Dengue fever- ಆರೋಗ್ಯ ಇಲಾಖೆಯ ಬಿಗಿಕ್ರಮ: 2025 ರಲ್ಲಿ ಕರ್ನಾಟಕದಲ್ಲಿ ಡೆಂಗ್ಯೂ ಸಾವು ಶೂನ್ಯ

ಆರೋಗ್ಯ ಸಚಿವಾಲಯ ಸಲ್ಲಿಸಿದ ಅಂಕಿಅಂಶಗಳು 2025 ರಲ್ಲಿ ನವೆಂಬರ್ ವರೆಗೆ 6,759 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.
Representational image
ಸಾಂದರ್ಭಿಕ ಚಿತ್ರ
Updated on

ಮಂಗಳೂರು: 2025ನೇ ವರ್ಷ ಮುಗಿಯುತ್ತಾ ಬಂದಿದೆ. ಕಳೆದ ತಿಂಗಳು ನವೆಂಬರ್ ವರೆಗೆ ರಾಜ್ಯದಲ್ಲಿ ಈ ವರ್ಷ ಒಂದೂ ಒಂದು ಡೆಂಗ್ಯೂ ಜ್ವರದ ಸಾವು ವರದಿಯಾಗಿಲ್ಲ. ಇದು ಹಲವಾರು ವರ್ಷಗಳ ನಂತರ ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಮುಖ ಸಾಧನೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬುಧವಾರ ರಾಜ್ಯಸಭೆಯ ಮುಂದೆ ಈ ಅಂಕಿಅಂಶ ಮಂಡಿಸಿತು.

ಸಚಿವಾಲಯವು ಸಲ್ಲಿಸಿದ ಅಂಕಿಅಂಶಗಳು 2025 ರಲ್ಲಿ ನವೆಂಬರ್ ವರೆಗೆ 6,759 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಆದರೆ ಯಾವುದೇ ಸಾವು ದಾಖಲಾಗಿಲ್ಲ ಎಂದು ತೋರಿಸುತ್ತವೆ. 2024 ಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಸುಮಾರು ಶೇಕಡಾ 80ರಷ್ಟು ಇಳಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.

ಕಳೆದ ಆರು ವರ್ಷಗಳ ಡೆಂಗ್ಯೂ ಪ್ರಕರಣ ನೋಡಿದರೆ 2025 ರಲ್ಲಿ ಕರ್ನಾಟಕದ ಸುಧಾರಣೆಯ ಪ್ರಮಾಣ ಎಷ್ಟು ಎಂಬುದನ್ನು ತೋರಿಸುತ್ತದೆ. 2019 ರಲ್ಲಿ, ರಾಜ್ಯವು 16,986 ಪ್ರಕರಣಗಳು ಮತ್ತು 13 ಸಾವುಗಳನ್ನು ವರದಿ ಮಾಡಿದೆ. ಇದರ ನಂತರ 2020 ರಲ್ಲಿ ತೀವ್ರ ಇಳಿಕೆ ಕಂಡುಬಂದಿದ್ದು, 3,823 ಪ್ರಕರಣಗಳು ಮತ್ತು ಯಾವುದೇ ಸಾವುಗಳು ದಾಖಲಾಗಿಲ್ಲ.

Representational image
ಡೆಂಗ್ಯೂ ಜ್ವರ: ಲಕ್ಷಣಗಳು, ಚಿಕಿತ್ಸೆ ಮತ್ತು ತಡೆಗಟ್ಟುವ ಸಲಹೆಗಳು

2021 ರಲ್ಲಿ 7,393 ಪ್ರಕರಣಗಳು ಮತ್ತು ಏಳು ಸಾವುಗಳು ವರದಿಯಾಗಿದ್ದವು. ರೋಗದ ಹೊರೆ ಮತ್ತೆ ಏರಿಕೆಯಾಗಿ 2022 ರಲ್ಲಿ, ಅಂಕಿಅಂಶಗಳು 9,889 ಪ್ರಕರಣಗಳು ಮತ್ತು ಒಂಬತ್ತು ಸಾವುಗಳನ್ನು ಕಂಡಿದ್ದವು. 2023 ರಲ್ಲಿ ಡೆಂಗ್ಯೂ ಪ್ರಕರಣಗಳು 19,300 ಕ್ಕೆ ಏರಿಕೆಯಾಗಿ 11 ಸಾವುಗಳು ಮತ್ತು 2024 ರಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. 32,886 ಪ್ರಕರಣಗಳು ಮತ್ತು 27 ಸಾವುಗಳು ವರದಿಯಾಗಿದ್ದವು.

ರಾಷ್ಟ್ರೀಯ ಮಟ್ಟದಲ್ಲಿ, ಭಾರತವು 2025 ರಲ್ಲಿ ಇಲ್ಲಿಯವರೆಗೆ 1,13,440 ಡೆಂಗ್ಯೂ ಪ್ರಕರಣಗಳು ಮತ್ತು 94 ಸಾವುಗಳನ್ನು ಕಂಡಿವೆ. ಕರ್ನಾಟಕವು ಡೆಂಗ್ಯೂ ಸೋಂಕು ಪ್ರಕರಣದಲ್ಲಿ ಆರನೇ ಸ್ಥಾನದಲ್ಲಿದೆ. ಈ ವರ್ಷ ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳದಂತಹ ರಾಜ್ಯಗಳು ಕ್ರಮವಾಗಿ 12, 13 ಮತ್ತು 49 ಸಾವುಗಳನ್ನು ಕಂಡಿವೆ.

ಡೆಂಗ್ಯೂ ಫಲಿತಾಂಶಗಳಲ್ಲಿನ ಒಟ್ಟಾರೆ ಸುಧಾರಣೆಗೆ ಆರೋಗ್ಯ ಇಲಾಖೆಯ ತೀವ್ರ ಕಣ್ಗಾವಲು, ಆರಂಭಿಕ ರೋಗನಿರ್ಣಯ, ಸಮಗ್ರ ವೆಕ್ಟರ್ ನಿರ್ವಹಣೆ, ತೀವ್ರ ಜಾಗೃತಿ ಅಭಿಯಾನಗಳು ಮತ್ತು ಎಲ್ಲಾ ರೋಗಿಗಳಿಗೆ ಉಚಿತ ಡೆಂಗ್ಯೂ ಪರೀಕ್ಷೆ ಕಾರಣ ಎಂದು ಕೇಂದ್ರವು ಹೇಳಿದೆ.

ರಾಷ್ಟ್ರವ್ಯಾಪಿ, 2024 ರ ಇದೇ ಅವಧಿಗೆ ಹೋಲಿಸಿದರೆ ಡೆಂಗ್ಯೂ ಪ್ರಕರಣಗಳು ಸುಮಾರು ಶೇಕಡಾ 49 ರಷ್ಟು ಮತ್ತು ಸಾವುಗಳು ಶೇಕಡಾ 64ಕ್ಕಿಂತ ಕಡಿಮೆಯಾಗಿದೆ. 2025 ರಲ್ಲಿ ಪ್ರಕರಣಗಳ ಸಾವಿನ ಪ್ರಮಾಣ ಶೇಕಡಾ 0.08 ಕ್ಕೆ ಇಳಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com