Infosys ಮೈಸೂರು ಕ್ಯಾಂಪಸ್ ನ 400 ಟ್ರೈನೀ ಉದ್ಯೋಗಿಗಳ ವಜಾ; ನೇಮಕಾತಿ ಪ್ರಕ್ರಿಯೆ ಕಠಿಣ

ಎಲ್ಲಾ ಫ್ರೆಶರ್‌ಗಳಿಗೆ ಮೂರು ಪ್ರಯತ್ನಗಳನ್ನು ನೀಡಲಾಗುತ್ತದೆ. ಅದರಲ್ಲಿ ವಿಫಲವಾದರೆ ಅವರು ಸಂಸ್ಥೆಯೊಂದಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ.
Infosys ಮೈಸೂರು ಕ್ಯಾಂಪಸ್ ನ 400 ಟ್ರೈನೀ ಉದ್ಯೋಗಿಗಳ ವಜಾ; ನೇಮಕಾತಿ ಪ್ರಕ್ರಿಯೆ ಕಠಿಣ
Updated on

ಬೆಂಗಳೂರು: ಇನ್ಫೋಸಿಸ್ ಐಟಿ ಸಂಸ್ಥೆ ಮೈಸೂರು ಶಾಖೆಯ ಸುಮಾರು 400 ತರಬೇತಿ ನಿರತ ವೃತ್ತಿಪರರನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಐಟಿ ವೃತ್ತಿಪರರನ್ನು ಪ್ರತಿನಿಧಿಸುವ ನಸ್ಸೆಂಟ್ ಮಾಹಿತಿ ತಂತ್ರಜ್ಞಾನ ನೌಕರರ ಸೆನೆಟ್ (NITES) ಸುಮಾರು 700 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ ಎಂದು ಹೇಳುತ್ತಿದೆ.

ಈ ಕ್ಯಾಂಪಸ್ ನೇಮಕಾತಿಗಳನ್ನು ಕಳೆದ ಅಕ್ಟೋಬರ್ 2024 ರಲ್ಲಿ ದೀರ್ಘ ಕಾಯುವಿಕೆಯ ನಂತರ ಮಾಡಲಾಗಿತ್ತು. ಇತ್ತೀಚೆಗೆ ಇನ್ಫೋಸಿಸ್ ಕಠಿಣ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದು, ಅಲ್ಲಿ ಎಲ್ಲಾ ಫ್ರೆಶರ್‌ಗಳು, ತಮ್ಮ ಮೈಸೂರು ಕ್ಯಾಂಪಸ್‌ನಲ್ಲಿ ಕಠಿಣ ತರಬೇತಿಯನ್ನು ಪಡೆದ ನಂತರ, ಆಂತರಿಕ ಮೌಲ್ಯಮಾಪನಗಳನ್ನು ತೇರ್ಗಡೆ ಮಾಡಬೇಕಾಗುತ್ತದೆ.

ಎಲ್ಲಾ ಫ್ರೆಶರ್‌ಗಳಿಗೆ ಮೂರು ಪ್ರಯತ್ನಗಳನ್ನು ನೀಡಲಾಗುತ್ತದೆ. ಅದರಲ್ಲಿ ವಿಫಲವಾದರೆ ಅವರು ಸಂಸ್ಥೆಯೊಂದಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ, ಅದನ್ನು ಅವರ ಒಪ್ಪಂದದಲ್ಲಿಯೂ ಉಲ್ಲೇಖಿಸಲಾಗಿದೆ. ಈ ಪ್ರಕ್ರಿಯೆಯು ಎರಡು ದಶಕಗಳಿಗೂ ಹೆಚ್ಚು ಕಾಲ ಅಸ್ತಿತ್ವದಲ್ಲಿದೆ. ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪ್ರತಿಭೆ ಲಭ್ಯತೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ಕಂಪೆನಿ ಹೇಳಿದೆ.

Infosys ಮೈಸೂರು ಕ್ಯಾಂಪಸ್ ನ 400 ಟ್ರೈನೀ ಉದ್ಯೋಗಿಗಳ ವಜಾ; ನೇಮಕಾತಿ ಪ್ರಕ್ರಿಯೆ ಕಠಿಣ
NR Narayana Murthy: 'ಇನ್ಫೋಸಿಸ್ ಆರಂಭದಲ್ಲಿ ಬೆಳಗ್ಗೆ 6.20ಕ್ಕೆ ಕಚೇರಿಗೆ ಹೋಗಿ ರಾತ್ರಿ 8.30ಕ್ಕೆ ಮನೆಗೆ ಬರುತ್ತಿದ್ದೆ, ಹೀಗೆ 40 ವರ್ಷ ಮಾಡಿದ್ದೇನೆ'

ಈ ನೇಮಕಾತಿದಾರರು ಆಂತರಿಕ ಮೌಲ್ಯಮಾಪನಗಳಲ್ಲಿ ಉತ್ತೀರ್ಣರಾಗಲಿಲ್ಲ ಎಂದು ಕಂಪನಿ ಹೇಳಿಕೊಂಡರೂ, NITES ಅಧ್ಯಕ್ಷ ಹರ್‌ಪ್ರೀತ್ ಸಿಂಗ್ ಸಲೂಜಾ, ಈ ಉದ್ಯೋಗಿಗಳು ನೇಮಕಾತಿಗಾಗಿ ಎರಡು ವರ್ಷಗಳ ಕಾಲ ಕಾಯಬೇಕಾಯಿತು. ಇನ್ಫೋಸಿಸ್ ಅವರನ್ನು ಮೈಸೂರು ಕ್ಯಾಂಪಸ್‌ ಗೆ ಕರೆಸಿಕೊಂಡಿತ್ತು, ಅಲ್ಲಿ ಅವರನ್ನು "ಪರಸ್ಪರ ಬೇರ್ಪಡಿಕೆ" ಪತ್ರಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು ಎಂದು ಹೇಳುತ್ತಾರೆ.

NITES ಗೆ ಬಂದ ದೂರುಗಳ ಪ್ರಕಾರ, ಕಂಪನಿಯು ಬೌನ್ಸರ್‌ಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ನೌಕರರನ್ನು ಬೆದರಿಕೆ ಹಾಕಿಸಿದೆ. ಅವರು ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ ಮತ್ತು ಘಟನೆಯನ್ನು ದಾಖಲಿಸಲು ಅಥವಾ ಸಹಾಯ ಪಡೆಯಲು ಯಾವುದೇ ಮಾರ್ಗವಿಲ್ಲ ಎಂದು ಹೇಳಿತ್ತು.

ಶುಕ್ರವಾರ ಸಂಜೆಯೇ ಹಲವು ಉದ್ಯೋಗಿಗಳನ್ನು ಯಾವುದೇ ಪೂರ್ವ ಸೂಚನೆ ನೀಡದೆ ಹೊರಹೋಗುವಂತೆ ಕೇಳಲಾಗಿತ್ತು. NITES ಸಂಸ್ಥೆಯು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ದೂರು ಸಲ್ಲಿಸಲು ಯೋಜಿಸುತ್ತಿದ್ದು, ತಕ್ಷಣ ಮಧ್ಯಪ್ರವೇಶಿಸಿ ಐಟಿ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿದೆ ಎಂದು ಮೂಲಗಳು ಹೇಳುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com