ಬೆಂಗಳೂರಿನಲ್ಲಿ ಏರೋ-ಇಂಡಿಯಾ, ಜಾಗತಿಕ ಹೂಡಿಕೆದಾರರ ಸಭೆ: ಸ್ಟಾರ್ ಹೋಟೆಲ್ಸ್ ದರ ಗಗನಕ್ಕೆ!

ಬೆಂಗಳೂರಿನಲ್ಲಿ ಮಾತ್ರವಲ್ಲದೆ, ದೇವೇನಹಳ್ಳಿಯ ಆಚೆ ಮತ್ತು ನೆರೆಯ ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿಯೂ ದರಗಳನ್ನು ಹೆಚ್ಚಿಸಲಾಗಿದೆ.
The biennial Aero India organised by the Defence ministry
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ
Updated on

ಬೆಂಗಳೂರು: ಏರೋ ಇಂಡಿಯಾ ಪ್ರದರ್ಶನ ಮತ್ತು ಜಾಗತಿಕ ಹೂಡಿಕೆದಾರರ ಸಭೆಗಾಗಿ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ದೇವನಹಳ್ಳಿ ಮತ್ತು ಆಂಧ್ರಪ್ರದೇಶದ ಅನಂತಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳವರೆಗಿನ ಎಲ್ಲಾ ಹೋಟೆಲ್‌ಗಳ ಬಹುತೇಕ ರೂಮ್ ಗಳು ಬುಕ್ ಆಗಿವೆ.

ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡಿರುವ ಹೋಟೆಲ್‌ಗಳು ದರಗಳನ್ನು ಹೆಚ್ಚಿಸುವುದಲ್ಲದೆ, ಈ ಋತುವಿನಲ್ಲಿ ಸಾಮಾನ್ಯ ದರಗಳಿಗಿಂತ ಶೇಕಡಾ 15 ರಷ್ಟು ಹೆಚ್ಚು ಶುಲ್ಕ ವಿಧಿಸುತ್ತಿವೆ. ಕೊಠಡಿಗಳ ಲಭ್ಯತೆಯ ಕೊರತೆ ಮತ್ತು ಹೆಚ್ಚಿನ ದರಗಳಿಂದಾಗಿ, ಅನೇಕ ಹೂಡಿಕೆದಾರರು ಮತ್ತು ಪಾಲುದಾರರು ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸುವುದು ಆರ್ಥಿಕವಾಗಿ ಲಾಭ ಎಂದು ಆಯ್ಕೆ ಮಾಡಿಕೊಂಡಿದ್ದರು.

ಬೆಂಗಳೂರಿನಲ್ಲಿರುವ ಸ್ಟಾರ್ ಹೋಟೆಲ್‌ನ ದರವು ರೂ. 15,000 ಆಗಿತ್ತು, ಈಗ ಶೇ. 10-15 ರಷ್ಟು ಹೆಚ್ಚಳವಾಗಿದೆ. ಇದು ಬೆಂಗಳೂರು-ಚೆನ್ನೈ ವಿಮಾನ ಟಿಕೆಟ್ ದರಕ್ಕಿಂತ ಅಗ್ಗವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಹೋಟೆಲ್ ಮಾಲೀಕರ ಸಂಘದ ಸದಸ್ಯರೊಬ್ಬರು ತಿಳಿಸಿದ್ದಾರೆ. ಆದರೆ ಇದು ಒಳ್ಳೆಯದಲ್ಲ ಎಂದು ಸಂಘದ ಸದಸ್ಯರು ಒಪ್ಪಿಕೊಂಡಿದ್ದಾರೆ, ಆದರೆ ಯಾರೂ ವ್ಯಾಪಾರ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ.

The biennial Aero India organised by the Defence ministry
Aero India 2025: ಬೆಂಗಳೂರು ಏರ್‌ಪೋರ್ಟ್‌ ವಿಮಾನ ಹಾರಾಟದಲ್ಲಿ ವ್ಯತ್ಯಯ; ಇಲ್ಲಿದೆ ವಿವರ...

ಬೆಂಗಳೂರಿನಲ್ಲಿ ಮಾತ್ರವಲ್ಲದೆ, ದೇವೇನಹಳ್ಳಿಯ ಆಚೆ ಮತ್ತು ನೆರೆಯ ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿಯೂ ದರಗಳನ್ನು ಹೆಚ್ಚಿಸಲಾಗಿದೆ. ಐದು ಅಥವಾ ನಾಲ್ಕು ಸ್ಟಾರ್ ಹೋಟೆಲ್‌ಗಳು ಮಾತ್ರವಲ್ಲ, ಮೂರು ಸ್ಟಾರ್ ಹೋಟೆಲ್ ನ ದರಗಳು ಸಹ ಹೆಚ್ಚಾಗಿದೆ ಎಂದು ಸದಸ್ಯರು ಹೇಳಿದರು.

ಬೆಂಗಳೂರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಂಘದ ಕಾರ್ಯದರ್ಶಿ ವೀರೇಂದ್ರ ಕಾಮತ್ ಮಾತನಾಡಿ, ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ನಗರದ ಹೊರವಲಯದಲ್ಲಿ ಮತ್ತು ಆಂಧ್ರಪ್ರದೇಶದಲ್ಲಿಯೂ ಹೋಟೆಲ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಿದರು. ಹೋಟೆಲ್ ಕೊಠಡಿಗಳ ವರ್ಗ ಮತ್ತು ಬೇಡಿಕೆಯನ್ನು ಅವಲಂಬಿಸಿ, ದರಗಳನ್ನು ಹೆಚ್ಚಿಸಲಾಗಿದೆ ಮತ್ತು ಎಲ್ಲವೂ ಬುಕ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಯಲಹಂಕ ವಾಯುಪಡೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಇರುವ ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಸೆಳೆಯಲು ವಿಶೇಷ ಪ್ಯಾಕೇಜ್‌ಗಳಲ್ಲಿ ನೀಡುತ್ತಿವೆ. ವಿಶೇಷ ಮೆನುಗಳು ಮತ್ತು ದರಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಏರ್ ಶೋಗಾಗಿ ಏರ್ ಫೋರ್ಸ್ ನಿಲ್ದಾಣದ ಒಳಗೆ ಜನಸಂದಣಿ ಮಾತ್ರವಲ್ಲ, ರಸ್ತೆಬದಿಗಳಲ್ಲಿ ಮತ್ತು ಖಾಲಿ ಸ್ಥಳಗಳಲ್ಲಿ ಪ್ರದರ್ಶನವನ್ನು ನೋಡಲು ದೊಡ್ಡ ಜನಸಂದಣಿ ಇರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com