
ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆಯಲ್ಲಿ ಬಹುನಿರೀಕ್ಷಿತ 700 ಮೀಟರ್ ಹೊಸ ಮಾರ್ಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು, ಇದು ನಗರದ ಅತ್ಯಂತ ಜನದಟ್ಟಣೆಯ ಜಂಕ್ಷನ್‌ಗಳಲ್ಲಿ ಒಂದಾದ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿಯಾಗಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ರ‍್ಯಾಂಪ್, ಸಂಚಾರ ದಟ್ಟಣೆಯನ್ನು ಸುಮಾರು ಶೇಕಡಾ 30ರಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ.
ರಾಷ್ಟ್ರೀಯ ಹೆದ್ದಾರಿ NH 44ರ ಹೊರ ವರ್ತುಲ ರಸ್ತೆ (ORR) ನ್ನು ಸಂಧಿಸುವ ಹೆಬ್ಬಾಳ ಜಂಕ್ಷನ್, ಪಶ್ಚಿಮದಲ್ಲಿ ತುಮಕೂರಿನಿಂದ, ಪೂರ್ವದಲ್ಲಿ ಕೆಆರ್ ಪುರಂ ಮತ್ತು ಉತ್ತರದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಸಂಚಾರಕ್ಕೆ ನಿರ್ಣಾಯಕ ಛೇದಕವಾಗಿದೆ. ಇವೆಲ್ಲವೂ ಮೇಖ್ರಿ ಸರ್ಕಲ್ ನಲ್ಲಿ ನಗರದ ಕಡೆಗೆ ಸಂಚರಿಸುತ್ತದೆ.
ಹೊಸ ಎಲಿವೇಟೆಡ್ ಲೂಪ್ ಕೆ.ಆರ್. ಪುರಂ ಮತ್ತು ನಾಗವಾರದಿಂದ ಮೇಖ್ರಿ ವೃತ್ತದ ಕಡೆಗೆ ಹೋಗುವ ವಾಹನಗಳಿಗೆ ಸುಗಮ ಪ್ರಯಾಣವನ್ನು ಒದಗಿಸುವ ನಿರೀಕ್ಷೆಯಿದೆ. ಈ ಹಿಂದೆ ಒಂದು ಲೂಪ್ ಅಸ್ತಿತ್ವದಲ್ಲಿದ್ದರೂ, ಅಡೆತಡೆಯಿಲ್ಲದ ಚಲನೆಯನ್ನು ಖಚಿತಪಡಿಸಿಕೊಳ್ಳಲು ಬಿಡಿಎ ಅದನ್ನು ಅಗಲಗೊಳಿಸಿದೆ.
ಹೆಬ್ಬಾಳ ಫ್ಲೈಓವರ್‌ನಲ್ಲಿ ಸಂಚಾರ ಪೊಲೀಸರು ವಾಹನಗಳನ್ನು ಹಸ್ತಚಾಲಿತವಾಗಿ ನಿಯಂತ್ರಿಸುವ ಅಗತ್ಯವನ್ನು ಇದು ನಿವಾರಿಸುತ್ತದೆ. ಕೆ.ಆರ್. ಪುರಂ ಕಡೆಯಿಂದ ಬರುವ ವಾಹನಗಳು ಈ ಹಿಂದೆ ವಿಮಾನ ನಿಲ್ದಾಣದಿಂದ ನಗರಕ್ಕೆ ಹೋಗುವ ಸಂಚಾರದೊಂದಿಗೆ ವಿಲೀನಗೊಂಡಿದ್ದವು.
ಈ ಯೋಜನೆ ಕಾಮಗಾರಿ ವರ್ಷಗಳಿಂದ ನಡೆಯುತ್ತಿದೆ. ಬಿಡಿಎ ಅಂದಾಜು ಮಾಡಿದ 87 ಕೋಟಿ ರೂಪಾಯಿಗಳ ಲೇನ್ ವರ್ಧನೆ ಯೋಜನೆಯಡಿಯಲ್ಲಿ 2016 ರಲ್ಲಿ ಕೆಲಸಗಳು ಪ್ರಾರಂಭವಾದವು. ಉಕ್ಕಿನ ಫ್ಲೈಓವರ್ ಮತ್ತು ಹೊಸ ಮೆಟ್ರೋ ಜೋಡಣೆಗಳು ಸೇರಿದಂತೆ ಮೂಲಸೌಕರ್ಯ ಪ್ರಸ್ತಾವನೆಗಳು ಅತಿಕ್ರಮಿಸಲ್ಪಟ್ಟಿದ್ದರಿಂದ ಮತ್ತು ಹಳಿಗಳ ಮೇಲೆ ನಿರ್ಮಿಸಲು ರೈಲ್ವೆಯಿಂದ ಬಹು ಅನುಮೋದನೆಗಳ ಅಗತ್ಯದಿಂದ ವಿಳಂಬವಾಯಿತು.
