
ಕೊಪ್ಪಳ: ಕರ್ನಾಟಕ ಸರ್ಕಾರದ ಸಚಿವರೊಬ್ಬರು ಕನ್ನಡ ಬರೆಯಲು ತಡಕಾಡಿದ ಪ್ರಸಂಗದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಈ ಹಿಂದೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಪ್ರಸಂಗ ವ್ಯಾಪಕ ವೈರಲ್ ಆಗಿತ್ತು. ಇದೀಗ ಈ ಪಟ್ಟಿಗೆ ಮತ್ತೋರ್ವ ಸಚಿವರ ಸೇರ್ಪೆಡೆಯಾಗಿದ್ದು, ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ಕನ್ನಡ ಬರೆಯಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರೇ ಪರದಾಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಶಿವರಾಜ ತಂಗಡಗಿ ‘‘ಶುಭವಾಗಲಿ’’ ಎಂದು ಬೋರ್ಡ್ ಮೇಲೆ ಬರೆಯಲು ಮುಂದಾಗಿದ್ದಾರೆ. ಈ ವೇಳೆ, ಶುಭವಾಗಲಿ ಸರಿಯಾಗಿ ಬರೆಯಲಾಗದೇ ಸಚಿವ ತಂಗಡಗಿ ಯಡವಟ್ಟು ಮಾಡಿಕೊಂಡಿದ್ದಾರೆ.
ಶಿವರಾಜ್ ತಂಗಡಗಿ ತಪ್ಪಾಗಿ ಬರೆಯುತ್ತಿದ್ದರೂ ಅದನ್ನು ಸರಿಪಡಿಸದೇ ಅವರ ಸುತ್ತಲಿದ್ದವರು ಚಪ್ಪಾಳಿ ತಟ್ಟುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಕರ್ನಾಟಕ ಸಚಿವರ ಕನ್ನಡ ಪ್ರೀತಿ ಕುರಿತು ಮತ್ತೊಮ್ಮೆ ಚರ್ಚೆಯಾಗುವಂತೆ ಮಾಡುತ್ತಿದೆ.
Advertisement