ಕಿರಣ್ ಮಜುಂದಾರ್-ಶಾ ಟ್ವೀಟ್ ನಂತರ ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಿದ ಬಿಬಿಎಂಪಿ!

ಬೇಗೂರು ಮತ್ತು ಅರೆಕೆರೆ ವ್ಯಾಪ್ತಿ ಪ್ರದೇಶವು ಐಟಿ ಕಾರಿಡಾರ್‌ನ ಭಾಗವಾಗಿದ್ದು ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕಿಸುತ್ತದೆ, ಇದು ಹಲವಾರು ವ್ಯಾಪಾರ ಸಂಸ್ಥೆಗಳು ಮತ್ತುಸ್ಟಾರ್ಟ್ ಅಪ್ ಕಂಪನಿಗಳನ್ನು ಹೊಂದಿದೆ.
BBMP staffers fill potholes on Begur Road near Bommanahalli
ರಸ್ತೆ ಗುಂಡಿ ಮುಚ್ಚುತ್ತಿರುವ ಬಿಬಿಎಂಪಿ
Updated on

ಬೆಂಗಳೂರು: ಬೊಮ್ಮನಹಳ್ಳಿ ವಲಯದ ಬೇಗೂರು ಮತ್ತು ಅರೆಕೆರೆ ವ್ಯಾಪ್ತಿಯಲ್ಲಿ ಗುಂಡಿಗಳನ್ನು ಸರಿಪಡಿಸಿರುವ ಬಿಬಿಎಂಪಿಯು ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸುತ್ತಿದೆ. ಈ ಪ್ರದೇಶವು ಐಟಿ ಕಾರಿಡಾರ್‌ನ ಭಾಗವಾಗಿದ್ದು ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕಿಸುತ್ತದೆ, ಇದು ಹಲವಾರು ವ್ಯಾಪಾರ ಸಂಸ್ಥೆಗಳು ಮತ್ತುಸ್ಟಾರ್ಟ್ ಅಪ್ ಕಂಪನಿಗಳನ್ನು ಹೊಂದಿದೆ.

ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ವ್ಯಾಪ್ತಿಗೆ ಬರುವ ಬೇಗೂರು, ಬೃಂದುವನ ಲೇಔಟ್ ಮತ್ತು ಅರೆಕೆರೆಯ ಮೈಕೋ ಲೇಔಟ್‌ಗೆ ಸಂಪರ್ಕ ಕಲ್ಪಿಸುವ ವಿಟ್ಟಸಂದ್ರ ಮುಖ್ಯರಸ್ತೆಯಲ್ಲಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಡಾಂಬರು ಮತ್ತು ಟಾರ್ ಹಾಕುವಿಕೆಯನ್ನು ಪರಿಶೀಲಿಸಿದರು.

ನವೆಂಬರ್‌ನಲ್ಲಿ, ಬಯೋಕಾನ್ ಸಂಸ್ಥಾಪಕ ಕಿರಣ್ ಮಜುಂದಾರ್-ಶಾ ಅವರು ಹದಗೆಟ್ಟ ರಸ್ತೆಯ ಸ್ಥಿತಿಯನ್ನು ಎತ್ತಿ ತೋರಿಸಿದರು. ರಸ್ತೆ ಡಾಂಬರೀಕರಣದ ಕೆಲಸವನ್ನು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ELCITA) ಗೆ ಹಸ್ತಾಂತರಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದರು, ಏಕೆಂದರೆ ELCITA ತನ್ನ ಎಲ್ಲಾ ರಸ್ತೆಗಳನ್ನು ಉತ್ತಮವಾಗಿ ನಿರ್ವಹಿಸಿದೆ ಎಂದು ಅವರು ಹೇಳಿದರು.

ಕೆಟ್ಟ ರಸ್ತೆ ಮೂಲಸೌಕರ್ಯದಿಂದ ಬಳಲುತ್ತಿರುವ ಈ ಐಟಿ ಬೆಲ್ಟ್‌ನಲ್ಲಿ ವಾಹನ ಚಾಲಕರು ಮತ್ತು ಕಚೇರಿಗೆ ಹೋಗುವವರ ಸಮಸ್ಯೆ ಬಗ್ಗೆ ವಿವರಿಸಿದ್ದರು. ಇದಾದ ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ನಗರ ತಜ್ಞರು ಮತ್ತು ಇತರ ಕಾರ್ಪೊರೇಟ್‌ಗಳನ್ನು ಭೇಟಿಯಾಗಿ ಚರ್ಚಿಸಿ ಉತ್ತಮ ಮೂಲಸೌಕರ್ಯಗಳನ್ನು ನಿರ್ಮಿಸಲು ಸರ್ಕಾರದೊಂದಿಗೆ ಸಹಕರಿಸುವಂತೆ ಸೂಚಿಸಿದ್ದರು.

BBMP staffers fill potholes on Begur Road near Bommanahalli
Bengaluru: ಗುಂಡಿ ಮುಚ್ಚಲು ರಸ್ತೆ ಮಧ್ಯೆ ಬಿದಿರು ಸೋಫಾ ಹಾಕಿದ ಸ್ಥಳೀಯರು; ಎಚ್ಚೆತ್ತು ರಸ್ತೆ ದುರಸ್ತಿ ಮಾಡಿದ BWSSB!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com