ಮಧು ಬಂಗಾರಪ್ಪ
ಮಧು ಬಂಗಾರಪ್ಪ

SSLC ವಿದ್ಯಾರ್ಥಿಗಳಿಗೆ ಈ ವರ್ಷ 10% ಗ್ರೇಸ್ ಮಾರ್ಕ್ಸ್ ಇರಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ

SSLC ಪರೀಕ್ಷೆಗೂ ಮುನ್ನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೆಚ್ಚು ಗ್ರೇಸ್ ಮಾರ್ಕ್ಸ್ ಕುರಿತಂತೆ ದೊಡ್ಡ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಹೌದು.. ಕಳೆದ ವರ್ಷ SSLC ಪರೀಕ್ಷೆಯಲ್ಲಿ 10% ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ಕೊಟ್ಟು ಶಿಕ್ಷಣ ಇಲಾಖೆ ವಿವಾದಕ್ಕೀಡಾಗಿತ್ತು.
Published on

ಬೆಂಗಳೂರು: SSLC ಪರೀಕ್ಷೆಗೂ ಮುನ್ನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೆಚ್ಚು ಗ್ರೇಸ್ ಮಾರ್ಕ್ಸ್ ಕುರಿತಂತೆ ದೊಡ್ಡ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಹೌದು.. ಕಳೆದ ವರ್ಷ SSLC ಪರೀಕ್ಷೆಯಲ್ಲಿ 10% ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ಕೊಟ್ಟು ಶಿಕ್ಷಣ ಇಲಾಖೆ ವಿವಾದಕ್ಕೀಡಾಗಿತ್ತು. ಆದರೆ ಈ ವರ್ಷ ಗ್ರೇಸ್ ಮಾರ್ಕ್ಸ್ ಕೊಡುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಎಲ್ಲಾ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಜೊತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಂವಾದ ನಡೆಸಿದರು. ಸಂವಾದದಲ್ಲಿ ಎಲ್ಲಾ ಜಿಲ್ಲೆಗಳ ನಿರ್ದೇಶಕರು ಹಾಗೂ ಉಪನಿರ್ದೇಶಕರು, ಶಿಕ್ಷಣ ಇಲಾಖೆ‌ ಅಧಿಕಾರಿಗಳು, ಶಾಲೆಯ ಶಿಕ್ಷಕರು ಹಾಗೂ ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ಈ ಬಾರಿ ಪಾಸಿಂಗ್ ಗ್ರೇಸ್ ಅಂಕ ಇರೋದಿಲ್ಲ ಎಂದು ಹೇಳಿದರು. ಕಳೆದ ಬಾರಿ ಕೊನೆ ಕ್ಷಣದಲ್ಲಿ ವೆಬ್‌ಕಾಸ್ಟಿಂಗ್ ಜಾರಿಗೆ ತಂದ ಕಾರಣ ಗ್ರೇಸ್ ಮಾರ್ಕ್ಸ್ ಕೊಡಲಾಗಿತ್ತು. ಈ ಬಾರಿ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ಇರಲಿದೆ ಎಂದರು.

ಮಧು ಬಂಗಾರಪ್ಪ
ಬೈಕ್ ಮೇಲೆ 1.61 ಲಕ್ಷ ರೂ ಟ್ರಾಫಿಕ್ ದಂಡವಿದ್ದರೂ ಬೆಂಗಳೂರು ರಸ್ತೆಗಳಲ್ಲಿ ಬಿಂದಾಸ್ ಸುತ್ತಾಟ; ಬೆನ್ನು ಬಿದ್ದ ಪೊಲೀಸರಿಗೆ ತಗ್ಲಾಕೊಂಡ ಭೂಪ!

X

Advertisement

X
Kannada Prabha
www.kannadaprabha.com