

ಬೆಳಗಾವಿ: ರಜೆಯ ಮೇಲೆ ಮನೆಗೆ ಮರಳಿದ್ದ ಯುವ ಸೈನಿಕನೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೋರಗಲ್ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಯಶ್ ಆರ್ ಚೌಗಾಲ (21) ಎಂದು ಗುರ್ತಿಸಲಾಗಿದೆ. ಏಳು ತಿಂಗಳ ಹಿಂದೆ ಭಾರತೀಯ ಸೇನೆಗೆ ಆಯ್ಕೆಯಾಗಿದ್ದ ಅವರು, ತರಬೇತಿ ಪಡೆಯುತ್ತಿದ್ದರು. ಆರು ತಿಂಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ, ಇತ್ತೀಚೆಗೆ ರಜೆಯ ಮೇಲೆ ತಮ್ಮ ಊರಿಗೆ ಆಗಮಿಸಿದ್ದರು.
ಬೆಳಗಿನ ನಡಿಗೆಗಾಗಿ ಹೊರಗೆ ಹೋಗಿದ್ದಾಗ ಅಪರಿಚತ ವಾಹನ ಡಿಕ್ಕಿ ಹೊಡೆದು, ಪರಾರಿಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಘಟನೆ ಬೆನ್ನಲ್ಲೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ನಡುವೆ ಗ್ರಾಮಸ್ಥರು ತನಿಖೆಗೆ ಆಗ್ರಹಿಸಿದ್ದಾರೆ.
ಇನ್ನು ಯಶ್ ಅವರು ಪಾರ್ಥೀವ ಶರೀರದ ಮೆರವಣಿಗೆಯನ್ನು ಹುಟ್ಟೂರಿನಲ್ಲಿ ನಡೆಸಲಾಗಿದ್ದು, ಸಾವಿರಾರು ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು. ಬಳಿಕ ಸೇನಾ ಗೌರವಗಳೊಂದಿಗೆ, ಅಂತಿಮ ನಮನ ಸಲ್ಲಿಸಿ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ.
Advertisement