
ಬೆಂಗಳೂರು: ಫೆಬ್ರವರಿ 11 ರಂದು ನಡೆದ ಇನ್ವೆಸ್ಟ್ ಕರ್ನಾಟಕ-2025 ಶೃಂಗಸಭೆಯ ಉದ್ಘಾಟನಾ ಕಾರ್ಯಕ್ರಮದ ನಂತರ ರಾಜ್ಯವು ರೂ.5 ಲಕ್ಷ ಹೂಡಿಕೆಯ ಪ್ರಸ್ತಾವನೆಗಳನ್ನು ಸ್ವೀಕರಿಸಿದೆ. ಇದರಲ್ಲಿ ಶೇಕಡಾ 70 ರಷ್ಟು ಪ್ರಸ್ತಾವನೆಗಳನ್ನು ನನಸಾಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಸಚಿವ ಎಂ ಬಿ ಪಾಟೀಲ್ ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರೂ. 5 ಲಕ್ಷ ಕೋಟಿ ಹೂಡಿಕೆ ಪ್ರಸ್ತಾವನೆಗಳನ್ನು ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ರೂ. 10 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಪ್ರಸ್ತಾವನೆಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.
ಇನ್ವೆಸ್ಟ್ ಕರ್ನಾಟಕ-2025 ಶೃಂಗಸಭೆ ಫೆಬ್ರವರಿ 14 ರಂದು ಮುಕ್ತಾಯಗೊಳ್ಳಲಿದೆ. ನಿಜವಾದ ಹೂಡಿಕೆಗಳನ್ನು ಹುಡುಕುತ್ತಿದ್ದೇವೆ. ಈ ಹೂಡಿಕೆಯ ಪ್ರಸ್ತಾಪಗಳಲ್ಲಿ ಕನಿಷ್ಠ ಶೇ. 70 ರಷ್ಟು ಸಾಕಾರಗೊಳ್ಳಬೇಕೆಂದು ಬಯಸುತ್ತೇವೆ ಎಂದರು.
ಕರ್ನಾಟಕಕ್ಕೆ ಬರುವ ಎಲ್ಲಾ ಹೂಡಿಕೆದಾರರಿಗೆ ಅವರ ವ್ಯವಹಾರಗಳ ಬೆಳವಣಿಗೆಗೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ. ಎಲ್ಲ ಕ್ಷೇತ್ರಗಳಿಗೂ ಒತ್ತು ನೀಡುತ್ತಿದ್ದೇವೆ. ಒಂದು ಆರಂಭವನ್ನು ಮಾಡಿದ್ದೇವೆ. ಅದನ್ನು ಮತ್ತಷ್ಟು ಹೆಚ್ಚಿಸುತ್ತೇವೆ ಎಂದು ಪಾಟೀಲ್ ಹೇಳಿದರು.
ಅರಮನೆ ಮೈದಾನದ ಇನ್ವೆಸ್ಟ್ ಕರ್ನಾಟಕ ಸ್ಥಳದಲ್ಲಿ ಆವಿಷ್ಕಾರದ ಕುರಿತಾದ ಪ್ರದರ್ಶನ ಆಕರ್ಷಕವಾಗಿತ್ತು. ಎಲ್ಲರ ಗಮನ ಸೆಳೆದ ಏರ್ ಟ್ಯಾಕ್ಸಿ ಬಗ್ಗೆ ಮಾತನಾಡಿದ ಸಚಿವರು, "ಏರ್ ಟ್ಯಾಕ್ಸಿ ನಗರ ಸಾರಿಗೆ ಸನ್ನಿವೇಶದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ. ಇದು ಆರು ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಇರಲಿದೆ. ಇದು ಏರ್ ಆಂಬ್ಯುಲೆನ್ಸ್ ಆಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
Advertisement