ರಾಜ್ಯ
ಬೆಂಗಳೂರು: ಮತ್ತೆ ಒಂದಾದ ಮಂಜು-ಲೀಲಾ; ಪ್ರೇಯಸಿ ಗಂಡನ ಸೇರಲು ಸಮ್ಮತಿಸಿದ ಪ್ರಿಯಕರ!
ಗಂಡ ಮತ್ತು ಮೂರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಹೋಗಿದ್ದ ಲೀಲಾ ಮತ್ತೆ ಗಂಡನನ್ನು ಸೇರಿಕೊಂಡಿದ್ದಾಳೆ. ಕೋರ್ಟ್ ಮೆಟ್ಟಿಲೇರಿದ ಬಳಿಕ ದಂಪತಿ ಮಕ್ಕಳಿಗಾಗಿ ಮತ್ತೆ ಒಂದಾಗಲು ನಿರ್ಧರಿಸಿದ್ದು ಪ್ರಿಯಕರ ಸಂತು ಕೂಡ ಇದಕ್ಕೆ ಸಮ್ಮತಿ ನೀಡಿದ್ದನು.
ಬೆಂಗಳೂರು: ಗಂಡ ಮತ್ತು ಮೂರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಹೋಗಿದ್ದ ಲೀಲಾ ಮತ್ತೆ ಗಂಡನನ್ನು ಸೇರಿಕೊಂಡಿದ್ದಾಳೆ. ಕೋರ್ಟ್ ಮೆಟ್ಟಿಲೇರಿದ ಬಳಿಕ ದಂಪತಿ ಮಕ್ಕಳಿಗಾಗಿ ಮತ್ತೆ ಒಂದಾಗಲು ನಿರ್ಧರಿಸಿದ್ದು ಪ್ರಿಯಕರ ಸಂತು ಕೂಡ ಇದಕ್ಕೆ ಸಮ್ಮತಿ ನೀಡಿದ್ದಾನೆ. ಕೆಲ ತಿಂಗಳ ಹಿಂದಷ್ಟೇ ಲೀಲಾ ಪತಿ ಮಂಜುನನ್ನು ಬಿಟ್ಟು ಪ್ರಿಯಕರ ಸಂತು ಜೊತೆ ಹೋಗಿದ್ದಳು. ಹೀಗಾಗಿ ಮಂಜು ಮಾಧ್ಯಮಗಳ ಮುಂದೆ ಬಂದು ಪತ್ನಿಗೆ ಮರಳಿ ಬರುವಂತೆ ಮನವಿ ಮಾಡಿದ್ದನು. ಈ ವಿಚಾರವಾಗಿ ಭಾರೀ ಹೈಡ್ರಾಮ ನಡೆದಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಫುಲ್ ಹಲ್ಚಲ್ ಸೃಷ್ಟಿಸಿತ್ತು. ಇದೀಗ ಲೀಲಾ ಮನಸ್ಸು ಬದಲಿಸಿ ಪತಿಯನ್ನ ಸೇರಿದ್ದಾಳೆ. ಮಹಿಳಾ ಹೋರಾಟಗಾರ್ತಿ ಸಂಧ್ಯಾ ಎಂಬುವರು ಮಂಜು-ಲೀಲಾಳನ್ನು ಮತ್ತೆ ಒಂದುಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.


