
ತುಮಕೂರು: ಕುಂಕುಮ ಇಡುವ ವೇಳೆ ಮಹಿಳೆಯೊಂದಿಗೆ ಅನುಚಿತ ವರ್ತನೆ ತೋರಿಸಿದ ಆರೋಪ ಹಿನ್ನೆಲೆಯಲ್ಲಿ ತುಮಕೂರಿನ ದೇವರಾಯನದುರ್ಗ ಅರ್ಚಕನ ಮೇಲೆ ಯುವಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಅರ್ಚಕ ನಾಗಭೂಷಣಾಚಾರ್ಯಗೆ ಮಹಿಳೆಯರು, ಇಬ್ಬರು ಯುವಕರು ಸೇರಿಕೊಂಡು ಕೋಲುನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಾಲ್ಕು ದಿನದ ಹಿಂದೆಯೇ ಈ ಘಟನೆ ನಡೆದಿದ್ದು ತಡವಾಗ ಬೆಳಕಿಗೆ ಬಂದಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement