

ಬೆಂಗಳೂರು: ಮನೆಯಲ್ಲಿ ಮುದ್ದಾಗಿ ಸಾಕಿದ್ದ ಗಿಳಿಯನ್ನ ರಕ್ಷಿಸಲು ಹೋಗಿ ಯುವಕ ಸಾವನ್ನಪ್ಪಿರುವ ಘಟನೆ ಗಿರಿನಗರದ ಅಪಾರ್ಟ್ಮೆಂಟ್ ಬಳಿ ನಡೆದಿದೆ.
ಅಪಾರ್ಟ್ಮೆಂಟ್ ಒಳಗಿನ ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿದ್ದ ಫಾರಿನ್ ಗಿಳಿಯನ್ನ ರಕ್ಷಿಸಲು ಹೋಗಿ ವಿದ್ಯುತ್ ಶಾಕ್ ಹೊಡೆದು 32 ವರ್ಷದ ಅರುಣ್ ಕುಮಾರ್ ಸಾವನ್ನಪ್ಪಿದ್ದಾನೆ. ಮಂಡ್ಯದ ನಾಗಮಂಗಲದ ವೀರಭದ್ರ ಲೇಔಟ್‌ನ ನಿವಾಸಿ ಅರುಣ್ ಕುಮಾರ್, ತನ್ನ ಸಂಬಂಧಿ ಲಿಖಿತಾ ನಡೆಸುತ್ತಿದ್ದ ಸಣ್ಣ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದರು, ಅವರ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಲಿಖಿತಾ ಒಂದು ವರ್ಷದ ಹಿಂದೆ ಮಕಾವ್ ಖರೀದಿಸಿದ್ದರು.
ಬೆಳಿಗ್ಗೆ 10.30 ರ ಗಿಳಿ ಮನೆಯಿಂದ ತಪ್ಪಿಸಿಕೊಂಡು ಅಪಾರ್ಟ್ಮೆಂಟ್ ಒಳಗಿನ ಹೈ ಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿತ್ತು, ಈ ವೇಳೆ ಗಿಳಿ ರಕ್ಷಣೆ ಮಾಡಲು ಅರುಣ್ ಕುಮಾರ್ ಮುಂದಾಗಿದ್ದಾರೆ. ಸ್ಟೀಲ್ ಪೈಪ್ಗೆ ಕಡ್ಡಿ ಕಟ್ಟಿಕೊಂಡು ಕಾಪೌಂಡ್ ಮೇಲೆ ನಿಂತು ಗಿಳಿ ಓಡಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ 66 ಸಾವಿರ ಕೆವಿ ವಿದ್ಯುತ್ ವೈರ್ ನಿಂದ ಶಾಕ್ ಹೊಡೆದು ಅರುಣ್ ಕುಮಾರ್ ಕೆಳಗೆ ಬಿದ್ದಿದ್ದಾರೆ. ಅರುಣ್ ಕಾಂಪೌಂಡ್ನಿಂದ ಕೆಳಗೆ ಬೀಳುತ್ತಿದ್ದಂತೆ, ಸ್ಥಳೀಯರು ತಕ್ಷಣವೇ ಅರುಣ್ ಕುಮಾರ್ ಅವರನ್ನ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ.
ಅರುಣ್ ಕುಮಾರ್ ಸಾವಿನ ನಂತರ, ಪಕ್ಷಿ ಕಂಬದ ಮೇಲೆ ಕುಳಿತೇ ಇತ್ತು ಮತ್ತು ನಂತರ ಅದನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಬೆಸ್ಕಾಂ, ಕೆಇಬಿ, ಗಿರಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement