ಕ್ರಾಂತಿವೀರ ಬ್ರಿಗೇಡ್ ಹಿಂದು ವಿಭಜನೆ ಕೊನೆಗೊಳಿಸುವ ಗುರಿಯನ್ನು ಹೊಂದಿದೆ: ಕೆ.ಎಸ್ ಈಶ್ವರಪ್ಪ

ವಿಜಯಪುರಜಿಲ್ಲೆ ಬಸವನಬಾಗೇವಾಡಿಯ ಗುರುಕೃಪಾ ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರಾಂತಿವೀರ ಬ್ರಿಗೇಡ್ ಕರ್ನಾಟಕ ಸಂಘಟನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
Former DCM K S Eshwarappa and seers during the launch of Krantiveera Brigade in Basavana Bagewadi, Vijayapura district.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಯ ಸಂದರ್ಭದಲ್ಲಿ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ.
Updated on

ಬಸವನ ಬಾಗೇವಾಡಿ: ಹಿಂದುತ್ವವನ್ನು ರಕ್ಷಿಸುವುದು, ಸಂತರು ಮತ್ತು ಮಠಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಜಾತಿಯ ಆಧಾರದ ಮೇಲೆ ಹಿಂದೂ ಸಮುದಾಯವನ್ನು ವಿಭಜಿಸುವುದನ್ನು ತಡೆಯುವ ಗುರಿಯನ್ನು ಕ್ರಾಂತಿವೀರ ಬ್ರಿಗೇಡ್ ಹೊಂದಿದೆ ಎಂದು ಮಾಜಿ ಡಿಸಿಎಂ ಮತ್ತು ಕ್ರಾಂತಿವೀರ ಬ್ರಿಗೇಡ್‌ನ ಸಂಚಾಲಕ ಕೆ.ಎಸ್. ಈಶ್ವರಪ್ಪ ಅವರು ಬುಧವರಾ ಹೇಳಿದರು.

ವಿಜಯಪುರಜಿಲ್ಲೆ ಬಸವನಬಾಗೇವಾಡಿಯ ಗುರುಕೃಪಾ ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರಾಂತಿವೀರ ಬ್ರಿಗೇಡ್ ಕರ್ನಾಟಕ ಸಂಘಟನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ 1,008 ಸಂತರು ಮತ್ತು ಮಠಾಧೀಶರಿಗ 'ಪಾದ ಪೂಜೆ' ಮಾಡುವ ಮೂಲಕ ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಈಶ್ವರಪ್ಪ ಅವರು, ದಲಿತರು ಮತ್ತು ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲಾ ಸಮುದಾಯಗಳಲ್ಲಿ ಸಮಾನತೆಯನ್ನು ಪ್ರತಿಪಾದಿಸಿದ 12 ನೇ ಶತಮಾನದ ಸಮಾಜ ಸುಧಾರಕ ಜಗಜ್ಯೋತಿ ಬಸವಣ್ಣನವರ ಬೋಧನೆಗಳಿಂದ ಬ್ರಿಗೇಡ್ ಪ್ರೇರಿತವಾಗಿದೆ ಎಂದು ಒತ್ತಿ ಹೇಳಿದರು.

ಕ್ರಾಂತಿವೀರ ಬ್ರಿಗೇಡ್ ಯಾವುದೇ ರಾಜಕೀಯ ಉದ್ದೇಶವನ್ನು ಹೊಂದಿಲ್ಲ. ದೇಶ, ಹಿಂದು ಧರ್ಮ ಸಂರಕ್ಷಣೆ, ಗೋಮಾತೆ ಸಂರಕ್ಷಣೆ ಸಂಕಲ್ಪದೊಂದಿಗೆ ನಾವು ಈ ಬ್ರಿಗೇಡ್ ಆರಂಭಿಸಿದ್ದೇವೆ. ಸಾಧು-ಸಂತರ ಮಾರ್ಗ ದರ್ಶನದಲ್ಲಿ ರಾಜ್ಯದಲ್ಲಿ ನಮ್ಮ ಬ್ರಿಗೇಡ್ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

ರಾಷ್ಟ್ರ ಮತ್ತು ಧರ್ಮಕ್ಕಾಗಿ ತ್ಯಾಗ ಮಾಡುವ ಮನಸ್ಥಿತಿಯನ್ನು ಜನರು ಅಳವಡಿಸಿಕೊಳ್ಳಬೇಕು. ಜಾತಿ ತಾರತಮ್ಯ ಬದಿಗೊತ್ತಿ ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ರಕ್ಷಿಸುವ ಪ್ರತಿಜ್ಞೆ ಮಾಡಬೇಕು ಎಂದರು.

