Bengaluru: ಗುಂಡಿ ಮುಚ್ಚಲು ರಸ್ತೆ ಮಧ್ಯೆ ಬಿದಿರು ಸೋಫಾ ಹಾಕಿದ ಸ್ಥಳೀಯರು; ಎಚ್ಚೆತ್ತು ರಸ್ತೆ ದುರಸ್ತಿ ಮಾಡಿದ BWSSB!

ಉತ್ತರಹಳ್ಳಿಯ ಗುಬ್ಬಲಾಳ ಮುಖ್ಯರಸ್ತೆ ಮತ್ತು ಪೈಪ್‌ಲೈನ್ ರಸ್ತೆಯ ಜಂಕ್ಷನ್‌ನಲ್ಲಿ ಇತ್ತೀಚೆಗೆ ಗುಂಡಿ ಕಾಣಿಸಿಕೊಂಡಿದ್ದು, ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಿತ್ತು ಎಂದು ಕನಕಪುರ ರಸ್ತೆಯ 80+ ವಸತಿ ಗುಂಪುಗಳ ಒಕ್ಕೂಟದ ಸದಸ್ಯರೊಬ್ಬರು ತಿಳಿಸಿದ್ದಾರೆ.
Concerned about the safety of commuters, a local placed a bamboo sofa
ಬಿದಿರು ಸೋಫಾದಿಂದ ರಸ್ತೆ ಗುಂಡಿ ಮುಚ್ಚಿದ ಸ್ಥಳೀಯರು
Updated on

ಬೆಂಗಳೂರು: ಬೆಂಗಳೂರಿನ ಗುಬ್ಬಲಾಳ ಮುಖ್ಯರಸ್ತೆಯಲ್ಲಿನ ಬೃಹತ್ ಗುಂಡಿ ಕ್ಷಣಾರ್ಧದಲ್ಲಿ ಕಣ್ಮರೆಯಾಗಿದೆ. ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವ ಸ್ಥಳೀಯರು, ಸಾಮಾಜಿಕ ಪ್ರಜ್ಞೆಯುಳ್ಳ ನಿವಾಸಿ ಗುಂಪು ಮತ್ತು ಮಾಜಿ ಕಾರ್ಪೊರೇಟರ್ ಇದಕ್ಕೆ ಕಾರಣರಾಗಿದ್ದಾರೆ. ಹೀಗಾಗಿ ಈ ನಿರ್ಣಾಯಕ ಜಂಕ್ಷನ್‌ನಲ್ಲಿ ವಾಹನ ಸವಾರರು ಈಗ ಸುರಕ್ಷಿತವಾಗಿ ಪ್ರಯಾಣಿಸಬಹುದು.

ಉತ್ತರಹಳ್ಳಿಯ ಗುಬ್ಬಲಾಳ ಮುಖ್ಯರಸ್ತೆ ಮತ್ತು ಪೈಪ್‌ಲೈನ್ ರಸ್ತೆಯ ಜಂಕ್ಷನ್‌ನಲ್ಲಿ ಇತ್ತೀಚೆಗೆ ಗುಂಡಿ ಕಾಣಿಸಿಕೊಂಡಿದ್ದು, ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಿತ್ತು ಎಂದು ಕನಕಪುರ ರಸ್ತೆಯ 80+ ವಸತಿ ಗುಂಪುಗಳ ಒಕ್ಕೂಟದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಯಾರೋ ಭಾನುವಾರ (ಡಿಸೆಂಬರ್ 29) ರಸ್ತೆ ಗುಂಡಿಯ ಮೇಲೆ ಶಿಥಿಲವಾದ, ಬಿದಿರಿನ ಸೋಫಾವನ್ನು ತಂದು ಇರಿಸಿದ್ದಾರೆ, ಇದರಿಂದಾಗಿ ಸಾರ್ವಜನಿಕರು ಆ ಸ್ಥಳದಲ್ಲಿ ಉಂಟಾಗಬಹುದಾದ ಅಪಾಯ ತಪ್ಪಿಸಬಹುದು ಹಾಗೂ ಸುರಕ್ಷಿತವಾಗಿ ಪ್ರಯಾಣಿಸಬಹುದಾಗಿದೆ. ಈ ಜಂಕ್ಷನ್ ವಿಶೇಷವಾಗಿ ರಾತ್ರಿ ಸಮಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಏಕೆಂದರೆ ಈ ಪ್ರದೇಶದಲ್ಲಿ ಸರಿಯಾಗಿ ಬೆಳಕಿಲ್ಲ ಎಂದು ಸದಸ್ಯರು ವಿವರಿಸಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಅದರ ಕೆಳಗೆ ಪೈಪ್‌ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರ ರಸ್ತೆ ಈ ಸ್ಥಿತಿ ತಲುಪಿದೆ.

