
ಬೆಂಗಳೂರು: ರಿಯಲ್ ಎಸ್ಟೇಟ್ ಸಲಹೆಗಾರ ನೈಟ್ ಫ್ರಾಂಕ್ ಪ್ರಕಾರ, ಪ್ರೈಮ್ ಹೌಸಿಂಗ್ ಪ್ರಾಪರ್ಟಿಗಳ ಬೆಲೆ ಏರಿಕೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು, ದೇಶದ ವಾಣಿಜ್ಯ ನಗರಿ ಮುಂಬೈಯನ್ನೇ ಹಿಂದಿಕ್ಕಿದ್ದು, ಜಾಗತಿಕವಾಗಿ 46 ನಗರಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ಮುಂಬೈ 6ನೇ ಸ್ಥಾನದಲ್ಲಿದ್ದರೆ, ದೆಹಲಿ 15ನೇ ಸ್ಥಾನದಲ್ಲಿದೆ.
ನೈಟ್ ಫ್ರಾಂಕ್‌ನ ಪ್ರೈಮ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್(ಪಿಜಿಸಿಐ) 2025ರ ತ್ರೈಮಾಸಿಕ 2(ಏಪ್ರಿಲ್-ಜೂನ್) ವರದಿಯ ಪ್ರಕಾರ, ಸಿಯೋಲ್, ಪ್ರೈಮ್ ರೆಸಿಡೆನ್ಶಿಯಲ್ ಪ್ರಾಪರ್ಟಿಗಳಲ್ಲಿ ಶೇ. 25.2 ರಷ್ಟು ವಾರ್ಷಿಕ ಬೆಲೆ ಏರಿಕೆಯೊಂದಿಗೆ ಮೊದಲ ಸ್ಥಾನದಲ್ಲಿದೆ.
ಟೋಕಿಯೊ ಶೇ. 16.3 ರಷ್ಟು ಏರಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ ಮತ್ತು ದುಬೈ ಶೇ. 15.8 ರಷ್ಟು ವಾರ್ಷಿಕ ಬೆಲೆ ಏರಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದೆ.
ಪ್ರೈಮ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ ವಿಶ್ವಾದ್ಯಂತ 46 ನಗರಗಳಲ್ಲಿ ಪ್ರೈಮ್ ರೆಸಿಡೆನ್ಶಿಯಲ್ ಬೆಲೆ ಏರಿಕೆ ಪತ್ತೆಹಚ್ಚುವ ಮೌಲ್ಯಮಾಪನ ಆಧಾರಿತ ಸೂಚ್ಯಂಕವಾಗಿದೆ.
ಭಾರತದಲ್ಲಿ, ಬೆಂಗಳೂರಿನ ಪ್ರೈಮ್ ಹೌಸಿಂಗ್ ಪ್ರಾಪರ್ಟಿಗಳ ಬೆಲೆಯಲ್ಲಿ ಶೇ. 10.2 ರಷ್ಟು ಏರಿಕೆಯಾಗಿದೆ. ಮುಂಬೈ(ಶೇ. 8.7) ಮತ್ತು ದೆಹಲಿ (ಶೇ. 3.9) ಏರಿಕೆಯಾಗಿದೆ.
ಜೂನ್ 2025 ರವರೆಗಿನ 12 ತಿಂಗಳಲ್ಲಿ ಸರಾಸರಿ ಜಾಗತಿಕ ಪ್ರೈಮ್ ರೆಸಿಡೆನ್ಶಿಯಲ್ ಬೆಲೆ ಹೆಚ್ಚಳವು ಶೇ. 2.3 ರಷ್ಟು ಇದೆ ಎಂದು ಸಲಹೆಗಾರ ಉಲ್ಲೇಖಿಸಿದ್ದಾರೆ.
Advertisement