ಮಗಳು ಮೋನಿಕಾಳನ್ನು ಕೊಂದ ತಂದೆ ಮೋತಿರಾಮ
ರಾಜ್ಯ
ಬೀದರ್: ನೀನು ಏನೇ ಹೇಳಿದ್ರೂ, ನಾನು ಮದುವೆಯಾಗೋದು ಅವನನ್ನೆ ಎಂದ ಮಗಳನ್ನು ದೊಣ್ಣೆಯಿಂದ ಹೊಡೆದು ಕೊಂದ ತಂದೆ!
ಮೃತಳನ್ನು 18 ವರ್ಷದ ಮೋನಿಕಾ ಮೋತಿರಾಮ ಜಾಧವ್ ಎಂದು ಗುರುತಿಸಲಾಗಿದೆ. ತಂದೆ ಮೋತಿರಾಮ ಮಗಳನ್ನು ಕೊಲೆ ಮಾಡಿ ಸದ್ಯ ತಲೆಮರೆಸಿಕೊಂಡಿದ್ದಾರೆ.
ಬೀದರ್: ಪ್ರೀತಿ ಮಾಡದಂತೆ ಎಚ್ಚರಿಸಿದರೂ ಕೇಳದ ಮಗಳನ್ನು ತಂದೆಯೇ ದೊಣ್ಣೆಯಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬರಗೇನ್ ತಾಂಡಾದಲ್ಲಿ ನಡೆದಿದೆ.
ಮೃತಳನ್ನು 18 ವರ್ಷದ ಮೋನಿಕಾ ಮೋತಿರಾಮ ಜಾಧವ್ ಎಂದು ಗುರುತಿಸಲಾಗಿದೆ. ತಂದೆ ಮೋತಿರಾಮ ಮಗಳನ್ನು ಕೊಲೆ ಮಾಡಿ ಸದ್ಯ ತಲೆಮರೆಸಿಕೊಂಡಿದ್ದಾರೆ. ನಿನಗೆ ಒಳ್ಳೆಯ ಹುಡುಗನನ್ನ ನೋಡಿ ಮದುವೆ ಮಾಡುತ್ತೇನೆ. ಈ ಪ್ರೀತಿ-ಪ್ರೇಮದಿಂದ ದೂರವಿರುವಂತೆ ಮಗಳಿಗೆ ತಂದೆ ತಿಳುವಳಿಕೆ ಹೇಳಿದ್ದರು. ಆದರೆ ಅದಕ್ಕೆ ಒಪ್ಪದ ಮೋನಿಕಾ ನಾನು ಮದುವೆಯಾದರೆ ಅವನನ್ನೇ ಆಗುತ್ತೇನೆ ಎಂದು ಪಟ್ಟು ಹಿಡಿದ್ದಿದ್ದಳು. ಇದರಿಂದ ಕೋಪಗೊಂಡ ತಂದೆ ಮಗಳ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ.
ಮಾರಾಣಾಂತಿಕ ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಮೋನಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮಗಳ ಹತ್ಯೆ ಕುರಿತಂತೆ ತಾಯಿ ಭಾಗುಬಾಯಿ ಸಂತಪೂರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೋತಿರಾಮನ ಬಂಧನಕ್ಕೆ ಬಲೆ ಬಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