Casual Images
ಸಾಂದರ್ಭಿಕ ಚಿತ್ರ

ಪಾಕ್ ಗೆ ಭಾರತದ ನೌಕಪಡೆಯ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ: ಉಡುಪಿಯಲ್ಲಿ ಮೂರನೇ ಆರೋಪಿ ಬಂಧನ

ಬಂಧಿತ ಆರೋಪಿಯನ್ನು ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿ ಹಿರೇಂದ್ರ ಕುಮಾರ್ ಅಲಿಯಾಸ್ ಭರತ್ ಕುಮಾರ್ ಖದಾಯತ್ (34) ಎಂದು ಗುರುತಿಸಲಾಗಿದೆ.
Published on

ಉಡುಪಿ: ಭಾರತದ ನೌಕಾಪಡೆಯ ರಹಸ್ಯ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಉಡುಪಿ ಪೊಲೀಸರು ಮೂರನೇ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಇದರಲ್ಲಿ ನೌಕಾಪಡೆಯ ರಹಸ್ಯ ವಿವರಗಳನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮುಂದುವರಿದ ತನಿಖೆಯ ಭಾಗವಾಗಿ ಮಲ್ಪೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿ ಹಿರೇಂದ್ರ ಕುಮಾರ್ ಅಲಿಯಾಸ್ ಭರತ್ ಕುಮಾರ್ ಖದಾಯತ್ (34) ಎಂದು ಗುರುತಿಸಲಾಗಿದೆ.

ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳಿಗೆ ರವಾನಿಸುತ್ತಿದ್ದ ಪ್ರಮುಖ ಆರೋಪಿಗಳಿಗೆ ಹಣಕ್ಕಾಗಿ ಹಿರೇಂದ್ರ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಒದಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Casual Images
ಪಾಕಿಸ್ತಾನಿ ಏಜೆಂಟ್ ಗಳಿಗೆ ಮಿಲಿಟರಿ ರಹಸ್ಯ ಸೋರಿಕೆ: ಬೆಂಗಳೂರಿನಲ್ಲಿ BEL ಇಂಜಿನಿಯರ್ ಬಂಧನ; ಸ್ಫೋಟಕ ಮಾಹಿತಿ ಬಹಿರಂಗ

ಇದಕ್ಕೂ ಮುನ್ನ ನವೆಂಬರ್ 21 ರಂದು ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿಯನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳ ಅನುಮಾನಾಸ್ಪದ ಚಟುವಟಿಕೆಯನ್ನು ಬಂದರು ಅಧಿಕಾರಿಗಳು ಗಮನಿಸಿದ ನಂತರ ಬಂಧಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com