ಅಂತರ್ ಮಾಧ್ಯಮ ಕ್ರಿಕೆಟ್ ಟೂರ್ನಿ: ಗರ್ಭಾಶಯ ಕ್ಯಾನ್ಸರ್ ಜಾಗೃತಿ; ಗೆದ್ದ ತಂಡಕ್ಕೆ ಸಿಗಲಿದೆ 10 ಲಕ್ಷ ರೂ ಬಹುಮಾನ!

ಚಾಂಪಿಯನ್ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ, ರನ್ನರ್ ಅಪ್ ತಂಡಕ್ಕೆ 5ಲಕ್ಷ ರೂ. ಸೆಮಿಫೈನಲ್ ಪ್ರವೇಶಿಸಿದ ತಂಡಗಳಿಗೆ ತಲಾ 2.5 ಲಕ್ಷ ರೂಪಾಯಿ ನೀಡಲಾಗುವುದು.
kiran Shetty
ಕಿರಣ್ ಶೆಟ್ಟಿ
Updated on

ಬೆಂಗಳೂರು: ಹೈಪರ್ ಸ್ಪೋರ್ಟ್ಸ್ ಮತ್ತು ವೆಲ್ಫೇರ್ ಟ್ರಸ್ಟ್ ವತಿಯಿಂದ ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್ -2026 ಟೂರ್ನಿಯನ್ನು ಆಯೋಜಿಸಲಾಗಿದೆ.

2026ರ ಜನವರಿ ಅಥವಾ ಫೆಬ್ರವರಿ ಯಲ್ಲಿ ಈ ಟೂರ್ನಿ ನಡೆಯಲಿದ್ದು, ತಂಡಗಳ ನೋಂದಣಿ, ವೇಳಾಪಟ್ಟಿ, ಮೈದಾನಗಳ ವಿವರವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಹೈಪರ್ ಸ್ಪೋರ್ಟ್ಸ್ ಅಂಡ್ ವೆಲ್ಫೇರ್ ಟ್ರಸ್ಟ್ ನ ಮುಖ್ಯಸ್ಥ ಕಿರಣ್ ಶೆಟ್ಟಿ ತಿಳಿಸಿದರು.

ಚಾಂಪಿಯನ್ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ, ರನ್ನರ್ ಅಪ್ ತಂಡಕ್ಕೆ 5ಲಕ್ಷ ರೂ. ಸೆಮಿಫೈನಲ್ ಪ್ರವೇಶಿಸಿದ ತಂಡಗಳಿಗೆ ತಲಾ 2.5 ಲಕ್ಷ ರೂಪಾಯಿ ನೀಡಲಾಗುವುದು. ಈ ಟೂರ್ನಿಯಲ್ಲಿ ಆಡುವ ಮಾಧ್ಯಮ ತಂಡಗಳಿಗೆ ಪ್ರವೇಶ ಉಚಿತವಾಗಿದೆ. ಈ ಟೂರ್ನಿ ಮೂಲಕ ಗರ್ಭಾಶಯ ಕ್ಯಾನ್ಸರ್ ಬಗ್ಗೆ ಜಾಗೃತಿ ಹಾಗೂ ತಡೆಗಟ್ಟುವುದರ ಬಗ್ಗೆ ಸಮಾಜ ಮುಖಿ ಸಂದೇಶವನ್ನು ನೀಡಲಾಗುವುದು ಎಂದರು.

ಇದೇ ವೇಳೆ ಮಾತನಾಡಿದ ಡಾ. ಶಿವಕುಮಾರ್ ಉಪ್ಪಳ, ಭಾರತದಲ್ಲಿ ಮಹಿಳೆಯರನ್ನು ಗರ್ಭಾಶಯ ಕ್ಯಾನ್ಸರ್ ಗಂಭೀರವಾಗಿ ಕಾಡುತ್ತಿದೆ. ಇದನ್ನು ತಡೆಗಟ್ಟಲು ಮುಂಚಿವಾಗಿಯೇ ತಪಾಸಣೆ ಮಾಡಿಸುವುದು ಹಾಗೂ HPV ಲಸಿಕೆ ಹಾಕಿಸುವ ಮೂಲಕ ಸಾಧ್ಯವಾಗುತ್ತದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 7892269215 ಸಂಪರ್ಕಿಸಬಹುದಾಗಿದೆ.

kiran Shetty
ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com