

ಬೆಂಗಳೂರು: ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ವನ್ಯಜೀವಿ ಆಸ್ಪತ್ರೆ ಮಂಗಳವಾರ ಬೆಂಗಳೂರಿನ ಹೊರವಲಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ನಾಲ್ಕು ಚಿರತೆ ಮರಿಗಳನ್ನು ರಕ್ಷಿಸಿದೆ.
ಪಿಎಫ್‌ಎ ಪ್ರಕಾರ, ಅದರ ಸ್ವಯಂಸೇವಕರಿಗೆ ಇಂದು ಬೆಳಗ್ಗೆ ಚಿರತೆ ಮರಿಗಳು ಇರುವ ಬಗ್ಗೆ ಕರೆ ಬಂದಿದ್ದು, ತಕ್ಷಣ ತ್ವರಿತ ರಕ್ಷಣಾ ಪ್ರತಿಕ್ರಿಯೆ ತಂಡ 30 ನಿಮಿಷಗಳಲ್ಲಿ ತಾವರೆಕೆರೆ ಹೋಬಳಿಯಲ್ಲಿರುವ ಸ್ಥಳಕ್ಕೆ ತಲುಪಿದೆ.
ಮರಿಗಳನ್ನು ವೈದ್ಯಕೀಯ ಆರೈಕೆಗಾಗಿ ಕೊಂಡೊಯ್ಯುವ ಮೊದಲು ತಾಯಿ ಚಿರತೆ ಹಿಂತಿರುಗಿದ ಚಿಹ್ನೆಗಳಿಗಾಗಿ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು.
ಸರಿಸುಮಾರು 5 ರಿಂದ7 ದಿನದ ಈ ಮರಿಗಳಲ್ಲಿ ಮೂರು ಹೆಣ್ಣು ಮತ್ತು ಒಂದು ಗಂಡು ಮರಿ ಇದೆ.
ಮರಿಗಳು ನಿರ್ಜಲೀಕರಣಗೊಂಡಿರುವುದರಿಂದ ಅವುಗಳನ್ನು ಪಿಎಫ್‌ಎ ವನ್ಯಜೀವಿ ಆಸ್ಪತ್ರೆಗೆ ಸಾಗಿಸಲಾಯಿತು. ಅವುಗಳಿಗೆ ಯಾವುದೇ ಗಾಯಳಾಗಿಲ್ಲ. ಹೀಗಾಗಿ ವಯಸ್ಸಿಗೆ ಸೂಕ್ತವಾದ ಪೌಷ್ಠಿಕಾಂಶದ ಆಹಾರ ನೀಡಲಾಯಿತು ಎಂದು ಪಿಎಫ್‌ಎ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ರಾತ್ರಿ, ತಾಯಿಗೆ ತನ್ನ ಮರಿಗಳ ಬಳಿ ಮರಳಲು ಉತ್ತಮ ಅವಕಾಶ ನೀಡುವ ನಾವು ಕೆಲಸ ಮಾಡುತ್ತಿದ್ದೇವೆ" ಎಂದು ಪಿಎಫ್‌ಎ ವನ್ಯಜೀವಿ ಆಸ್ಪತ್ರೆಯ ಮುಖ್ಯ ವನ್ಯಜೀವಿ ಪಶುವೈದ್ಯ ಕರ್ನಲ್ ಡಾ. ನವಾಜ್ ಶರೀಫ್ ಅವರು ಹೇಳಿದ್ದಾರೆ.
Advertisement