
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)ದಿಂದ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಕಾರಣದಿಂದ ನಂದಿನಿ ಲೇಔಟ್ ನಿವಾಸಿಗಳು ಭಾನುವಾರ ವಿದ್ಯುತ್ ವ್ಯತ್ಯಯವನ್ನು ಎದುರಿಸಬೇಕಾಗಿದೆ.
ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಿದ್ಯುತ್ ವ್ಯತ್ಯಯ ಸ್ಥಳಗಳು: ಕೃಷ್ಣಾನಂದ ನಗರ, ಆರ್‌ಎಂಸಿ ಯಾರ್ಡ್, ಮಾರಪ್ಪನ ಪಾಳ್ಯ, ಯಶವಂತಪುರ ಕೈಗಾರಿಕಾ ಪ್ರದೇಶ, ದೂರವಾಣಿ ವಿನಿಮಯ ಕೇಂದ್ರ, ಶಂಕರ ನಗರ, ಶ್ರೀ ಕಂಠೇಶ್ವರ ನಗರ, ಸೋಮೇಶ್ವರ ನಗರ, ಆಪ್ಮಾ ಯಾರ್ಡ್, ಮಹಾಲಕ್ಷ್ಮಿ ಲೇಔಟ್, ಗಣೇಶ ಬ್ಲಾಕ್, ಆಂಜನೇಯ ದೇವಸ್ಥಾನ ರಸ್ತೆ, ಸರಸ್ವತಿಪುರಂ, AGB ಲೇಔಟ್, ದಾಸನಾಯಕನ ಪಾಳ್ಯ, ಜಿಜಿ ಪಾಳ್ಯ, YPR ಇಂಡಸ್ಟ್ರೀಯಲ್ ಏರಿಯಾ, ಜೆಎಸ್ ನಗರ್, ಜೆ ಸಿ ನಗರ್, ಕುರುಬರಹಳ್ಳಿ, 60 ಅಡಿ ರಸ್ತೆ. ಜೆಸಿ ನಗರ, PWD, EWS, AMR ಕ್ವಾರ್ಟರ್ಸ್, ರಾಜ್‌ಕುಮಾರ್ ಸಮಾಧಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
Advertisement