ಹಿನ್ನೋಟ 2025: ನಮ್ಮನ್ನಗಲಿದ ಗಣ್ಯರು, ಪ್ರಮುಖರು

ಸಾವು ಎಂತಹ ವ್ಯಕ್ತಿ, ಸಮಾಜವನ್ನೇ ಅಲ್ಲಾಡಿಸಿ ಬಿಡುತ್ತದೆ. ಈ ವರ್ಷವಂತೂ ದೇಶದಲ್ಲಿ ಹಲವು ಗಣ್ಯರು, ಸಾಧಕರು ನಮ್ಮನಗಲಿದ್ದಾರೆ.
ಈ ವರ್ಷ ನಮ್ಮನಗಲಿದ ಗಣ್ಯರು.
ಈ ವರ್ಷ ನಮ್ಮನಗಲಿದ ಗಣ್ಯರು.

ಸಾವು ಎಂತಹ ವ್ಯಕ್ತಿ, ಸಮಾಜವನ್ನೇ ಅಲ್ಲಾಡಿಸಿ ಬಿಡುತ್ತದೆ. ಈ ವರ್ಷವಂತೂ ದೇಶದಲ್ಲಿ ಹಲವು ಗಣ್ಯರು, ಸಾಧಕರು ನಮ್ಮನಗಲಿದ್ದಾರೆ. ರಾಷ್ಟ್ರ ರಾಜಕಾರಣ, ಸಿನಿಮಾ ಹಾಗೂ ಇತರೆ ವಲಯಗಳಲ್ಲಿ ಮೇರು ವ್ಯಕ್ತಿಗಳ ಸಾವು ಸಾಕಷ್ಟು ನೋವು ತಂದಿದೆ. ಈ ವರ್ಷ ಇಹಲೋಕ ತ್ಯಜಿಸಿದವರು ಯಾರು ಎಂಬುದರ ಸಂಕ್ಷಿಪ್ತ ವಿವರ ಇಲ್ಲಿವೆ...

ಬಿ. ಸರೋಜಾ ದೇವಿ

B. Saroja Devi
ಬಿ. ಸರೋಜಾ ದೇವಿ

ಕನ್ನಡ ಚಿತ್ರರಂಗದ ದಿಗ್ಗಜ ನಟಿ ಬಿ. ಸರೋಜಾ ದೇವಿ ಅವರು ಜುಲೈ 14ರಂದು ಬೆಂಗಳೂರಿನಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.

ಎಂ.ಎಸ್. ಉಮೇಶ್

M.S. Umesh
ಎಂ.ಎಸ್. ಉಮೇಶ್

ಆನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ ಎಂ.ಎಸ್. ಉಮೇಶ್ ಅವರು ನವೆಂಬರ್ 30ರಂದು ಬೆಂಗಳೂರಿನಲ್ಲಿ ನಿಧನರಾದರು.

ಹರೀಶ್​ ರಾಯ್

Harish Roy
ಹರೀಶ್​ ರಾಯ್

ಬ್ಲಾಕ್​​​​ಬಸ್ಟರ್​ 'ಕೆಜಿಎಫ್'​ ಮೂಲಕ 'ಕೆಜಿಎಫ್​​​ ಚಾಚಾ' ಎಂದೇ ಜನಪ್ರಿಯರಾಗಿದ್ದ ನಟ ಹರೀಶ್​ ರಾಯ್ 4ನೇ ಹಂತದ ಥೈರಾಯ್ಡ್ ಕ್ಯಾನ್ಸರ್ ವಿರುದ್ಧ ಹೋರಾಡಿ ಬೆಂಗಳೂರಿನಲ್ಲಿ ನಿಧನರಾದರು. ಹರೀಶ್ ರಾಯ್ ಅವರಿಗೆ 55 ವರ್ಷ ವಯಸ್ಸಾಗಿತ್ತು.

ರಾಜು ತಾಳಿಕೋಟೆ

Raju Talikote
ರಾಜು ತಾಳಿಕೋಟೆ

ಖ್ಯಾತ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಅವರು ಅಕ್ಟೋಬರ್ 13ರಂದು ತಮ್ಮ 62ನೇ ವಯಸ್ಸಿನಲ್ಲಿ ನಿಧನರಾದರು.

ಯಶವಂತ ಸರದೇಶಪಾಂಡೆ

Yashwant Sardeshpande
ಯಶವಂತ ಸರದೇಶಪಾಂಡೆ

ರಂಗಭೂಮಿ ಕಲಾವಿದ, ಸೂಪರ್​ ಹಿಟ್ 'ರಾಮ ಶಾಮ ಭಾಮ‌' ಸಿನಿಮಾ ಖ್ಯಾತಿಯ ಹಾಸ್ಯ ನಟ ಯಶವಂತ್ ಸರದೇಶಪಾಂಡೆ ಹೃದಯಾಘಾತದಿಂದ ಸೆಪ್ಟಂಬರ್​​ 29ರಂದು ಕೊನೆಯುಸಿರೆಳೆದರು.

ಬ್ಯಾಂಕ್ ಜನಾರ್ಧನ್

Bank Janardhan
ಬ್ಯಾಂಕ್ ಜನಾರ್ಧನ್

ವಯೋಸಹಜ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದ ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರು, ಏಪ್ರಿಲ್ 14ರಂದು ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು.

