

ಬೆಂಗಳೂರು: ಕರ್ನಾಟಕದ ಗ್ರಾಮೀಣ ಪ್ರದೇಶದ ಮಹಿಳೆಯರು ನಗರ ಪ್ರದೇಶಗಳ ಮಹಿಳೆಯರು ಮತ್ತು ಎರಡೂ ಕಡೆಯ ಪುರುಷರಿಗಿಂತ ಅನುಪಾತದಲ್ಲಿ ಉತ್ತಮ ಉದ್ಯೋಗದಲ್ಲಿದ್ದಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ತಿಳಿಸಿದೆ.
ಶುಕ್ರವಾರ ಬಿಡುಗಡೆಯಾದ ಹ್ಯಾಂಡ್‌ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್ ಆನ್ ಇಂಡಿಯನ್ ಸ್ಟೇಟ್ಸ್ 2024-25 ವರದಿ ಪ್ರಕಾರ, ಪ್ರತಿ 1,000 ಗ್ರಾಮೀಣ ಮಹಿಳೆಯರಲ್ಲಿ ಕೇವಲ 9 ಜನರು ಮಾತ್ರ ನಿರುದ್ಯೋಗಿಗಳಾಗಿದ್ದರು. 2022–23ರಲ್ಲಿ 1,000 ಕ್ಕೆ 13 ಆಗಿತ್ತು ಎಂದು ಹೇಳಿದೆ. ಅದೇ ಅವಧಿಗಳಲ್ಲಿ ಪುರುಷರ ನಿರುದ್ಯೋಗ ಅನುಪಾತವು ಕ್ರಮವಾಗಿ 25 ಮತ್ತು 17 ಆಗಿತ್ತು.
ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಒಟ್ಟಾರೆ ನಿರುದ್ಯೋಗ ದರವು 2023–24ರಲ್ಲಿ 19 ಮತ್ತು 2022–23ರಲ್ಲಿ 15 ಎಂದು ದಾಖಲಾಗಿದೆ. ಇದು ಕ್ರಮವಾಗಿ ರಾಷ್ಟ್ರೀಯ ಸರಾಸರಿ 25 ಮತ್ತು 24 ಕ್ಕಿಂತ ಕಡಿಮೆಯಾಗಿದೆ. ನಗರ ಪ್ರದೇಶಗಳಲ್ಲಿ, 2023–24ರಲ್ಲಿ ಮಹಿಳೆಯರ ನಿರುದ್ಯೋಗ ದರವು 44 ಆಗಿತ್ತು ಮತ್ತು 2022–23ರಲ್ಲಿ ಅದು 51 ಆಗಿತ್ತು. 2023–24ರ ಆರ್ಥಿಕ ವರ್ಷದಲ್ಲಿ ನಗರದ ಪುರುಷ ನಿರುದ್ಯೋಗ ದರವು 41 ಮತ್ತು 2022–23ರಲ್ಲಿ ಅದು 38 ಆಗಿತ್ತು ಎಂದು ಆರ್‌ಬಿಐ ವರದಿ ತಿಳಿಸಿದೆ. 2023–24ರಲ್ಲಿ ಮತ್ತು 2022–23ರಲ್ಲಿ ನಗರ ಪ್ರದೇಶಗಳಲ್ಲಿ ಒಟ್ಟಾರೆ ನಿರುದ್ಯೋಗ ದರವು 42 ಆಗಿತ್ತು. 2023–24ರಲ್ಲಿ ಅಖಿಲ ಭಾರತ ನಿರುದ್ಯೋಗ ದರವು 51 ಮತ್ತು 2022–23ರಲ್ಲಿ 54 ಆಗಿತ್ತು.
'ಕರ್ನಾಟಕದಲ್ಲಿ ನಿರುದ್ಯೋಗವಿದೆ. ಆದರೆ, ಇತರ ರಾಜ್ಯಗಳು ಮತ್ತು ಭಾರತಕ್ಕೆ ಹೋಲಿಸಿದರೆ, ಅದು ಕಡಿಮೆ. ಗ್ರಾಮೀಣ ಮಹಿಳೆಯರ ಉದ್ಯೋಗ ದರದಲ್ಲಿನ ಏರಿಕೆ ಸಕಾರಾತ್ಮಕ ಸೂಚನೆಯಾಗಿದೆ. ಆದರೆ, ನಗರದ ಅಂಕಿಅಂಶಗಳನ್ನು ಗಮನಿಸಿದಾಗ ಇದು ಕಳವಳಕಾರಿಯಾಗಿದೆ. ಗೋವಾ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಒಟ್ಟಾರೆ ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗ ದರಗಳು ಇನ್ನೂ ಕಡಿಮೆಯಾಗಿದೆ' ಎಂದು ರಾಜ್ಯ ಸರ್ಕಾರದ ಹಣಕಾಸು ತಜ್ಞರೊಬ್ಬರು ಹೇಳಿದ್ದಾರೆ.
