ಕೊಪ್ಪಳ: ಸರ್ಕಾರಿ ಶಾಲೆಯ 24 ಮಕ್ಕಳಿಗೆ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಭಾಗ್ಯ, ಪೂರ್ಣ ವೆಚ್ಚ ಮುಖ್ಯ ಶಿಕ್ಷಕರದ್ದು!

ಕೊಪ್ಪಳ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ, ಬಹದ್ದೂರ ಬಂಡಿ ಗ್ರಾಮದ 24 ವಿದ್ಯಾರ್ಥಿಗಳಿಗೆ ಬೆಂಗಳೂರಿಗೆ ವಿಮಾನ ಪ್ರವಾಸವನ್ನು ಪ್ರಾಯೋಜಿಸಿದ್ದರು.
Aeroplane journey of children
ವಿಮಾನದಲ್ಲಿ ಸರ್ಕಾರಿ ಶಾಲೆ ಮಕ್ಕಳ ಪ್ರಯಾಣ
Updated on

ಬಡವರು, ಕೆಳ ಮಧ್ಯಮ ವರ್ಗದವರಿಗೆ ವಿಮಾನದಲ್ಲಿ ಪ್ರಯಾಣ ಗಗನಕುಸುಮವಾಗಿದೆ. ಇನ್ನೊಬ್ಬ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರೊಬ್ಬರು ತಮ್ಮ ಸ್ವಂತ ಖರ್ಚಿನಿಂದ ಮಕ್ಕಳಿಗೆ ವಿಮಾನ ಪ್ರಯಾಣದ ಅನುಭವ ಮಾಡಿಸಿಕೊಟ್ಟಿದ್ದಾರೆ.

ಕೊಪ್ಪಳ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ, ಬಹದ್ದೂರ ಬಂಡಿ ಗ್ರಾಮದ 24 ವಿದ್ಯಾರ್ಥಿಗಳಿಗೆ ಬೆಂಗಳೂರಿಗೆ ವಿಮಾನ ಪ್ರವಾಸವನ್ನು ಪ್ರಾಯೋಜಿಸಿದ್ದರು. ಅವರಲ್ಲಿ ಹಲವರು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದರು.

ತಮ್ಮ ಸ್ವಂತ ಹಣದಿಂದ 5 ಲಕ್ಷ ರೂಪಾಯಿ ಖರ್ಚು ಮಾಡುವ ಮೂಲಕ ಮಕ್ಕಳಿಗೆ ವಿಮಾನದಲ್ಲಿ ಪ್ರಯಾಣ ಮಾಡುವ ಸೌಲಭ್ಯ ಮತ್ತು ಅನುಭವ ಒದಗಿಸಿಕೊಟ್ಟರು.

ತೋರಣಗಲ್ಲುವಿನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಈ ವಾಯುಯಾನಕ್ಕೆ ಸಂಸದ ರಾಜಶೇಖರ್ ಹಿಟ್ನಾಳ್ ಚಾಲನೆ ನೀಡಿದರು. ಗ್ರಾಮೀಣ ಶಿಕ್ಷಣಕ್ಕಾಗಿ ಮುಖ್ಯೋಪಾಧ್ಯಾಯರ ಸಮರ್ಪಣೆಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ತಮ್ಮ ಬೋರ್ಡಿಂಗ್ ಪಾಸ್‌ಗಳನ್ನು ಹಿಡಿದುಕೊಂಡು ತಮ್ಮ ಆಸನಗಳಲ್ಲಿ ಉತ್ಸಾಹದಿಂದ ಕುಳಿತುಕೊಳ್ಳುವ ದೃಶ್ಯಗಳು ಪೋಷಕರು, ಶಿಕ್ಷಕರು ಮತ್ತು ಗ್ರಾಮಸ್ಥರಿಗೆ ಭಾವನಾತ್ಮಕ ಕ್ಷಣವನ್ನು ಸೃಷ್ಟಿಸಿದವು.

ಈ ಗುಂಪಿನಲ್ಲಿ 5 ರಿಂದ 8 ನೇ ತರಗತಿಯವರೆಗೆ ತಲಾ ನಾಲ್ವರು ವಿದ್ಯಾರ್ಥಿಗಳು ಇದ್ದರು. ಬಾಹ್ಯ ಶಿಕ್ಷಕರು ನಡೆಸಿದ ವಿಶೇಷ ಪರೀಕ್ಷೆಯ ಮೂಲಕ ಅರ್ಹತೆಯ ಆಧಾರದ ಮೇಲೆ ಆಯ್ಕೆಯಾದರು. ಈ ವಿದ್ಯಾರ್ಥಿಗಳ ಜೊತೆಗೆ, ಶಿಕ್ಷಕರು, ಮಧ್ಯಾಹ್ನದ ಊಟದ ಅಡುಗೆಯವರು ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರು ಸೇರಿ 40 ಮಂದಿ ಪ್ರಯಾಣಿಸಿದ್ದರು.

Aeroplane journey of children
ಗಿಡ-ಮರ, ಹೂವು-ಹಣ್ಣು-ತರಕಾರಿ ಮಧ್ಯೆ ಬೆಳೆಯುವ ಕಾರವಾರದ ಸರ್ಕಾರಿ ಶಾಲೆ ಮಕ್ಕಳು, ಇವರಿಗೆ ಗ್ರಾಮಸ್ಥರೇ ಬೋಧಕರು!

