
ಬೆಂಗಳೂರು: ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಟ್ರಾಫಿಕ್ ಜಂಕ್ಷನ್ ಗಳಲ್ಲಿ ಕ್ರಿಯಾತ್ಮಕತೆಯನ್ನು ಹೆಚ್ಚಿಸಲು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬೆಂಗಳೂರಿನ 25 ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಿದೆ.
ಒಂದು ವರ್ಷದ ಹಿಂದೆ ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿಯಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. ಜಂಕ್ಷನ್‌ಗಳು ಡ್ರೈ ಫೌಂಟೇನ್‌ಗಳು, ಹಸಿರು ವಲಯಗಳು ಹಾಗೂ ಎಲ್‌ಇಡಿ ದೀಪಗಳನ್ನು ನವೀಕರಿಸಲಾಗಿದೆ, ಇದರಿಂದ ವಾಹನ ಚಾಲಕರು ಮತ್ತು ಪಾದಚಾರಿಗಳಿಗೆ ಹೊಸ ರೀತಿಯ ಅನುಭವ ನೀಡುತ್ತಿದೆ.
ಪ್ರಮುಖ ಪ್ರದೇಶಗಳಲ್ಲಿ ಕಾರ್ಯನಿರತ ಟ್ರಾಫಿಕ್ ಜಂಕ್ಷನ್ ವಾಹನ ಚಾಲಕರಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ಪೀಕ್ ಸಮಯದಲ್ಲಿ. ಹೀಗಾಗಿ ಇದನ್ನು ಪರಿಹರಿಸಲು, ಬಿಬಿಎಂಪಿಯು ಈ ಜಂಕ್ಷನ್‌ಗಳಲ್ಲಿ ಕಾರಂಜಿಗಳು, ಹಸಿರು ತೋಟಗಳು, ಕರ್ಬ್‌ಸ್ಟೋನ್‌ಗಳು, ಆಯ್ದ ಸ್ಥಳಗಳಲ್ಲಿ ಉಯ್ಯಾಲೆ ಮತ್ತು ವಿಶೇಷವಾಗಿ ಸಂಜೆ ಹೆಚ್ಚು ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಲು ಎಲ್ ಇಡಿ ದೀಪ ಅಳವಡಿಸಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು. ಸುಮಾರು 24 ಕೋಟಿ ಅನುದಾನದಲ್ಲಿ ಜಂಕ್ಷನ್ ಸುಧಾರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ, ಇಂಜಿನಿಯರ್ ಇನ್ ಚೀಫ್ ಬಿ.ಎಸ್. ಪ್ರಹ್ಲಾದ್ ಹಡ್ಸನ್ ವೃತ್ತವನ್ನು ಉದಾಹರಣೆ ನೀಡಿದ್ದಾರೆ. ಇಲ್ಲಿ ಮೊದಲ ಬಾರಿಗೆ ಎಲ್ಇಡಿ ದೀಪಗಳನ್ನು ಅಳವಡಿಸಿ ಸೌಂದರ್ಯವನ್ನು ಹೆಚ್ಚಿಸಲಾಗಿದೆ. "ಇಲ್ಯುಮಿನೇಷನ್, ಡ್ರೈ ಫೌಂಟೇನ್ ಮತ್ತು ಹಸಿರು ವಾಹನ ಚಾಲಕರಿಗೆ ರಿಫ್ರೆಶ್ ಅನುಭವವನ್ನು ನೀಡುತ್ತದೆ ಮತ್ತು ದೃಶ್ಯ ಆನಂದ ನೀಡುತ್ತದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಯೋಜನಾ ವಿಭಾಗವು ಇತ್ತೀಚೆಗೆ ರೇಸ್ ಕೋರ್ಸ್ ರಸ್ತೆ ಮತ್ತು ಶಿವಾನಂದ ವೃತ್ತವನ್ನು ಅಭಿವೃದ್ಧಿಪಡಿಸಿದೆ. ರೇಸ್ ಕೋರ್ಸ್ ರಸ್ತೆಯಲ್ಲಿ ಪಾದಚಾರಿಗಳಿಗೆ ಮತ್ತು ಕಚೇರಿಗೆ ತೆರಳುವವರಿಗೆ ಊಟದ ವಿರಾಮದ ವೇಳೆ ವಿಶ್ರಾಂತಿ ಪಡೆಯಲು ಅಲಂಕಾರಿಕ ಬೆಂಚುಗಳನ್ನು ಅಳವಡಿಸಲಾಗಿದೆ.
Advertisement