
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ 2003ರಲ್ಲಿ ನನ್ನ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂದು ಸುಜಾತ ಭಟ್ ದೂರು ನೀಡದ್ದರು. ಅಲ್ಲದೆ ಇದೇ ವಿಚಾರವಾಗಿ ಹಲವು ಮಾಧ್ಯಮಗಳಲ್ಲಿ ಅಲವತ್ತುಕೊಂಡಿದ್ದರು. ಅಲ್ಲದೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ಸುಜಾತ ಭಟ್ ಸುಳ್ಳು ಆರೋಪ ಮಾಡಿದ್ದರೆ ಮತ್ತೆ ಕೆಲವರು ಅವರ ಮಾತು ನಂಬಿ ಹೋರಾಟಕ್ಕೆ ಮುಂದಾಗಿದ್ದರು. ಇದೇ ವಿಚಾರವಾಗಿ ಮಾತನಾಡಿರುವ, ಸಾಮಾಜಿಕ ಹೋರಾಟಗಾರ ಜಯಂತ್ ಇದೀಗ ಸುಜಾತ ಭಟ್ ಅವರ ಮಾತು ಕೇಳಿ ಸತ್ಯವೆಂದು ನಂಬಿ ನಾವು ಮೋಸ ಹೋಗಿದ್ದೇವೆ ಎಂದು ಹೇಳಿದ್ದಾರೆ.
ಸುಜಾತ ಭಟ್ ಅವರ ಮಾತುಗಳನ್ನು ನಾನು ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಸತ್ಯವೆಂದು ನಂಬಿದ್ದೆವು ಎಂದು ಹೇಳಿದರು. ಪಾಪ ವಯಸ್ಸಾದ ಮಹಿಳೆ ಅಂತ ನಾವು ಸಹಾಯಕ್ಕೆ ಮುಂದಾದೆವು. ಆದರೆ ಮಗಳ ವಿಷಯದಲ್ಲಿ ದಾಖಲೆಗಳನ್ನು ತಂದುಕೊಡಿ ಅಂದಾಗ ಅವರು ಉಡುಪಿ ಮತ್ತು ಎಲ್ಲೆಲ್ಲೋ ಸುತ್ತಿದರೇ ಹೊರತು ದಾಖಲೆ ಕೊಡಲಿಲ್ಲ ಎಂದು ಜಯಂತ್ ಹೇಳಿದರು.
Advertisement