ಗ್ರಾಮೀಣ ಹಿನ್ನೆಲೆಯ ಮಕ್ಕಳು ಈ ವಿಶಿಷ್ಟ ಅನುಭವವನ್ನು ಪಡೆಯಬೇಕೆಂದು ನಾನು ಪ್ರವಾಸ ಏರ್ಪಡಿಸಿದೆ. ವಿದ್ಯಾರ್ಥಿಗಳು ಸಂತೋಷವಾಗಿರುವುದನ್ನು ನೋಡುವುದು ನನಗೆ ಸಂತೋಷವನ್ನು ನೀಡುತ್ತದೆ. ನಾನು ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡ ದಿನ, ಈ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಘೋಷಿಸಿದ್ದೆ. ಒಬ್ಬ ಶಿಕ್ಷಕರಿಗೆ, ವಿದ್ಯಾರ್ಥಿಗಳು ದೇವರಂತೆ. ನಾಳೆ, ಅವರಲ್ಲಿ ಒಬ್ಬರು ವೈಮಾನಿಕ ತಜ್ಞರಾಗಬಹುದು, ಅಧಿಕಾರಿಯಾಗಬಹುದು ಅಥವಾ ಉನ್ನತ ಹುದ್ದೆಯನ್ನು ಅಲಂಕರಿಸಬಹುದು. ಇತರರಿಗೆ ಇದೇ ರೀತಿಯ ಪ್ರವಾಸಗಳನ್ನು ಏರ್ಪಡಿಸಬಹುದು. ಆ ಆಲೋಚನೆ ನನಗೆ ತೃಪ್ತಿಯನ್ನು ನೀಡುತ್ತದೆ, ಎಂದು ಅಂಡಗಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ನನ್ನ ಬಾಲ್ಯದ ಗೆಳೆಯ ಸಚಿನ್ ಕುಮಾರ್ ರಾಂಪುರೆ ಅವರಿಂದ ಬೆಂಬಲ ಸಿಕ್ಕಿತು. ನಾನು ಅವರಿಂದ ಸಾಲ ಪಡೆದು ನಂತರ ಮರುಪಾವತಿಸಿದೆ. ಈ ಪ್ರವಾಸಕ್ಕಾಗಿ ನಾನು ಸುಮಾರು 5 ಲಕ್ಷ ಸಾಲ ಪಡೆದಿದ್ದೇನೆ. ಬಳ್ಳಾರಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದ ವೆಚ್ಚ 3.5 ಲಕ್ಷ ರೂ. ಆಗಿತ್ತು. ಆಹಾರ, ಬೋರ್ಡಿಂಗ್, ಪ್ರವಾಸಿ ಸ್ಥಳಗಳಿಗೆ ಪ್ರವೇಶ ಟಿಕೆಟ್‌ಗಳು, ಬೆಂಗಳೂರಿನ ಸ್ಥಳೀಯ ಪ್ರಯಾಣ ಮತ್ತು ಹಿಂದಿರುಗುವ ರೈಲು ಪ್ರಯಾಣದ ವೆಚ್ಚವನ್ನು ಭರಿಸಲಾಗಿದೆ. ವಿದ್ಯಾರ್ಥಿಗಳಿಗೆ ಎಲ್ಲವೂ ಉಚಿತವಾಗಿದೆ ಎಂದು ಹೇಳಿದರು.

50 ಲಕ್ಷ ರೂ ಸಾಲ

ನನ್ನ ಮೇಲೆ ಸುಮಾರು 50 ಲಕ್ಷ ರೂಪಾಯಿ ಸಾಲವಿದೆ. ಆದರೆ ಮಕ್ಕಳ ಸಂತೋಷಕ್ಕಿಂತ ಹೆಚ್ಚಿನ ತೃಪ್ತಿ ನನಗೆ ಬೇರೇನೂ ನೀಡುವುದಿಲ್ಲ ಎಂದರು. ವಿದ್ಯಾರ್ಥಿಗಳು ಭಾನುವಾರದವರೆಗೆ ಬೆಂಗಳೂರಿನಲ್ಲಿಯೇ ಇರುತ್ತಾರೆ. ಈ ಸಮಯದಲ್ಲಿ ಅವರು ಪ್ರಮುಖ ಪ್ರವಾಸಿ ಆಕರ್ಷಣೆಗಳು ಮತ್ತು ಶೈಕ್ಷಣಿಕ ಕೇಂದ್ರಗಳಿಗೆ ಭೇಟಿ ನೀಡುತ್ತಾರೆ. ನಂತರ ಭಾನುವಾರ ರಾತ್ರಿ ರೈಲಿನಲ್ಲಿ ಕೊಪ್ಪಳಕ್ಕೆ ಹಿಂತಿರುಗುತ್ತಾರೆ.

ಅಂಡಗಿಯವರ ಈ ಕಾರ್ಯವು ಗ್ರಾಮಸ್ಥರು ಮತ್ತು ಶಿಕ್ಷಣತಜ್ಞರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಕರ್ನಾಟಕ ರಾಜ್ಯ ಅಂಗವಿಕಲ ನೌಕರರ ಸಂಘದ ರಾಜ್ಯ ಅಧ್ಯಕ್ಷರಾಗಿರುವ ಅಂಡಗಿ ಅವರು ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದಾನಿಗಳ ಬೆಂಬಲದೊಂದಿಗೆ ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com