ಬಳ್ಳಾರಿ: ಹಠಾತ್ ವಿದ್ಯುತ್ ಕಡಿತ; ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೋನ್ ಟಾರ್ಚ್ ಬಳಸಿ ಗಾಯಕ್ಕೆ ಹೊಲಿಗೆ ಹಾಕಿದ ವೈದ್ಯರು!

ತುರ್ತು ವಾರ್ಡ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ಹಠಾತ್ ವಿದ್ಯುತ್ ಕಡಿತಗೊಂಡಿತ್ತು. ಈ ವೇಳೆ ಅಪಘಾತಕ್ಕೊಳಗಾದ ರೋಗಿಗೆ ದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.
Doctors use smartphone torchlights to treat a patient in Ballari
ಟಾರ್ಚ್ ಬೆಳಕಿನಲ್ಲಿ ಹೊಲಿಗೆ ಹಾಕಿದ ವೈದ್ಯರು
Updated on

ಬಳ್ಳಾರಿ: ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವಿನಿಂದ ರಾಜ್ಯದಲ್ಲಿ ಆತಂಕದ ಅಲೆ ಎದ್ದಿತ್ತು, ಇದಾದ ನಂತರ, ಬಳ್ಳಾರಿಯಲ್ಲಿರುವ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಟ್ರಾಮಾ ಸೆಂಟರ್ ಸದ್ಯ ಸುದ್ದಿಯಲ್ಲಿದೆ.

ತುರ್ತು ವಾರ್ಡ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ಹಠಾತ್ ವಿದ್ಯುತ್ ಕಡಿತಗೊಂಡಿತ್ತು. ಈ ವೇಳೆ ಅಪಘಾತಕ್ಕೊಳಗಾದ ರೋಗಿಗೆ ದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ರೋಗಿಯ ಗಾಯವನ್ನು ಹೊಲಿಯಲು ಮೊಬೈಲ್ ಫೋನ್ ಟಾರ್ಚ್‌ಲೈಟ್ ಬಳಸಬೇಕಾಯಿತು, ಇದು ಆಸ್ಪತ್ರೆಯಲ್ಲಿ ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸಿತು.

ನಿರ್ವಹಣೆ ಮತ್ತು ಸಿಬ್ಬಂದಿ ಕೊರತೆಯ ಬಗ್ಗೆ ಸಾರ್ವಜನಿಕರು ಆರೋಪಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಆಸ್ಪತ್ರೆಯನ್ನು ಪ್ರಾರಂಭಿಸಿದವು ಮತ್ತು ಮೊದಲ ದಿನದಿಂದಲೇ ಇದರ ವಿರುದ್ಧ ಹಲವು ದೂರುಗಳು ಕೇಳಿ ಬರುತ್ತಿವೆ.

ಅಪಘಾತಕ್ಕೀಡಾದ ನಂತರ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ಹೊಲಿಗೆ ಹಾಕಿದ ರೋಗಿಯ ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ ತುರ್ತು ವಾರ್ಡ್‌ನಲ್ಲಿ ಹಠಾತ್ ವಿದ್ಯುತ್ ಕಡಿತವಾಯಿತು. ವಿದ್ಯುತ್ ವ್ಯತ್ಯಯದ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. "ವೈದ್ಯರನ್ನು ಸಂಪರ್ಕಿಸಿದಾಗ, ಅವರು ಬಂದು ಸ್ಮಾರ್ಟ್‌ಫೋನ್ ಟಾರ್ಚ್‌ಲೈಟ್ ಸಹಾಯದಿಂದ ಗಾಯವನ್ನು ಹೊಲಿಯುತ್ತಿದ್ದರು ಎಂದು ಅವರು ಹೇಳಿದರು.

ಸುಮಾರು 15-20 ನಿಮಿಷಗಳ ಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು, ಮತ್ತು ಕೆಲವು ರೋಗಿಗಳು ವೆಂಟಿಲೇಟರ್‌ಗಳಲ್ಲಿ ಉಸಿರಾಡಲು ಕಷ್ಟಪಡುತ್ತಿದ್ದರು. ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಪ್ರತಿದಿನ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ.

ಸಿಬ್ಬಂದಿಯ ಇಂತಹ ನಿರ್ಲಕ್ಷ್ಯದ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಾವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು, "ಸರ್ಕಾರವು ವೈದ್ಯರ ಸಂಬಳಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತದೆ, ಆದರೆ ಅವರಲ್ಲಿ ಕೆಲವರು ಉತ್ತಮ ಚಿಕಿತ್ಸೆ ನೀಡಲು ವಿಫಲರಾಗುತ್ತಾರೆ. ಮುಂದಿನ ಬಾರಿ ಅಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದ್ದಾರೆ.

Doctors use smartphone torchlights to treat a patient in Ballari
ಬೆಂಗಳೂರು: ಮೊಬೈಲ್​ ಟಾರ್ಚ್ ಆನ್ ಮಾಡುವ ಭರದಲ್ಲಿ ತುರ್ತು ಸಹಾಯವಾಣಿಗೆ ಕರೆ ಮಾಡಿದ ಖದೀಮ ಈಗ ಪೊಲೀಸರ ಅತಿಥಿ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com