

ಬೆಂಗಳೂರು: ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರು ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಮಾಡಿದ್ದಾರೆ. ಬೆಂಗಳೂರಿನ ಸೈಕ್ಲಿಸ್ಟ್‌ಗಳ ಗುಂಪಿನೊಂದಿಗೆ 702 ಕಿಮೀ ದೂರದ ಕನ್ಯಾಕುಮಾರಿಗೆ ಯಶಸ್ವಿಯಾಗಿ ಸೈಕಲ್ ನಲ್ಲಿ ಪ್ರಯಾಣ ಮಾಡಿದ್ದಾರೆ.
ಸುಮಾರು 37 ಗಂಟೆಗಳಲ್ಲಿ ದೇಶದ ದಕ್ಷಿಣ ತುದಿಯನ್ನು ತಲುಪಿದ್ದಾರೆ. 1974 ರಲ್ಲಿ ಮೊದಲ ಬಾರಿಗೆ ಅವರು ಮೊದಲ ಬಾರಿಗೆ ಸೈಕಲ್ ಯಾತ್ರೆ ನಡೆಸಿದ್ದರು. ಇದಾದ ಐವತ್ತು ವರ್ಷಗಳ ಬಳಿಕ ಇದೀಗ ಮತ್ತೆ ಯಶಸ್ವಿಯಾಗಿ
ಸೈಕಲ್ ಯಾತ್ರೆ ಮುಗಿಸಿದ್ದಾರೆ. ಕನ್ಯಾಕುಮಾರಿ ತಲುಪಿದ ನಂತರ ಮಾತನಾಡಿದ ಸುರೇಶ್ ಕುಮಾರ್, ಮಂಗಳವಾರ ಬೆಳಗ್ಗೆ ಬಸವೇಶ್ವರ ನಗರದಿಂದ ಪ್ರಯಾಣ ಆರಂಭಿಸಿದ ರಾಜಾಜಿನಗರ ಪೆಡಲ್ ಪವರ್ ತಂಡದಲ್ಲಿ 12 ಸೈಕ್ಲಿಸ್ಟ್‌ಗಳು ಮತ್ತು ಸಣ್ಣ ಬೆಂಬಲಿಗರು ಇದ್ದರು.
51 ವರ್ಷಗಳ ಹಿಂದೆ ವೆಂಕಟೇಶ್ ಮತ್ತು ಸೋಮನಾಥ್ ಎಂಬ ಇಬ್ಬರು ಗೆಳೆಯರೊಂದಿಗೆ ಸೈಕಲ್ ಯಾತ್ರೆ ಮಾಡಿದ್ದೆ. ಅದರ 50ನೇ ವರ್ಷಾಚರಣೆಯ ನೆನಪಿಗಾಗಿ ಮತ್ತೆ ಸ್ನೇಹಿತರೊಂದಿಗೆ ಕನ್ಯಾಕುಮಾರಿಗೆ ಸೈಕಲ್ ನಲ್ಲಿಯೇ ಪ್ರಯಾಣ ಮಾಡಲು ಯೋಜಿಸಿದ್ದೇವು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಅದು ಈಗ ಸಾಧ್ಯವಾಗಿದ್ದು, ನನ್ನ ಜೀವನದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಆಗಿದ್ದು, ಟೀಮ್‌ವರ್ಕ್‌ಗೆ ಸಾಕ್ಷಿ ಎಂದು ಬಣ್ಣಿಸಿದ್ದಾರೆ.
Advertisement