ಪಾಕಿಸ್ತಾನಿ ಏಜೆಂಟ್ ಗಳಿಗೆ ಮಿಲಿಟರಿ ರಹಸ್ಯ ಸೋರಿಕೆ: ಬೆಂಗಳೂರಿನಲ್ಲಿ BEL ಇಂಜಿನಿಯರ್ ಬಂಧನ; ಸ್ಫೋಟಕ ಮಾಹಿತಿ ಬಹಿರಂಗ

ಬಿಇಎಲ್​ನಲ್ಲಿನ ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ, ಮಿಲಟರಿ ಇಂಟಲಿಜೆನ್ಸ್ ಜಂಟಿ‌ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿವೆ.
arrest
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪಾಕಿಸ್ತಾನಕ್ಕೆ ರಹಸ್ಯವಾಗಿ ಭಾರತದ ಮಿಲಿಟರಿ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದ ಆರೋಪದ ಮೇರೆಗೆ ಶಂಕಿತ ಪಾಕಿಸ್ತಾನ ಏಜೆಂಟ್ ನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ದೀಪ್ ರಾಜ್ ಚಂದ್ರ ಎಂದು ಗುರುತಿಸಲಾಗಿದ್ದು, ಈತ ಮೂಲತಃ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದವನು ಎನ್ನಲಾಗಿದೆ. ಬೆಂಗಳೂರಿನ ಬಿಇಎಲ್​ನಲ್ಲಿ ಪಿಐಡಿಸಿ ಆಗಿ ಕೆಲಸ ಮಾಡುತ್ತಿದ್ದನು.

ಬಿಇಎಲ್​ನಲ್ಲಿನ ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ, ಮಿಲಟರಿ ಇಂಟಲಿಜೆನ್ಸ್ ಜಂಟಿ‌ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿವೆ.

ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಗುಪ್ತಚರ ಇಲಾಖೆ ಹಾಗೂ ಮಿಲಟರಿ ಇಂಟಲಿಜೆನ್ಸ್ ಜಂಟಿ‌ ಕಾರ್ಯಾಚರಣೆ ನಡೆಸಿ ಬಂಧಿಸಿವೆ. ಆತನ ವಿಚಾರಣೆ ನಡೆಸಿದ ಮಿಲಟರಿ ಇಂಟಲಿಜೆನ್ಸ್ ಎದುರು ಇದೀಗ ಸ್ಫೋಟಕ ಮಾಹಿತಿ ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ.

ದೀಪ್ ರಾಜ್ ಚಂದ್ರ ಕಳೆದ ಮೂರು ವರ್ಷಗಳಿಂದ ಪಾಕಿಸ್ತಾನದ ಐಎಸ್ಐ ಸಂಸ್ಥೆಯ ಮಹಿಳಾ ಗೂಢಚಾರಳ ಸಂಪರ್ಕದಲ್ಲಿದ್ದ. ಈ ಅವಧಿಯಲ್ಲಿ ಆರೋಪಿಯ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾವಣೆ ಆಗಿರುವ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ಹೇಳಿವೆ.

arrest
ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಏರಿಸಿಲ್ಲ, ಹೈಕೋರ್ಟ್ ಆದೇಶ ಪಾಲಿಸಲಾಗಿದೆ: ಕೆ.ಜೆ ಜಾರ್ಜ್ ಸ್ಪಷ್ಟನೆ

ಕೆಲಸದಿಂದ ಅಮಾನತು

ದೀಪ್ ರಾಜ್ ಚಂದ್ರ ನನ್ನು ಬಿಇಎಲ್ ಸಂಸ್ಥೆಯಿಂದ ಅಮಾನತುಗೊಳಿಸಲಾಗಿದೆ. ಈತ ಬಳಸುತ್ತಿದ್ದ digital gadgetsಗಳ ಮೂಲಕ ಕ್ಲೌಡ್ ಇನ್ವೆಸ್ಟಿಗೇಷನ್ ಮತ್ತು ರೆಸ್ಪಾನ್ಸ್ ಆಟೊಮೇಷನ್ ಬಳಸಿ ಆಳವಾದ ವಿಶ್ಲೇಷಣೆ ಮತ್ತು ರಕ್ಷಣಾ ಪ್ರಯೋಗಾಲಯದ ದತ್ತಾಂಶಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದು 'ಕ್ಲೌಡ್ ಪರಿಸರದಲ್ಲಿನ ಭದ್ರತಾ ಘಟನೆಗಳಿಗೆ ಪತ್ತೆ, ತನಿಖೆ ಮತ್ತು ಪ್ರತಿಕ್ರಿಯೆಯನ್ನು ಹೆಚ್ಚಿಸಲು ಸುಧಾರಿತ ವಿಶ್ಲೇಷಣೆ, ಎಐ ಮತ್ತು ಯಾಂತ್ರೀಕರಣವನ್ನು ಬಳಸಿಕೊಳ್ಳುವ ತಂತ್ರಜ್ಞಾನವಾಗಿದೆ, ಇದು ಸಂಸ್ಥೆಗಳು ಬೆದರಿಕೆಗಳನ್ನು ಪೂರ್ವಭಾವಿಯಾಗಿ ಪತ್ತೆಹಚ್ಚಲು ಮತ್ತು ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ. ಚಂದ್ರ ಕಳೆದ ಎರಡು ವರ್ಷಗಳಿಂದ ಕೆಲವು ಪಾಕಿಸ್ತಾನಿ ಗುಪ್ತಚರ ಕಾರ್ಯಾಚರಣೆ (ಪಿಐಒ) ಜೊತೆ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ.