Former DCM K S Eshwarappa and seers during the launch of Krantiveera Brigade in Basavana Bagewadi, Vijayapura district.
ರಾಯಣ್ಣ ಬ್ರಿಗೇಡ್ ಆಯ್ತು; ಈಗ ‘ಕ್ರಾಂತಿ ವೀರ ಬ್ರಿಗೇಡ್’ ಘೋಷಿಸಿದ ಕೆಎಸ್ ಈಶ್ವರಪ್ಪ

ಇದೇ ವೇಳೆ ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಗರ್ಭಿಣಿ ಹಸುವಿನ ಹತ್ಯೆ ಘಟನೆ ಕುರಿತು ಕಳವಳ ವ್ಯಕ್ತಪಡಿಸಿದ ಈಶ್ವರಪ್ಪ ಅವರು, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ, ಇಂತಹ ಬೆಳವಣಿಗೆಗಳು ಮಾತ್ರ ಮುಂದುವರೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕಣ್ಣೀರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಹಿಂದುಗಳ ಸಂಖ್ಯೆ ಶೇ.50ಕ್ಕಿಂತ ಕಡಿಮೆಯಾದರೆ ದೇಶದಲ್ಲಿ ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಉಳಿಯಲು ಸಾಧ್ಯವಿಲ್ಲ. ಶೇ.51ರಷ್ಟು ಮುಸ್ಲಿಂ ಧರ್ಮದವರೇ ಆದರೆ ಖಂಡಿತ ಹಿಂದುಗಳು ಬದುಕಲು ಸಾಧ್ಯವಿಲ್ಲ. ಈಗಾಗಲೇ ದೇಶದ 350 ಜಿಲ್ಲೆ ಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ ಎಂದು ಎಚ್ಚರಿಸಿದರು.

ಈಗಾಗಲೇ ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಲ್ಲಿ ಅನ್ಯ ಧರ್ಮದ ಪ್ರಾಬಲ್ಯ ನೋಡುತ್ತಿದ್ದೇವೆ. ಕಾಸರಗೋಡಿನಲ್ಲಿ ಹಿಂದುಗಳ ಮನೆ ಮುಂದೆಯೇ ಗೋವು ಕಡಿದು ಮಾಂಸ ಹಂಚುತ್ತಾರೆ. ಇದನ್ನು ತಪ್ಪಿಸಲು ಈಶ್ವರಪ್ಪ ಅವರು ಬ್ರಿಗೇಡ್ ಸ್ಥಾಪನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಟನೆ ಹಿಂದು ಧರ್ಮ, ದೇಶ ಸಂರಕ್ಷಣೆ ಜೊತೆಗೆ ಸಂಸ್ಕೃತಿ ಸಂರಕ್ಷಣೆ ಮಾಡುವ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡಲಿ ಎಂದು ಶುಭಹಾರೈಸಿದರು.

ದೇಶದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಸೇರಿದಂತೆ 20 ಪ್ರಕಾರದ ಜಿಹಾದ್ ಗಳು ನಡೆಯುತ್ತಿವೆ. ಇವುಗಳನ್ನು ತಡೆಯಲು ಹಿಂದು ಬಾಂಧವರು ಒಂದಾಗಬೇಕಿದೆ. ಲವ್ ಜಿಹಾದ್‌ನಿಂದಾಗಿ ನೂರಾರು ಹಿಂದು ಯುವತಿ ಯರು ಕಾಣೆಯಾಗಿದ್ದಾರೆ ಎಂದು ವಿಷಾದಿಸಿದರು.

ತಿಂಥಿನಿ ಮಠದ ಸಿದ್ಧರಾಮಾನಂದ ಸ್ವಾಮಿ ಮಾತನಾಡಿ, ಕ್ರಾಂತಿವೀರ ಬ್ರಿಗೇಡ್ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಯೋಜಿತವಾಗಿಲ್ಲ, ಸಾಧು, ಸಂತರ ಹೋರಾಟದ ವೇದಿಕೆಯಾಗಿದೆ ಎಂದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com