Bengaluru Cantonment station: ಪುನರಾಭಿವೃದ್ಧಿ ಕಾಮಗಾರಿ ವಿಳಂಬ; ಪ್ರಯಾಣಿಕರಿಗೆ ತೊಂದರೆ ತಪ್ಪಿಸಲು ಸಂಪರ್ಕ ಸೇತುವೆ ನಿರ್ಮಾಣ

ನಿಲ್ದಾಣದ ಎರಡೂ ತುದಿಗಳನ್ನು ಸಂಪರ್ಕಿಸುವ ಸೇತುವೆ ನಿರ್ಮಿಸಲಾಗುತ್ತಿದ್ದು, ಇದು ಸ್ಟೇಷನ್ ರಸ್ತೆಯನ್ನು ಮಿಲ್ಲರ್ಸ್ ರಸ್ತೆಯೊಂದಿಗೆ ಸಂಪರ್ಕಿಸುತ್ತದೆ, ಈ ಸೇತುವೆ ಬಳಸಲು ಯಾವುದೇ ಪ್ಲಾಟ್‌ಫಾರ್ಮ್ ಟಿಕೆಟ್ ಅಗತ್ಯವಿಲ್ಲ.
Ongoing construction work at Bengaluru Cantonment Railway Station
ಕಂಟೊನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ
Updated on

ಬೆಂಗಳೂರು: ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಗುವ ಅನಾನುಕೂಲತೆಯನ್ನು ಕಡಿಮೆ ಮಾಡಲು ನೈಋತ್ಯ ರೈಲ್ವೆ ವಲಯವು ಎರಡು ಹಂತಗಳಲ್ಲಿ ನಿಲ್ದಾಣವನ್ನು ತೆರೆಯಲು ನಿರ್ಧರಿಸಿದೆ.

ಸಾರ್ವಜನಿಕರಿಗಾಗಿ ಮತ್ತೊಂದು ಸೌಕರ್ಯ ಕಲ್ಪಿಸಲಾಗುತ್ತಿದೆ. ನಿಲ್ದಾಣದ ಎರಡೂ ತುದಿಗಳನ್ನು ಸಂಪರ್ಕಿಸುವ ಸೇತುವೆ ನಿರ್ಮಿಸಲಾಗುತ್ತಿದ್ದು, ಇದು ಸ್ಟೇಷನ್ ರಸ್ತೆಯನ್ನು ಮಿಲ್ಲರ್ಸ್ ರಸ್ತೆಯೊಂದಿಗೆ ಸಂಪರ್ಕಿಸುತ್ತದೆ, ಈ ಸೇತುವೆ ಬಳಸಲು ಯಾವುದೇ ಪ್ಲಾಟ್‌ಫಾರ್ಮ್ ಟಿಕೆಟ್ ಅಗತ್ಯವಿಲ್ಲ.

480 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಬೃಹತ್ ಪುನರಾಭಿವೃದ್ಧಿ ಯೋಜನೆಯು ಕರ್ನಾಟಕದ ಅತ್ಯಂತ ಹಳೆಯ ನಿಲ್ದಾಣವನ್ನು ಅತ್ಯುತ್ತಮ ಪ್ರಯಾಣಿಕರ ಸೌಕರ್ಯಗಳೊಂದಿಗೆ ವಿಶ್ವ ದರ್ಜೆಯ ಒಂದನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ. 161 ವರ್ಷಗಳಷ್ಟು ಹಳೆಯದಾದ ಈ ನಿಲ್ದಾಣದ ಪುನರಾಭಿವೃದ್ಧಿ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20, 2022 ರಂದು ಚಾಲನೆ ನೀಡಿದರು, 2025ರ ಅಕ್ಟೋಬರ್ ನಲ್ಲಿ ಪೂರ್ಣಗೊಳಿಸುವ ಗಡುವು ಎಂದು ನಿಗದಿಪಡಿಸಲಾಗಿದೆ. ಆದರೆ, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಭಾಗ ಎಂದು ಕರೆಯಲ್ಪಡುವ ನಿಲ್ದಾಣದ ಮುಖ್ಯ ದ್ವಾರವನ್ನು ಮೊದಲಿಗೆ ಪ್ರಾರಂಭಿಸಲಾಗುವುದು. ಹವಾನಿಯಂತ್ರಿತ ನಿಲ್ದಾಣದ ಕಟ್ಟಡವನ್ನು 6 ರಿಂದ 7 ತಿಂಗಳೊಳಗೆ ಆರಂಭಿಸಲು ನಾವು ನೋಡುತ್ತಿದ್ದೇವೆ. ಏಕೆಂದರೆ ಇದರಿಂದ ಸಾರ್ವಜನಿಕರಿಗೆ ಹೆಚ್ಚು ಉಪಯೋಗವಾಗುತ್ತದೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Ongoing construction work at Bengaluru Cantonment Railway Station
ಬೆಂಗಳೂರು ಸಬರ್ಬನ್‌ ರೈಲು: ಜೂನ್ 2025 ರ ವೇಳೆಗೆ ಕಂಟೋನ್ಮೆಂಟ್ ವೈಟ್‌ಫೀಲ್ಡ್ ಮಾರ್ಗ ಪೂರ್ಣ

