Dinesh Gundu Rao
ದಿನೇಶ್ ಗುಂಡೂರಾವ್

ದಿವ್ಯಾಂಗರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ಅನನ್ಯ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಅಂಗಾಂಗ ಮಾಪನ ಶಿಬಿರದಲ್ಲಿ ನಾರಾಯಣ ಸೇವಾ ಸಂಸ್ಥಾನದ ತಜ್ಞ ವೈದ್ಯರು ದಿವ್ಯಾಂಗರ ಅಳತೆ ತೆಗೆದುಕೊಂಡರು. ರಾಜ್ಯವಷ್ಟೇ ಅಲ್ಲದೇ ದಕ್ಷಿಣ ಭಾರತದಿಂದ ದಿವ್ಯಾಂಗರು ಆಗಮಿಸಿದ್ದರು.
Published on

ಬೆಂಗಳೂರು: ದಿವ್ಯಾಂಗರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ಅನನ್ಯವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಉದಯಪುರದ ನಾರಾಯಣ ಸೇವಾ ಸಂಸ್ಥಾನದ ಆಶ್ರಯದಲ್ಲಿ ಬೆಂಗಳೂರಿನ ಜಯನಗರದ ಚಂದ್ರಸಾಗರ ಕಲ್ಯಾಣ ಮಂಟಪದಲ್ಲಿ ನಾರಾಯಣ್ ಅಂಗಾಂಗ ಮತ್ತು ಕ್ಯಾಲಿಪರ್ಸ್ ಮಾಪನ ಮತ್ತು ಶಸ್ತ್ರ ಚಿಕಿತ್ಸೆಯ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ದಿನೇಶ್ ಗುಂಡೂರಾವ್, ವಿಕಲಚೇತನರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಅವರನ್ನು ಸಮಾಜದಲ್ಲಿ ಗೌರವದಿಂದ ಕಾಣುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಅಂಗವಿಕಲರನ್ನು ದೈಹಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ಸಬಲೀಕರಣಗೊಳಿಸುವ ಸಂಸ್ಥಾನದ ಬದ್ಧತೆಯನ್ನು ಶ್ಲಾಘಿಸಿದರು.

Dinesh Gundu Rao
ರಾಯಚೂರಿನಲ್ಲಿ AIMS ಸ್ಥಾಪನೆ ಮನವಿ ತಿರಸ್ಕಾರ, ಕೇಂದ್ರದ ಈ ಬಜೆಟ್ ಕರ್ನಾಟಕದ ಪಾಲಿಗಂತೂ ಶೂನ್ಯ‌‌: ದಿನೇಶ್ ಗುಂಡೂರಾವ್

ಅಂಗಾಂಗ ಮಾಪನ ಶಿಬಿರದಲ್ಲಿ ನಾರಾಯಣ ಸೇವಾ ಸಂಸ್ಥಾನದ ತಜ್ಞ ವೈದ್ಯರು ದಿವ್ಯಾಂಗರ ಅಳತೆ ತೆಗೆದುಕೊಂಡರು. ರಾಜ್ಯವಷ್ಟೇ ಅಲ್ಲದೇ ದಕ್ಷಿಣ ಭಾರತದಿಂದ ದಿವ್ಯಾಂಗರು ಆಗಮಿಸಿದ್ದರು. ಬಳ್ಳಾರಿ, ವಿಜಯನಗರ, ರಾಯಚೂರು, ಬೀದರ್, ಬೆಳಗಾವಿ, ಕೊಡಗು, ಮೈಸೂರು, ಮಂಡ್ಯ, ಕೋಲಾರ, ಹಾಸನ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾವೇರಿ, ಉಡುಪಿ, ಬಾಗಲಕೋಟ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಕೇರಳ, ದಕ್ಷಿಣ ಭಾರತದಿಂದ 1050 ದಿವ್ಯಾಂಗರು ಆಗಮಿಸಿದ್ದರು.

ನಾರಾಯಣ ಸೇವಾ ಸಂಸ್ಥೆಯ ಟ್ರಸ್ಟಿ ಮತ್ತು ನಿರ್ದೇಶಕ ದೇವೇಂದ್ರ ಚೌಬಿಸಾ ಮಾತನಾಡಿ, ನಾರಾಯಣ ಸೇವಾ ಸಂಸ್ಥಾನ, ಉಚಿತ ಶಸ್ತ್ರಚಿಕಿತ್ಸೆಗಳು, ಅಂಗಾಂಗ ವಿತರಣೆ, 5,000 ವ್ಯಕ್ತಿಗಳಿಗೆ ದೈನಂದಿನ ಊಟ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.

X

Advertisement

X
Kannada Prabha
www.kannadaprabha.com