ಪರಮೇಶ್ವರ್'ನ್ನು ಮುಂದಿನ ಸಿಎಂ ಎಂದು ಪರಿಗಣಿಸಿ: ಕಾಂಗ್ರೆಸ್'ಗೆ ದಲಿತ ನಾಯಕರ ಒತ್ತಾಯ

ಜಿಲ್ಲಾ ಛಲವಾದಿ ಮಹಾಸಭಾ ಮತ್ತು ಬುದ್ಧ ವಿಹಾರ ನಿರ್ಮಾಣ ಸಮಿತಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ಕಾಂಗ್ರೆಸ್ ನಾಯಕರು ಮತ್ತು ದಲಿತ ನಾಯಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.
Dr. g. Parameshwar
ಡಾ. ಜಿ. ಪರಮೇಶ್ವರ್
Updated on

ವಿಜಯಪುರ: ನಾಯಕತ್ವ ಬದಲಾವಣೆ ವಿಚಾರ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಊಹಾಪೋಹಗಳು ಶುರುವಾಗಿರುವ ನಡುವಲ್ಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಪರಿಗಣಿಸುವಂತೆ ಪಕ್ಷದ ಹೈಕಮಾಂಡ್'ಗೆ ದಲಿತ ನಾಯಕರು ಒತ್ತಾಯಿಸಿದ್ದಾರೆ.

ಜಿಲ್ಲಾ ಛಲವಾದಿ ಮಹಾಸಭಾ ಮತ್ತು ಬುದ್ಧ ವಿಹಾರ ನಿರ್ಮಾಣ ಸಮಿತಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ಕಾಂಗ್ರೆಸ್ ನಾಯಕರು ಮತ್ತು ದಲಿತ ನಾಯಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.

ಕರ್ನಾಟಕ ರಚನೆಯಾದಾಗಿನಿಂದಲೂ ದಲಿತ ಸಮುದಾಯದ ಯಾವುದೇ ಒಬ್ಬ ನಾಯಕನೂ ಕೂಡ ಸಿಎಂ ಆಗಿಲ್ಲ. ಕರ್ನಾಟಕದಲ್ಲಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಬಲ ನೀಡಿದ್ದರೂ ದಲಿತ ಸಮುದಾಯದ ನಾಯಕರನ್ನು ಸಿಎಂ ಆಗಿ ನೇಮಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಅಂಕಿಅಂಶಗಳ ದತ್ತಾಂಶ ಮತ್ತು ಸಮೀಕ್ಷೆಗಳನ್ನು ಉಲ್ಲೇಖಿಸಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ದಲಿತ ಸಮುದಾಯವು ಪ್ರಮುಖ ಮತದಾರರ ನೆಲೆಯಾಗಿದೆ ಎಂದು ಪ್ರತಿಪಾದಿಸಿದರು.

ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲಿ ಬೃಹತ್ ದಲಿತ ಸಮಾವೇಶ ನಡೆಸುವ ಯೋಜನೆಯನ್ನು ಇದೇ ವೇಳೆ ನಾಯಕರು ಪ್ರಕಟಿಸಿದರು

Dr. g. Parameshwar
ನಿಲ್ಲದ CM ಕುರ್ಚಿ ಫೈಟ್‌; ನಾಳೆ 'ಕೈ' ಸಭೆ, ದಲಿತ ಸಿಎಂ ವಿಚಾರ ಪ್ರಸ್ತಾಪ ಸಾಧ್ಯತೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com