ಒಟ್ಟು ರಾಜ್ಯ ದೇಶೀಯ ಉತ್ಪನ್ನ (GSDP) ಗಾತ್ರದಲ್ಲಿ ಕರ್ನಾಟಕವು ನಾಲ್ಕನೇ ಸ್ಥಾನದಲ್ಲಿದೆ. 2024–25ನೇ ಸಾಲಿಗೆ ಕರ್ನಾಟಕದ GSDP (ಪ್ರಸ್ತುತ ಬೆಲೆಗಳಲ್ಲಿ) 28,83,903.23 ಕೋಟಿ ರೂ. ಆಗಿದೆ. 2023–24ರಲ್ಲಿ ಇದು 25,57,241.35 ಕೋಟಿ ರೂ. ಆಗಿತ್ತು. 2024–25ನೇ ಹಣಕಾಸು ವರ್ಷದಲ್ಲಿ ಶೇ 12.8 ರಷ್ಟು ಒಟ್ಟಾರೆ GSDP ಬೆಳವಣಿಗೆ ಕಂಡಿದ್ದು, ತಮಿಳುನಾಡು (ಶೇ 16) ನಂತರದ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.
ಉತ್ತರ ಪ್ರದೇಶವು ಶೇ 12.7 ನೊಂದಿಗೆ ಕರ್ನಾಟಕಕ್ಕಿಂತ ಸ್ವಲ್ಪ ಹಿಂದಿದೆ ಮತ್ತು ಮಹಾರಾಷ್ಟ್ರವು ಶೇ 11.7 ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಗುಜರಾತ್‌ನ GSDP ಬೆಳವಣಿಗೆಯ ದರವು ಶೇ 10.2 ರಷ್ಟು ದಾಖಲಾಗಿದೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು, ಇತರ ರಾಜ್ಯಗಳು ಒಟ್ಟಾರೆ ನಗರದ ಉದ್ಯೋಗ ವಿಭಾಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರೂ, ಕರ್ನಾಟಕದ ಜನಸಂಖ್ಯೆಯನ್ನು ಸಹ ಲೆಕ್ಕ ಹಾಕಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಪುರುಷರ ಉದ್ಯೋಗ ಕುಸಿತಕ್ಕೆ ಕಾರಣವೇನು ಎಂಬುದನ್ನು ಅಧ್ಯಯನ ಮಾಡಬೇಕಾಗಿದೆ ಎಂದು ಅಧಿಕಾರಿ ಹೇಳಿದರು.
ಕೃಷಿ ವಲಯ ಮತ್ತು ಸ್ವಯಂ ಉದ್ಯೋಗದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಉದ್ಯೋಗ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮಗಳು ಮಹಿಳೆಯರಿಗೆ ಉದ್ಯೋಗ ಪಡೆಯಲು ಅಥವಾ ಉಳಿಸಿಕೊಳ್ಳಲು ಸಹಾಯ ಮಾಡುತ್ತಿವೆ. ಆದಾಗ್ಯೂ, ನಗರ ಪ್ರದೇಶಗಳಲ್ಲಿ, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗವನ್ನು ತೊರೆಯುತ್ತಿದ್ದಾರೆ, ಆದ್ದರಿಂದ ಮಹಿಳೆಯರು ಉದ್ಯೋಗದಲ್ಲಿ ಉಳಿಯಲು ಮತ್ತು ಕೆಲಸದಿಂದ ಹೊರಗುಳಿಯುವುದನ್ನು ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಹೇಳಿದರು.
ರಾಜ್ಯದ ಒಟ್ಟಾರೆ ನಿರುದ್ಯೋಗ ದರವು ಕಳವಳಕಾರಿಯಾಗಿದೆ. 'ಈ ವರದಿಯು 2023–24ರವರೆಗೆ ಮಾತ್ರ. ಆದರೆ, ಸ್ಪಷ್ಟ ಚಿತ್ರಣಕ್ಕಾಗಿ 2024–25 ಮತ್ತು 2025–26ರ ವಿಶ್ಲೇಷಣೆ ಅಗತ್ಯವಿದೆ. ಇದಕ್ಕೆ ಕಾರಣ ಏನೆಂಬುದು ಇನ್ನೂ ಸಂಪೂರ್ಣವಾಗಿ ತಿಳಿಯದಿದ್ದರೂ, ಕೆಲವು ಸೂಚಕಗಳಲ್ಲಿ ತಾಂತ್ರಿಕ ಹಸ್ತಕ್ಷೇಪಗಳು, ಹೂಡಿಕೆಗಳಲ್ಲಿನ ಕುಸಿತ ಮತ್ತು ಸುಂಕದ ಸಮಸ್ಯೆ ಸೇರಿವೆ' ಎಂದು ಅವರು ಹೇಳಿದರು.
Advertisement