15 ನಿಮಿಷದ ಮಾರ್ಗ, ಕ್ರಮಿಸಲು ಬೇಕು 90 ನಿಮಿಷ: BWSSB ಗೆ ಜನತೆ ಹಿಡಿಶಾಪ

ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ಮಾರ್ಗಗಳ ಒದಗಿಸಲು ನಿರ್ಧರಿಸಲಾಗಿದೆ. ಹೀಗಾಗಿ ಕಾಮಗಾರಿ ನಡೆಯುತ್ತಿದ್ದು, ಸಮಸ್ಯೆ ಎದುರಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಗೇರ್ ಸ್ಕೂಲ್ ರಸ್ತೆಯಲ್ಲಿ ಒಳಚರಂಡಿ ಮಾರ್ಗಗಳನ್ನು ಅಳವಡಿಸಲು 80 ಅಡಿ ರಸ್ತೆಯನ್ನು ಅಗೆದಿದ್ದು, ಇದರ ಪರಿಣಾಮ ವೈಟ್‌ಫೀಲ್ಡ್ ಮತ್ತು ಸುತ್ತಮುತ್ತಲಿನ ನಿವಾಸಿಗಳು ಭಾರೀ ಸಂಚಾರ ದಟ್ಟಣೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

15 ನಿಮಿಷಗಳಲ್ಲಿ ಸಂಚರಿಸಬಹುದಾದ ರಸ್ತೆಯಲ್ಲಿ ಇಂದು 1 ರಿಂದ 1.5 ಗಂಟೆಗಳ ಸಮಯವಾಗುತ್ತಿದೆ. ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

GEAR ಸ್ಕೂಲ್ ರಸ್ತೆಯಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಕಾಮಗಾರಿ ಕಳೆದ ಎಂಟು ತಿಂಗಳಿನಿಂದಲೂ ನಡೆಯುತ್ತಿದೆ. ರಸ್ತೆಯ ತುಂಬ ಧೂಳು ತುಂಬಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಈ ರಸ್ತೆಯಲ್ಲಿ 5 ಶಾಲೆಗಳಿದ್ದು, ಫ್ಲಿಪ್‌ಕಾರ್ಟ್, ಇಂಟೆಲ್, ಇಎಕ್ಸ್‌ಎಲ್‌ನಂತಹ ಐಟಿ ಕಂಪನಿಗಳ ಕಚೇರಿಗಳಿವೆ. ಬಿಡಬ್ಲ್ಯುಎಸ್‌ಎಸ್‌ಬಿ ಕಾಮಗಾರಿಯಿಂದಾಗಿ ಈ ರಸ್ತೆಯಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ. ಮಕ್ಕಳು ಮತ್ತು ಕಚೇರಿಗೆ ಹೋಗುವವರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಏರ್ ಪೋರ್ಟ್ ರಸ್ತೆಯಲ್ಲಿ ಸಂಚಾರ ದಟ್ಟಣೆ: ಸಮಸ್ಯೆ ಪರಿಹಾರಕ್ಕೆ ಹೆದ್ದಾರಿ ಪ್ರಾಧಿಕಾರದೊಂದಿಗೆ ಕೃಷ್ಣ ಬೈರೇಗೌಡ ಸಭೆ

ಇದು ಬಿಡಬ್ಲ್ಯುಎಸ್‌ಎಸ್‌ಬಿ ಮತ್ತು ಬಿಬಿಎಂಪಿಯ ಅಸಮರ್ಥ ನಿರ್ವಹಣೆಯಾಗಿದೆ. ಯಾವುದೇ ಚುನಾಯಿತ ಪ್ರತಿನಿಧಿಗಳು ಕಾಳಜಿ ತೋರುತ್ತಿಲ್ಲ ಎಂದು ನಿವಾಸಿ ಅಶೋಕ್ ಮೃತ್ಯುಂಜಯ ಅವರು ಹೇಳಿದ್ದಾರೆ.

ಕಾವೇರಿ 5 ಹಂತ ಯೋಜನೆಯಲ್ಲಿರುವ ಬಿಡಬ್ಲ್ಯುಎಸ್‌ಎಸ್‌ಬಿ ಹಿರಿಯ ಎಂಜಿನಿಯರ್ ಒಬ್ಬರು ಮಾತನಾಡಿ, ಕಳೆದ ವಾರ ಮಂಡಳಿಯು ಸಭೆ ನಡೆಸಿ ಪಾಣತ್ತೂರು, ಕರಿಯಮ್ಮನ ಅಗ್ರಹಾರದಂತಹ ಪ್ರದೇಶಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸುವ ಮೂಲಕ ರಸ್ತೆಯನ್ನು ಯಥಾಸ್ಥಿತಿಗೆ ತರಲು ನಿರ್ಧರಿಸಿದೆ. ಕಾಡುಬೀಸನಹಳ್ಳಿಯಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.

ಡಿಲಿಮಿಟೇಶನ್ ನಂತರ ಈ ಗ್ರಾಮಗಳನ್ನು ಬಿಬಿಎಂಪಿ ವ್ಯಾಪ್ತಿಗೆ ತರಲಾಗಿದ್ದು, ಇದರ ಬೆನ್ನಲ್ಲೇ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ಮಾರ್ಗಗಳ ಒದಗಿಸಲು ನಿರ್ಧರಿಸಲಾಗಿದೆ. ಹೀಗಾಗಿ ಕಾಮಗಾರಿ ನಡೆಯುತ್ತಿದ್ದು, ಸಮಸ್ಯೆ ಎದುರಿಸಲೇಬೇಕಿದೆ. ಒಂದು ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಗುತ್ತಿಗೆದಾರರು ಡಿಸೆಂಬರ್ 2ನೇ ವಾರದಲ್ಲಿ ಕೆಲಸ ಪ್ರಾರಂಭಿಸುತ್ತಿದ್ದಾರೆ. ಒಂದು ವಾರದಲ್ಲಿ 1.5 ಕಿ.ಮೀ ವ್ಯಾಪ್ತಿಯಲ್ಲಿರುವ ರಸ್ತೆಯ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com