Concerned about the safety of commuters, a local placed a bamboo sofa
15 ನಿಮಿಷದ ಮಾರ್ಗ, ಕ್ರಮಿಸಲು ಬೇಕು 90 ನಿಮಿಷ: BWSSB ಗೆ ಜನತೆ ಹಿಡಿಶಾಪ

CMKR ಸ್ಥಳೀಯ ದೂರುಗಳನ್ನು ದಾಖಲಿಸಬಹುದಾದ 'ನಮ್ಮ ಬೆಂಗಳೂರು' ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಿ ಫೋಟೋಗಳೊಂದಿಗೆ ಭಾನುವಾರ ಸಮಸ್ಯೆಯನ್ನು ಹೈಲೈಟ್ ಮಾಡಿದೆ. ಆದರೆ ಆ ಕಡೆಯಿಂದ ಬಂದ ಪ್ರತಿಕ್ರಿಯೆ ಆಘಾತ ತರುವಂತಾದ್ದಾಗಿತ್ತು ಎಂದು ಹೇಳಿದರು. ಸಮಸ್ಯೆ ಅಪ್ರಸ್ತುತ ಎಂದು ಹೇಳಲಾಯಿತು.

ಆದರೆ ಇದನ್ನು ಇಷ್ಟಕ್ಕೆ ಬಿಡದ ವಸತಿ ನಿವಾಸಿಗಳ ಗುಂಪು ಸೋಮವಾರ ಬೆಳಗ್ಗೆ ಉತ್ತರಹಳ್ಳಿ ವಾರ್ಡ್‌ನ ಬಿಜೆಪಿ ಮಾಜಿ ಕಾರ್ಪೊರೇಟರ್ (ನಂ. 184) ಹನುಮಂತಯ್ಯ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ವಿವರಿಸಿತು. ರಸ್ತೆ ಗುಂಡಿ ಅಪಾಯ ತಪ್ಪಿಸಲು ರಸ್ತೆ ಮಧ್ಯದಲ್ಲಿ ಸೋಫಾ ಹಾಕಿರುವ ಹಾಸ್ಯಾಸ್ಪದ ದೃಶ್ಯದ ಫೋಟೋಗಳನ್ನು ತೋರಿಸಿದ್ದಾರೆ. ಅದಾದ ಕೆಲವೇ ಗಂಟೆಗಳಲ್ಲಿ ರಸ್ತೆ ಸಮಸ್ಯೆ ಪರಿಹರಿಸಲಾಗಿದೆ.

ನಾನು ನನ್ನ ಪಕ್ಷದ ಕೆಲವು ಕಾರ್ಯಕರ್ತರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ನಾವು ಸಮಸ್ಯೆಯನ್ನು ಜಲಮಂಡಳಿಯ ಗಮನಕ್ಕೂ ತಂದಿದ್ದೇವೆ. ಕೆಲವು ಭಾರೀ ವಾಹನಗಳು ಈ ರಸ್ತೆಯಲ್ಲಿ ಹಾದು ಹೋದ ಕಾರಣದಿಂದ ಸಮಸ್ಯೆ ಎದುರಾಗಿದೆ. ನನ್ನ ತಂಡದ ಸದಸ್ಯರು ಮತ್ತು BWSSB ಯ ಕಾರ್ಯಕರ್ತರು ಜಂಟಿಯಾಗಿ ತೆರಳಿ ಕೆಲಸ ಮಾಡಿ ಸಂಜೆಯ ವೇಳೆಗೆ ಗುಂಡಿ ತುಂಬಿ ಮುಚ್ಚಲಾಯಿತು ಎಂದು ಹನುಮಂತಯ್ಯ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಸ್ಥಳದಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಹಾಕಲಾಗಿದೆ ಮತ್ತು ತಾತ್ಕಾಲಿಕವಾಗಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿಎಂಕೆಆರ್ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com