

ಬೆಂಗಳೂರು: ಶೀಘ್ರದಲ್ಲೇ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರು ಶನಿವಾರ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗಾಗಿ ಮೂರನೇ ಶಕ್ತಿಯನ್ನು ತರಲು ಸಿದ್ಧನಾಗಿದ್ದೇನೆ, ಪಕ್ಷದ ಚಿಹ್ನೆ ನಿರ್ಧರಿಸಲು ಭಾನುವಾರ ಕಲಬುರಗಿಯಲ್ಲಿ ಸಭೆ ನಡೆಸಲಾಗುವುದು. ನಂತರ ಮೈಸೂರು ಮತ್ತು ಬೆಳಗಾವಿಯಲ್ಲಿ ಸಮಾನ ಮನಸ್ಕ ಜನರ ಸಭೆಗಳನ್ನು ನಡೆಸಲಾಗುವುದು. ನಮ್ಮ ಹೊಸ ಪಕ್ಷ ಬಸವಣ್ಣ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರ ಸಿದ್ಧಾಂತವನ್ನು ಅಳವಡಿಸಿಕೊಳ್ಳಲಿದೆ ಎಂದು ಹೇಳಿದರು.
ರಾಜ್ಯದ ಯಾವುದೇ ರಾಜಕೀಯ ಪಕ್ಷವು ದಲಿತ ಮತ್ತು ಮುಸ್ಲಿಂ ಮುಖ್ಯಮಂತ್ರಿಯಾಗಬೇಕೆಂದು ಹೇಳಲು ಸಿದ್ಧರಿಲ್ಲ. ಐದು ವರ್ಷಗಳ ಕಾಲ ಪರ್ಯಾಯ ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡಂತೆ ಕಾಣುತ್ತಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ನಡುವಿನ ಕುರ್ಚಿ ಕಿತ್ತಾಟದ ವಿಚಾರದಲ್ಲಿ ಕರ್ನಾಟಕ ಇಬ್ಬಾಗ ಆಗುತ್ತದೆ, ಇವತ್ತು ರಾಜ್ಯ ಸರ್ಕಾರ ಸಂಪೂರ್ಣ ವೈಪಲ್ಯವಾಗಿದೆ. ಒಂದೊಂದು ವಸ್ತುಗಳ ಬೆಲೆ ಹೆಚ್ಚಳವಾಗಿದೆ. ನಮ್ಮ ಹೊಸ ಪಕ್ಷಕ್ಕೆ ಎಲ್ಲಾರ ಸಹಕಾರ ಬೇಕು. ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರಗಳು ಕೆಲಸ ಮಾಡುತ್ತಿಲ್ಲ. ನಾನು, ನೀನು, ಎನ್ನುವ ಹೋರಾಟ ನಡೆಯುತ್ತಿದೆ.
ಬೆಳಗಾವಿಯಲ್ಲಿ ಡಿನ್ನರ್ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಕರ್ನಾಟಕ ಎರಡು ಭಾಗವಾಗುತ್ತದೆ. ಹೀಗಾಗಿ ಜನರಿಗಾಗಿ ನಾವು ಒಂದು ಪಕ್ಷವನ್ನ ಸ್ಥಾಪನೆ ಮಾಡುತ್ತಿದ್ದೇವೆ. ಎಲ್ಲಾ ಪಕ್ಷಗಳು ನಮ್ಮನ್ನ ಬಳಸಿಕೊಳ್ಳಕೊಂಡರು, ಆದರೆ, ಏನು ಮಾಡಲಿಲ್ಲ ಎಂದು ಕಿಡಿಕಾರಿದರು.
Advertisement