

ಬೆಂಗಳೂರು: ರಾಜಧಾನಿ ಬೆಂಗಳೂರು ಪ್ರತಿ ದಿನ ಬೆಳಗ್ಗೆ ಮಂಜಿನ ನಗರಿಯಂತಾಗುತ್ತಿದೆ. ದಿನೇ ದಿನೇ ಚಳಿ ಹೆಚ್ಚಾಗುತ್ತಿದೆ. ನಗರವು ಬೆಳಗ್ಗಿನ ಜಾವ ಮಂಜಿನಿಂದ ಆವರಿಸಿಕೊಂಡಿರುವುದು, ಗಾಳಿ ಮಿಶ್ರಿತ ವಾತಾವರಣ, ಹಾಗೂ ಭಾಗಶಃ ಮೋಡ ಕವಿದ ಆಕಾಶ-ಎಲ್ಲವೂ ಸೇರಿ ಬೆಂಗಳೂರು ತನ್ನ ಕ್ಲಾಸಿಕ್ ಚಳಿಗಾಲದ ಹವಾಮಾನವನ್ನು ಮತ್ತೊಮ್ಮೆ ಅನುಭವಿಸಲಿದೆ.
ಮುಂದಿನ ಕೆಲವು ದಿನಗಳಲ್ಲಿ ರಾತ್ರಿಯ ತಾಪಮಾನವು ಸುಮಾರು 15°C ಗೆ ಇಳಿಯುವ ನಿರೀಕ್ಷೆಯಿದೆ, ಆದರೆ ನಿರಂತರ ಶುಷ್ಕ ಹವಾಮಾನದಿಂದಾಗಿ ಹಗಲಿನ ತಾಪಮಾನ ಹೆಚ್ಚಲಿದೆ. ದಿತ್ವಾ ಚಂಡಮಾರುತದ ಪ್ರಭಾವದಿಂದ ನಗರವು ಅನುಭವಿಸಿದ ಶೀತ ಹವಾಮಾನದಿಂದ ಅಸಾಮಾನ್ಯ ತಾಪಮಾನ ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ.
ಬೆಂಗಳೂರು ಹಗಲಿನಲ್ಲಿ ಬೇಸಿಗೆಯಂತೆ ತಾಪಮಾನ ಮತ್ತು ರಾತ್ರಿ ತೀರಾ ತಂಪಾದ ವಾತಾವರಣವಿರಲಿದೆ. ಗರಿಷ್ಠ ತಾಪಮಾನವು 29°C ಅನ್ನು ತಲುಪುತ್ತಿದೆ, ಆದರೆ ವಾರದುದ್ದಕ್ಕೂ ಕನಿಷ್ಠ ತಾಪಮಾನವು 15°C ಯಷ್ಟು ಕಡಿಮೆಯಾಗುವ ಮುನ್ಸೂಚನೆ ಇದೆ.
ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆಯ (IMD) ಹಿರಿಯ ಹವಾಮಾನಶಾಸ್ತ್ರಜ್ಞ ಸಿ.ಎಸ್. ಪಾಟೀಲ್, ನಗರಕ್ಕೆ ಸಂಬಂಧಿಸಿದಂತೆ, ಮುಂದಿನ ಏಳು ದಿನಗಳಲ್ಲಿ ಸ್ಪಷ್ಟ ಆಕಾಶವನ್ನು ಸೂಚಿಸುತ್ತದೆ ಎಂದು ಹೇಳಿದರು. ನಗರದಲ್ಲಿ ರಾತ್ರಿ ತಾಪಮಾನವು ಸುಮಾರು 15 ರಿಂದ 17 ಡಿಗ್ರಿ ಇರಲಿದೆ.
ಶುಷ್ಟ ಹವಾಮಾನದಿಂದ ಹಗಲಿನ ತಾಪಮಾನವು ಬೆಚ್ಚಗಿರುತ್ತದೆ ಎಂದು ಅವರು ಹೇಳಿದರು. ಕಡಿಮೆ ತೇವಾಂಶದಿಂದಾಗಿ, ತಂಪಾಗಿಸುವಿಕೆ ಮತ್ತು ಬಿಸಿಯಾಗುವ ಪ್ರಕ್ರಿಯೆ ವೇಗವಾಗಿರುತ್ತವೆ" ಎಂದು ಅವರು ವಿವರಿಸಿದರು,
ಐಎಂಡಿ ದತ್ತಾಂಶದ ಪ್ರಕಾರ, ಮಂಗಳವಾರ ಗರಿಷ್ಠ ತಾಪಮಾನವು 29.2°C ಮತ್ತು ಬುಧವಾರ 27.6°C ದಾಖಲಾಗಿದೆ. ಮಂಗಳವಾರ ಕನಿಷ್ಠ ತಾಪಮಾನವು 16.1°C ಮತ್ತು ಬುಧವಾರ 17.5°C ಇತ್ತು.
ಮುಂದಿನ ಒಂದು ವಾರ ಕರ್ನಾಟಕದಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ಹೆಚ್ಚಿನ ಜಿಲ್ಲೆಗಳಲ್ಲಿ ಆಕಾಶವು ಸ್ಪಷ್ಟವಾಗಿರುತ್ತದೆ ಎಂದು ಪಾಟೀಲ್ ತಿಳಿಸಿದ್ದಾರೆ. ಉತ್ತರದ ಒಳನಾಡಿನ ಹಲವು ಜಿಲ್ಲೆಗಳಲ್ಲಿ ರಾತ್ರಿ ತಾಪಮಾನವು 10 ರಿಂದ 12°C ಗೆ ಇಳಿಯಬಹುದು ಮತ್ತು ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಕಲಬುರಗಿ ಪ್ರದೇಶದ ಸುತ್ತಲೂ 10°C ಗಿಂತ ಕಡಿಮೆಯಾಗಬಹುದು ಎಂದು ಐಎಂಡಿ ಮಾಹಿತಿ ನೀಡಿದೆ.
Advertisement