ಹೆಬ್ಬಾಳ ಜಂಕ್ಷನ್ ನ್ನು ಸಂಪೂರ್ಣವಾಗಿ ಸಿಗ್ನಲ್ ರಹಿತವಾಗಿಸಲು ಬಿಡಿಎ ಸಮಗ್ರ ಯೋಜನೆಯನ್ನು ಸಹ ಸಿದ್ಧಪಡಿಸಿದೆ. ಎರಡನೇ ಹಂತದಲ್ಲಿ, ಹೆಚ್ಚಿನ ಪ್ರಯೋಜನಗಳನ್ನು ತರುವ ನಿರೀಕ್ಷೆಯಿದ್ದು, ಕೊಡಿಗೆಹಳ್ಳಿ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳಿಗೆ ಬಿಡಿಎ ಎರಡು ಪಥದ ಲೂಪ್ ನಿರ್ಮಿಸಲಿದೆ. ಇದು ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸುವ ಸಾಧ್ಯತೆಯಿದೆ. ಪ್ರಗತಿಯಲ್ಲಿರುವ ಕೆಲಸವು ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಪರಿಹಾರದಲ್ಲಿ ಸಮಸ್ಯೆ
ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಉದ್ದೇಶಿಸಲಾದ ಲೂಪ್ ಉದ್ಘಾಟನೆಯು ಸಂದರ್ಭದಲ್ಲಿ ನಿನ್ನೆ ಸಂಚಾರ ದಟ್ಟಣೆ ಉಂಟಾಗಿ ಸಾವಿರಾರು ಮಂದಿ ಪರದಾಡಿದ್ದು
ವಾರದ ಆರಂಭ ಕಚೇರಿ ಅವಧಿಯಲ್ಲಿ ಈಗಾಗಲೇ ತೆರೆದಿರುವ ಲೂಪ್ ನ್ನು ಏಕೆ ಮುಚ್ಚಿ ಟ್ರಾಫಿಕ್ ಜಾಮ್ ಉಂಟುಮಾಡುತ್ತಿದ್ದಾರೆ, ಸ್ವಾತಂತ್ರ್ಯ ದಿನ ಮತ್ತು ಭಾನುವಾರದ ನಡುವೆ ಯಾವುದೇ ದಿನದಂದು ಉದ್ಘಾಟನೆಯನ್ನು ಮಾಡಬಹುದಿತ್ತು ಎಂದರು.
ಇನ್ನೊಬ್ಬ ವಾಹನ ಚಾಲಕ, ನಾನು ರ‍್ಯಾಂಪ್ ನ್ನು ಬಳಸಲು ಉತ್ಸುಕನಾಗಿ ಇಲ್ಲಿಗೆ ಬಂದೆ. ಸಾಮಾನ್ಯ ದಿನಗಳಿಗಿಂತ ಹೆಚ್ಚು ಸಂಚಾರ ದಟ್ಟಣೆ ಇದೆ ಎಂದರು.
ಹೊಸ 1.5 ಕಿ.ಮೀ. ಸುರಂಗ ಮಾರ್ಗ
ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚಾರ ಸುಗಮಗೊಳಿಸಲು ಎಸ್ಟೀಮ್ ಮಾಲ್ ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆಯವರೆಗೆ 1.5 ಕಿ.ಮೀ. ಉದ್ದದ ಹೊಸ ಸುರಂಗ ಮಾರ್ಗವನ್ನು ಯೋಜಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿನ ಸಂಚಾರ ದಟ್ಟಣೆಯನ್ನು ಪರಿಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಹೊಸ 1.5 ಕಿ.ಮೀ. ಸುರಂಗ ಮಾರ್ಗದ ಆರ್ಥಿಕ ಪರಿಣಾಮಗಳ ಕುರಿತು ನಾವು ಚರ್ಚಿಸಿದ್ದೇವೆ. ಹೊಸ ಲೂಪ್ ನ್ನು 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎಸ್ಟೀಮ್ ಮಾಲ್ ನಿಂದ ಮೇಖ್ರಿ ವೃತ್ತದ ಕಡೆಗೆ ಇರುವ ಇನ್ನೊಂದು ಲೂಪ್ ನವೆಂಬರ್ ವೇಳೆಗೆ ಸಿದ್ಧವಾಗಲಿದೆ. ಯೋಜನೆಯ ಒಟ್ಟು ವೆಚ್ಚ 300 ಕೋಟಿ ರೂಪಾಯಿ. ಹೊಸ ಲೂಪ್‌ಗಳು ಲೇನ್‌ಗಳ ಸಂಖ್ಯೆಯನ್ನು ಎರಡರಿಂದ ಆರಕ್ಕೆ ಹೆಚ್ಚಿಸುತ್ತವೆ. ನವೆಂಬರ್ ವೇಳೆಗೆ ಇನ್ನೊಂದು ಲೂಪ್ ನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಬಿಡಿಎ ಅಧ್ಯಕ್ಷರು ವಹಿಸಿಕೊಂಡಿದ್ದಾರೆ ಎಂದು ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಡಿ ಕೆ ಶಿವಕುಮಾರ್ ಹೇಳಿದರು.
Advertisement