ಕ್ಯಾಂಪಸ್‌ನಲ್ಲೇ ವಾಸ

ಪಾಕಿಸ್ತಾನಿ ಗೂಢಚಾರನಾಗಿ ಕೆಲಸ ಮಾಡುತ್ತಿದ್ದ ದೀಪ್ ರಾಜ್ ಚಂದ್ರ ಬಿಇಎಲ್ ಕ್ಯಾಂಪಸ್‌ನಲ್ಲೇ ವಾಸವಾಗಿದ್ದನು. ಈತ ಹಲವು ಬಾರಿ ಮಿಲಿಟರಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ ಆರೋಪ ಎದುರಿಸುತ್ತಿದ್ದಾನೆ. ಪ್ರಸ್ತುತ ಆರೋಪಿಯ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಮಿಲಿಟರಿ ಗುಪ್ತಚರ ಇಲಾಖೆ ವಶಪಡಿಸಿಕೊಂಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದೆ. ಇಂದು ಸಂಜೆಯೊಳಗೆ ಆರೋಪಿಯನ್ನು ದೆಹಲಿಗೆ ಕರೆದೊಯ್ಯುವ ಸಾಧ್ಯತೆ ಇದೆ.

arrest
ರಾಜ್ಯದಲ್ಲಿ ನಕ್ಸಲರ ಹತ್ತಿಕ್ಕಲು 201 ಕೋಟಿ ರೂ ಖರ್ಚು: ರಾಜ್ಯ ಸರ್ಕಾರ

ಮಹಿಳೆಯ ನಕಲಿ ಖಾತೆ ಬಳಸಿ ಮಾಹಿತಿ ಸಂಗ್ರಹ

ಈತ ಮಹಿಳೆಯ ಸೋಗಿನಲ್ಲಿ ಆನ್ ಲೈನ್ ನಲ್ಲಿ ಖಾತೆ ತೆರೆದು ಇಲ್ಲಿನ ಉದ್ಯೋಗಿಗಳ ಸ್ನೇಹ ಬೆಳೆಸಿದ್ದ ಎನ್ನಲಾಗಿದೆ. ಬಳಿಕ ರಕ್ಷಣಾ ಕಾರ್ಯಾಚರಣೆ, ಸಂವಹನ ವ್ಯವಸ್ಥೆಗಳು, ಯಂತ್ರೋಪಕರಣಗಳ ವಿವರಗಳು, ಭದ್ರತಾ ಉಪಕರಣ ಉತ್ಪಾದನಾ ವ್ಯವಸ್ಥೆಗಳು, ಕಚೇರಿ ವಿನ್ಯಾಸಗಳು ಮತ್ತು ಕೆಲವು ಹಿರಿಯ ಅಧಿಕಾರಿಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಿಐಒಗಳೊಂದಿಗೆ ಹಂಚಿಕೊಳ್ಳುತ್ತಿದ್ದ . ಈತನ ಈ ಕಾರ್ಯಕ್ಕಾಗಿ ಸುಮಾರು 25,000 ರೂ. ಮೌಲ್ಯದ ಬಿಟ್‌ಕಾಯಿನ್‌ಗಳಲ್ಲಿ ಸಂಭಾವನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚಂದ್ರ ನಿಷೇಧವಿದ್ದರೂ ಪೆನ್ ಡ್ರೈವ್‌ಗಳನ್ನು ಕೆಲಸದ ಸ್ಥಳಕ್ಕೆ ಕೊಂಡೊಯ್ದು ಅಲ್ಲಿ ದತ್ತಾಂಶಗಳನ್ನು ಶೇಖರಿಸಿಕೊಳ್ಳುತ್ತಿದ್ದ. ಪಿಐಒಗಳಿಂದ ತಪ್ಪಿಸಿಕೊಳ್ಳಲು ಸಾಮಾನ್ಯ ಇಮೇಲ್ ಖಾತೆ ಮತ್ತು ಪಾಸ್‌ವರ್ಡ್ ಅನ್ನು ಹಂಚಿಕೊಂಡಿದ್ದ. ಆದರೆ ಆತ ಡ್ರಾಫ್ಟ್ ಫೋಲ್ಡರ್‌ನಲ್ಲಿ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಿದ್ದ. ಇದನ್ನು ಶತ್ರುಗಳು ಪ್ರವೇಶಿಸುತ್ತಿದ್ದರು ಎಂದು ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com