ಉತ್ತರ ಭಾಗ ಅಥವಾ ಹಿಂಭಾಗದ ಪ್ರವೇಶವು ಪೂರ್ಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಿಲ್ದಾಣದ ಎರಡೂ ಪ್ರವೇಶಗಳಲ್ಲಿ ಭೂಗತ ಪಾರ್ಕಿಂಗ್ ಸೌಲಭ್ಯವನ್ನು ನಿರ್ಮಿಸಲಾಗುತ್ತಿದೆ, ಇದು ಸಂಪೂರ್ಣವಾಗಿ 500 ಕಾರುಗಳು ಮತ್ತು ಸಮಾನ ಸಂಖ್ಯೆಯ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಾರಂಭದಿಂದಲೂ, ನಿಲ್ದಾಣದ 2 ಪ್ರವೇಶದ್ವಾರಗಳಲ್ಲಿ ಹಾಗೂ ಕಟ್ಟಡಗಳ ಆವರಣದ ಹೊರಗೆ ಮಾತ್ರ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿತ್ತು.

ನಿಲ್ದಾಣದ ಎರಡೂ ರಸ್ತೆಗಳನ್ನು (ಮಿಲ್ಲರ್ಸ್ ರಸ್ತೆಯೊಂದಿಗೆ ಸ್ಟೇಷನ್ ರಸ್ತೆ) ಸಂಪರ್ಕಿಸುವ ಉಚಿತ ಫುಟ್ ಓವರ್ ಬ್ರಿಡ್ಜ್ ಪಾದಚಾರಿಗಳಿಗೆ ವರದಾನವಾಗಲಿದೆ. ಇದು 45 ಮೀಟರ್ ಉದ್ದ ಮತ್ತು 5 ಮೀಟರ್ ಅಗಲವಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಕಂಟೋನ್ಮೆಂಟ್ ರೈಲು ನಿಲ್ದಾಣ ಇರುವ ಪ್ರಧಾನ ಪ್ರದೇಶವನ್ನು ಉತ್ತಮವಾಗಿ ಬಳಸಿಕೊಳ್ಳಲು, ಕನಿಷ್ಠ 30 ಮೀಟರ್ ಅಗಲದ 136 ಮೀಟರ್ ಉದ್ದದ ಕಾನ್ಕೋರ್ಸ್ ಅನ್ನು ಸಹ ನಿರ್ಮಿಸಲಾಗುತ್ತಿದೆ. ಉಪನಗರ ರೈಲುಗಳ ಕಾರ್ಯಾಚರಣೆಗಾಗಿ ಗುರುತಿಸಲಾದ ಪ್ಲಾಟ್‌ಫಾರ್ಮ್ 1A, B, C & D ಗಳಿಗೆ ಸುಲಭ ಪ್ರವೇಶ ಪಡೆಯಲು ಪ್ರತ್ಯೇಕ ಆಗಮನ ಮತ್ತು ನಿರ್ಗಮನ ವಲಯ ಹೊಂದಿರುತ್ತವೆ.

ಬೆಂಗಳೂರು ಕಂಟೋನ್ಮೆಂಟ್ ಪ್ರಾರಂಭವಾದ ನಂತರ ಮೊದಲ ಬಾರಿಗೆ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳನ್ನು ಹೊಂದಲು ಸಿದ್ಧವಾಗಿದೆ ಎಂದು ಅವರು ಹೇಳಿದರು. ಈ ನಿಲ್ದಾಣವನ್ನು ಬೆಂಗಳೂರು ಮೆಟ್ರೋದ ಪಿಂಕ್ ಲೈನ್‌ನೊಂದಿಗೆ ಸಂಯೋಜಿಸಲಾಗುವುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com