ವಿಧಾನ ಪರಿಷತ್ತಿನಲ್ಲಿ ಪ್ರತಿಧ್ವನಿಸಿದ ಹಾಸನ ಸರಣಿ ಹೃದಯಾಘಾತ ಘಟನೆಗಳು

"ಇನ್ನು ಎರಡು ತಿಂಗಳಲ್ಲಿ ಬೆಳಗಾವಿಯಲ್ಲಿ ಹೃದ್ರೋಗ ಚಿಕಿತ್ಸಾ ಘಟಕವನ್ನು ಅಧಿಕೃತವಾಗಿ ಪ್ರಾರಂಭಿಸಲಾಗುವುದು" ಎಂದು ಅವರು ಹೇಳಿದರು.
 Legislative Council
ವಿಧಾನ ಪರಿಷತ್
Updated on

ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಸೋಮವಾರ ಹಾಸನದಲ್ಲಿ ನಡೆದ ಸರಣಿ ಹೃದಯಾಘಾತದ ಘಟನೆಗಳ ಕುರಿತು ಚರ್ಚೆ ನಡೆಯಿತು. ಪರಿಷತ್ ಸದಸ್ಯರು, ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎರಡರಿಂದಲೂ ಹೃದಯಾಘಾತದ ಘಟನೆಗಳು, ಕಾರಣ, ಕ್ರಮಗಳು, ಸೌಲಭ್ಯಗಳು, ಆರೈಕೆ ಕೇಂದ್ರಗಳು, ಹುದ್ದೆಗಳು ಮತ್ತು ಇತರವುಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು, ಯುವಕರಲ್ಲಿಯೂ ಹೃದಯಾಘಾತದ ಘಟನೆಗಳು ಕಳವಳಕಾರಿಯಾಗಿದೆ. ಈ ಸಂಬಂಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಎರಡು ತಿಂಗಳಲ್ಲಿ ನಡೆದ ಹೃದಯಾಘಾತದ ಘಟನೆಗಳ ಮಾದರಿಯನ್ನು ಗಮನಿಸಲಾಗಿದೆ ಮತ್ತು ಶೇ. 6 ರಷ್ಟು ಹಿಂದಿನ ವರ್ಷಗಳಂತೆ ಕಂಡುಬಂದಿದೆ. ಕೋವಿಡ್ -19 ಗೆ ಸಂಬಂಧಿಸಿದ ಹೃದಯಾಘಾತದ ಮಾದರಿ ಸರಿಯಾಗಿಲ್ಲ ಎಂದು ಅವರು ಹೇಳಿದರು.

"ಘಟನೆಗಳ ಬಗ್ಗೆ ಅಸಮಂಜಸ ವರದಿಗಳು ಮತ್ತು ಸಂದೇಶಗಳಿಂದಾಗಿ, ಜಯದೇವ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಶೇ. 25 ರಷ್ಟು ಹೆಚ್ಚಾಗಿದೆ. ಸಿಗರೇಟ್ ಸೇದುವುದು, ಮದ್ಯಪಾನ ಹೃದಯಾಘಾತಕ್ಕೆ ಪೂರ್ವಭಾವಿ ಅಂಶಗಳಾಗಿವೆ. ಈ ಅಂಶಗಳ ಹೊರತಾಗಿ, ಜನರ ಜೀವನಶೈಲಿಯೂ ಹೃದಯಾಘಾತಕ್ಕೆ ಕಾರಣವಾಗಿದೆ. ಜಯದೇವ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದ ಸಮಿತಿಯು ಕೋವಿಡ್ -19 ಲಸಿಕೆ ಕಾರಣ ಎಂಬ ಆರೋಪವನ್ನು ತಳ್ಳಿಹಾಕಿದೆ" ಎಂದು ಅವರು ಹೇಳಿದರು.

ಸರ್ಕಾರವು 8 ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಹೃದ್ರೋಗ ಚಿಕಿತ್ಸಾ ಘಟಕವನ್ನು ಆರಂಭಿಸಲಿದೆ ಎಂದು ಸಚಿವರು ಹೇಳಿದರು.

 Legislative Council
ಹಾಸನಕ್ಕೆ ಹೃದಯಾಘಾತ: ಮೊನ್ನೆ ವಿದ್ಯಾರ್ಥಿನಿ, ಇಂದು ಆಟೋ ಚಾಲಕ Heart Attack ಗೆ ಬಲಿ!

ರಾಯಚೂರು ಮತ್ತು ಕೊಪ್ಪಳದಲ್ಲಿ ಜಯದೇವ ಆಸ್ಪತ್ರೆಯ ಘಟಕ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. "ಇನ್ನು ಎರಡು ತಿಂಗಳಲ್ಲಿ ಬೆಳಗಾವಿಯಲ್ಲಿ ಹೃದ್ರೋಗ ಚಿಕಿತ್ಸಾ ಘಟಕವನ್ನು ಅಧಿಕೃತವಾಗಿ ಪ್ರಾರಂಭಿಸಲಾಗುವುದು" ಎಂದು ಅವರು ಹೇಳಿದರು.

5 ವರ್ಷಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ವಿಶೇಷ ಆಸ್ಪತ್ರೆ ಇರುತ್ತದೆ ಎಂದು ಸಚಿವರು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, 86 ಸ್ಥಳಗಳಲ್ಲಿರುವ ಡಾ. ಪುನೀತ್‌ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯಾದ್ಯಂತ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು ಎಂದರು.

ಹೃದಯಾಘಾತವು ಮಧುಮೇಹ, ಬಿಪಿ, ಮಾಲಿನ್ಯ, ಒತ್ತಡ, ಬೊಜ್ಜು ಮತ್ತು ಜೀವನಶೈಲಿಗೆ ಸಂಬಂಧಿಸಿದೆ ಎಂದು ಸಚಿವರು ಒತ್ತಿ ಹೇಳಿದರು.

ಹೃದ್ರೋಗಕ್ಕೆ ಜೀವನಶೈಲಿ, ಆಹಾರ ಪದ್ದತಿ, ಒತ್ತಡದ ಜೀವನ, ಸರಿಯಾಗಿ ನಿದ್ದೆ ಇಲ್ಲದಿರುವುದು ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದ ಸಚಿವರು, ಚಾಲಕರಲ್ಲಿ ಹೆಚ್ಚಿನ ಅಪಾಯ ಕಂಡುಬರುತ್ತಿದೆ. ಹಾಗಾಗಿ ಚಾಲಕರಿಗೆ ವಿಶೇಷ ಆರೋಗ್ಯ ತಪಾಸಣೆ ನಡೆಸಲಾಗುವುದು. ಆಟೋ ಮತ್ತು ಕ್ಯಾಬ್‌ ಚಾಲಕರ ಜತೆ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ಶಾಲಾ ಮಕ್ಕಳಲ್ಲೂ ಮಾನಸಿಕ ಒತ್ತಡ ಕಂಡುಬರುತ್ತಿದೆ. ಅವರಿಗೂ ವಿಶೇಷ ತಪಾಸಣೆ ಆಯೋಜಿಸಲು ನಿರ್ಧರಿಸಿದ್ದು, ಹೃದ್ರೋಗವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com