ರಾಕೇಶ್ ಪೂಜಾರಿ

Rakesh Poojary
ರಾಕೇಶ್ ಪೂಜಾರಿ

ಜನಪ್ರಿಯ ಕನ್ನಡ, ತುಳು ನಟ ಮತ್ತು ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿಜೇತ ರಾಕೇಶ್ ಪೂಜಾರಿ, ಮೇ 11ರಂದು ತಮ್ಮ 34ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಗಡ್ಡಪ್ಪ

Gaddappa
ಗಡ್ಡಪ್ಪ

ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಅಲಿಯಾಸ್​ ಚನ್ನೇಗೌಡ ಅವರು ನವೆಂಬರ್​ 12ರಂದು ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಶ್ರೀಧರ್‌ ನಾಯಕ್‌

Sridhar Nayak
ಶ್ರೀಧರ್‌ ನಾಯಕ್‌

'ಪಾರು' ಸೀರಿಯಲ್ ಖ್ಯಾತಿಯ ನಟ ಶ್ರೀಧರ್‌ ನಾಯಕ್‌ ಮೇ 26ರಂದು ನಿಧನರಾದರು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸರಿಗಮ ವಿಜಿ

Sarigama Viji
ಸರಿಗಮ ವಿಜಿ

ಕನ್ನಡದ ಹಿರಿಯ ನಟ ಮತ್ತು ರಂಗಭೂಮಿ ಕಲಾವಿದ ಸರಿಗಮ ವಿಜಿ ಅವರು ಜನವರಿ 15ರಂದು ತಮ್ಮ 76ನೇ ವಯಸ್ಸಿನಲ್ಲಿ ನಿಧನರಾದರು.

ಮುರಳಿ ಮೋಹನ್

Murali Mohan
ಮುರಳಿ ಮೋಹನ್

ಶಿವರಾಜ್​ಕುಮಾರ್, ರವಿಚಂದ್ರನ್ ಹಾಗೂ ಉಪೇಂದ್ರ ಅವರಂತಹ ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಮುರಳಿ ಮೋಹನ್ ಆಗಸ್ಟ್​ 13ರಂದು ನಿಧನರಾದರು.

ದಿನೇಶ್ ಮಂಗಳೂರು

Dinesh Mangalore
ದಿನೇಶ್ ಮಂಗಳೂರು

ಆ ದಿನಗಳು, ಕೆಜಿಎಫ್, ಉಳಿದವರು ಕಂಡಂತೆ, ಕಿಚ್ಚ, ಕಿರಿಕ್ ಪಾರ್ಟಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ನಟ, ಕಲಾ ನಿರ್ದೇಶಕ ದಿನೇಶ್ ಮಂಗಳೂರು ಆಗಸ್ಟ್ 25ರಂದು ಕುಂದಾಪುರದ ಕೋಟೇಶ್ವರ ಸರ್ಜನ್ಸ್ ಆಸ್ಪತ್ರೆಯಲ್ಲಿ ನಿಧನರಾದರು.

ಶಿಲ್ಪಿ ರಾಮ್ ಸುತಾರ್

Ram Sutar
ಶಿಲ್ಪಿ ರಾಮ್ ಸುತಾರ್

ಗುಜರಾತ್‌ನಲ್ಲಿನ ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ ಅವರು ನೋಯ್ಡಾದ ತಮ್ಮ ನಿವಾಸದಲ್ಲಿ ಡಿ.17ರಂದು ವಿಧಿವಶರಾಗಿದ್ದರು.ಅವರಿಗೆ 100ವರ್ಷ ವಯಸ್ಸಾಗಿತ್ತು.

ಶಾಮನೂರು ಶಿವಶಂಕರಪ್ಪ

Shamanur Shivashankarappa
ಶಾಮನೂರು ಶಿವಶಂಕರಪ್ಪ

ಕಾಂಗ್ರೆಸ್​​​ನ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನಿಧನರಾಗಿದ್ದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಸಾಲುಮರದ ತಿಮ್ಮಕ್ಕ

saalumarada thimmakka
ಸಾಲುಮರದ ತಿಮ್ಮಕ್ಕ

ವೃಕ್ಷಮಾತೆ ಎಂದೇ ಖ್ಯಾತರಾಗಿದ್ದ ಸಾಲು ಮರದ ತಿಮ್ಮಕ್ಕ ನ.14 ರಂದು ನಿಧನರಾಗಿದ್ದರು. ಅವರಿಗೆ 114 ವರ್ಷ ವಯಸ್ಸಾಗಿತ್ತು.

ಎಸ್.ಎಲ್. ಭೈರಪ್ಪ

S.L. Bhyrappa
ಎಸ್.ಎಲ್. ಭೈರಪ್ಪ

ಹಿರಿಯ ಸಾಹಿತಿ, ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ಸೆ. 24ರಂದು ನಿಧನರಾಗಿದ್ದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಧರ್ಮೇಂದ್ರ

Dharmendra
ಧರ್ಮೇಂದ್ರ

ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ಅವರು ನವೆಂಬರ್‌ 24ರಂದು ನಿಧನರಾದರು, ಧರ್ಮೇಂದ್ರ ಅವರಿಗೆ 89 ವರ್ಷ ವಯಸ್ಸಾಗಿತ್ತು.

ಶೆಫಾಲಿ ಜರಿವಾಲಾ

Shefali Jariwala
ಶೆಫಾಲಿ ಜರಿವಾಲಾ

ಬಾಲಿವುಡ್‌ ನಟಿ, ʻಹುಡುಗರುʼ ಸಿನಿಮಾದಲ್ಲಿ ʻಪಂಕಜಾʼ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ 42 ವರ್ಷ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

ಸಂಜಯ್ ಕಪೂರ್

Sanjay Kapoor
ಸಂಜಯ್ ಕಪೂರ್

ಕೈಗಾರಿಕಾ ಉದ್ಯಮಿ ಮತ್ತು ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ 2025ರ ಜೂನ್ 12ರಂದು ಲಂಡನ್‌ನಲ್ಲಿ ಗಾಲ್ಫ್ ಆಡುತ್ತಿರುವಾಗ 53ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಹಠಾತ್ತನೆ ನಿಧನರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com