಕೈಗಾರಿಕಾ ಪ್ರದೇಶದ ಬಳಿಯ ಶಿಕಾರಿಪಾಳ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ತನ್ನ ಬಳಿಯಿದ್ದ ಸುಮಾರು 2.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ ಎಂದು ಆತ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕುಮಾರ್ (ಹೆಸರು ಬದಲಾಯಿಸಲಾಗಿದೆ) ಮಂಡ್ಯದ ಮಳವಳ್ಳಿ ತಾಲ್ಲೂಕಿನವನು. ಮೂಲತಃ ಕೃಷಿಕರಾಗಿರುವ ಕುಮಾರ್ ತನ್ನ ಸ್ನೇಹಿತನೊಂದಿಗೆ ಬನಶಂಕರಿಯಲ್ಲಿದ್ದ ತನ್ನ ಸಹೋದರಿ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಆರೋಪಿ ಕಾರಿನಿಂದ ಬೈಕ್ ಗೆ ಡಿಕ್ಕಿ ಹೊಡೆದು ಜಗಳವಾಡಿದ್ದಾನೆ. ಆರೋಪಿಗಳು ಇಬ್ಬರನ್ನೂ ಥಳಿಸಲು ಪ್ರಾರಂಭಿಸಿದರು. ನಾಲ್ವರು ಆರೋಪಿಗಳಲ್ಲಿ ಇಬ್ಬರು ಕುಮಾರ್ ಅವರನ್ನು ಬೆದರಿಸಿ ಆರಂಭದಲ್ಲಿ ಅವರನ್ನು ಬೈಕ್‌ನಲ್ಲಿ ಕರೆದೊಯ್ದರು.

ನಂತರ ಕುಮಾರ್ ಸ್ನೇಹಿತನನ್ನು ಥಳಿಸಿ, ಒಂಟಿಯಾಗಿ ಬಿಟ್ಟು ಹೋದರು. ಮೊದಲು ಕುಮಾರ್ ಅವರನ್ನು ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಕರೆದೊಯ್ದ ಆರೋಪಿಗಳು, ನಂತರ ಕಾರಿನೊಳಗೆ ಎಳೆದುಕೊಂಡು ಹೋಗಿ ಅವರ ಬಳಿ ಇದ್ದ ಚಿನ್ನಾಭರಣಗಳು ಮತ್ತು 40,000 ರೂ.ಗಳನ್ನು ದೋಚಿದರು. ಅವರ ಫೋನ್ ಸಂಖ್ಯೆಯನ್ನು ಸಹ ತೆಗೆದುಕೊಂಡು ಯುಪಿಐ ಮೂಲಕ 10,700 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾರೆ.

Representational image
ಬೆಂಗಳೂರು: ಪಿಜಿಗೆ ನುಗ್ಗಿ BESCOM ಅಸಿಸ್ಟೆಂಟ್ ಎಂಜಿನಿಯರ್ ಮೇಲೆ ಲೈಂಗಿಕ ದೌರ್ಜನ್ಯ, ದರೋಡೆ

ದಾರಿಯಲ್ಲಿ, ಆರೋಪಿಗಳು ಸಂತ್ರಸ್ತನ ಬೈಕ್ ಬಿಟ್ಟು ಹೋಗಿದ್ದರು. ನಂತರ ಕಬ್ಬಿಣದ ರಾಡ್‌ನಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಸಂಜೆ 5.30 ರ ಸುಮಾರಿಗೆ ಹಾರೋಹಳ್ಳಿ ರಸ್ತೆಯಲ್ಲಿ ನಿರ್ಜನ ಸ್ಥಳದಲ್ಲಿ ಕುಮಾರ್ ಅವರನ್ನು ಬಿಟ್ಟು ಹೋಗಿದ್ದಾರೆ ಎಂದು ಸಂತ್ರಸ್ತ ಯುವಕ ನೀಡಿದ ದೂರಿನ ಆಧಾರದ ಮೇಲೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ ಸಂತ್ರಸ್ತ ಯುವಕ ತನ್ನ ಸ್ನೇಹಿತರಿಗೆ ಕರೆ ಮಾಡಿದ್ದಾನೆ, ಅವರು ಸ್ಥಳಕ್ಕೆ ಧಾವಿಸಿ. ವೈದ್ಯಕೀಯ ಚಿಕಿತ್ಸೆ ಪಡೆದ ನಂತರ ಮರುದಿನ ದೂರು ದಾಖಲಿಸಿದ್ದಾರೆ. ಈ ಸಂಬಂಧ ಮೂವರು ದುಷ್ಕರ್ಮಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಿಟ್ಟುಹೋಗಿದ್ದ ಬೈಕ್ ಕೂಡ ಶುಕ್ರವಾರ ಪತ್ತೆಯಾಗಿದೆ. ದೂರುದಾರರ ಮದುವೆ ಭಾನುವಾರವಿದೆ. ಹಣ ವರ್ಗಾಯಿಸಲು ಅವರು ಸಂತ್ರಸ್ತ ಯುವಕನಿಗೆ ನೀಡಿದ ಫೋನ್ ಸಂಖ್ಯೆಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com