
ಹಾಸನ: ಹಾಸನದಲ್ಲಿ ಹೃದಯಾಘಾತದ ಸರಣಿ ಮುಂದುವರಿದಿದ್ದು ಇಂದು Heart Attack ಗೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕಳೆದ 1 ತಿಂಗಳ ಅಂತರದಲ್ಲಿ ಹಾಸನದಲ್ಲೇ ಬರೋಬ್ಬರಿ 16 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಿದ್ದೇಶ್ವರ್ ನಗರದ ನಿವಾಸಿ 37 ವರ್ಷದ ಗೋವಿಂದನಿಗೆ ಆಟೋ ಚಲಾಯಿಸುವಾಗ ಎದೆನೋವು ಕಾಣಿಸಿಕೊಂಡಿದೆ. ತಡ ಮಾಡದೆ ಗೋವಿಂದನೆ ಆಟೋ ಚಲಾಯಿಸಿಕೊಂಡು ಜಿಲ್ಲಾಸ್ಪತ್ರೆಗೆ ತೆರಳಿದ್ದರು. ಆದರೂ ಸಾವನ್ನು ಗೋವಿಂದ ಗೆದ್ದು ಬರಲಿಲ್ಲ. ಇನ್ನು ಮೊನ್ನೆಯಷ್ಟೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ವಾಸವಿದ್ದು ಮುಕ್ತ ವಿವಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಕಟ್ಟಳ್ಳಿ ಗ್ರಾಮದ 22 ವರ್ಷದ ಪದವೀಧರೆ ಸುಪ್ರಿಯಾ ಹೃದಯಾಘಾತಕ್ಕೆ ಬಲಿಯಾಗಿದ್ದರು.
Advertisement