ಮದೀನಾದಲ್ಲಿ ಯಾತ್ರಾರ್ಥಿಗಳನ್ನು ಕೈಬಿಟ್ಟ ಟ್ರಾವೆಲ್ ಏಜೆನ್ಸಿ: ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರಲು ಮಾಜಿ ಶಾಸಕ ಬಾವಾ ನೆರವು!

172 ಯಾತ್ರಿಕರ ಪೈಕಿ ನೂರಕ್ಕೂ ಹೆಚ್ಚು ಯಾತ್ರಿಕರು ತಮ್ಮ ಸಂಬಂಧಿಕರ ಸಹಾಯದಿಂದ ಹಣ ಸಂಗ್ರಹಿಸಿ ಭಾರತಕ್ಕೆ ಮರಳಿದ್ದಾರೆ. ಆದರೆ ಮಹಿಳೆಯರು, ವೃದ್ಧರು ಸೇರಿದಂತೆ 58 ಜನರು ಯಾವುದೇ ಸಹಾಯವಿಲ್ಲದೆ ಕಂಗಾಲಾಗಿದ್ದರು.
Ex-MLA Bava
ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ
Updated on

ಮಂಗಳೂರು: ಮೆಕ್ಕಾ- ಮದೀನಾ ಯಾತ್ರೆಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ 172 ಯಾತ್ರಾರ್ಥಿಗಳನ್ನು ಟ್ರಾವೆಲ್ ಏಜೆನ್ಸಿಯೊಂದು ಮದೀನಾದಲ್ಲಿ ಕೈಬಿಟ್ಟಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ, ತಮ್ಮ ಸ್ನೇಹಿತರ ಸಹಾಯದಿಂದ ಆ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದಿದ್ದಾರೆ.

ಕಬಕದ ಮೊಹಮ್ಮದಿಯ ಟ್ರಾವೆಲ್ ಏಜೆನ್ಸಿ 17 ದಿನಗಳ ಹಿಂದೆ 172 ವ್ಯಕ್ತಿಗಳನ್ನು ಉಮ್ರಾ ಯಾತ್ರೆಗೆ ಕರೆದೊಯ್ದಿತ್ತು. ಮೊದಲಿಗೆ ಮೆಕ್ಕಾ ನಗರಕ್ಕೆ ಬಳಿಕ ಮದೀನಾ ನಗರಕ್ಕೆ ಯಾತ್ರಿಕರನ್ನು ಕರೆದೊಯ್ಯಲಾಗಿದೆ. ಬಳಿಕ ಏಜೆನ್ಸಿಯ ವ್ಯಕ್ತಿ ಯಾತ್ರಿಕರನ್ನು ಅಲ್ಲಿಯೇ ಬಿಟ್ಟು ಭಾರತಕ್ಕೆ ಮರಳಿದ್ದಾರೆ. ಇದರಿಂದಾಗಿ ದಿಕ್ಕು ತೋಚದಂತಾದ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಬಾವಾ ಸುದ್ದಿಗಾರರಿಗೆ ತಿಳಿಸಿದರು.

172 ಯಾತ್ರಿಕರ ಪೈಕಿ ನೂರಕ್ಕೂ ಹೆಚ್ಚು ಯಾತ್ರಿಕರು ತಮ್ಮ ಸಂಬಂಧಿಕರ ಸಹಾಯದಿಂದ ಹಣ ಸಂಗ್ರಹಿಸಿ ಭಾರತಕ್ಕೆ ಮರಳಿದ್ದಾರೆ. ಆದರೆ ಮಹಿಳೆಯರು, ವೃದ್ಧರು ಸೇರಿದಂತೆ 58 ಜನರು ಯಾವುದೇ ಸಹಾಯವಿಲ್ಲದೆ ಕಂಗಾಲಾಗಿದ್ದರು. ಆಹಾರ, ಔಷಧ, ವಸತಿ ಇಲ್ಲದೇ ದಿನನಿತ್ಯದ ಜೀವನ ಸಾಗಿಸಲು ಪರದಾಡುತ್ತಿದ್ದರು.

ಈ ಪರಿಸ್ಥಿತಿಯ ಬಗ್ಗೆ ತಿಳಿದ ಮೊಹಿಯುದ್ದೀನ್ ಬಾವಾ ಕೂಡಲೇ ಸೌದಿ ಅರೇಬಿಯಾದಲ್ಲಿರುವ ತಮ್ಮ ಸ್ನೇಹಿತರು ಮತ್ತು ವಿವಿಧ ಸಂಸ್ಥೆಗಳನ್ನು ಸಂಪರ್ಕಿಸಿದ್ದು, ಪ್ರಯಾಣ ವೆಚ್ಚಕ್ಕಾಗಿ ಹಣ ಸಂಗ್ರಹಿಸಿದ್ದಾರೆ. ಬಳಿಕ ಮಂಗಳೂರು, ಕಣ್ಣೂರು, ಕ್ಯಾಲಿಕಟ್ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳ ಮೂಲಕ ಅವರೆಲ್ಲರೂ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ.

Ex-MLA Bava
ಮೆಕ್ಕಾ ಯಾತ್ರೆ ವೇಳೆ ದುರಂತ: ತೀವ್ರ ಶಾಖಕ್ಕೆ 92 ಭಾರತೀಯ ಹಜ್ ಯಾತ್ರಿಕರು ಸಾವು!

ಸಾರ್ವಜನಿಕರನ್ನು ವಂಚಿಸುವ ವಂಚಕ ಟ್ರಾವೆಲ್ ಏಜೆನ್ಸಿಗಳು, ವಿಶೇಷವಾಗಿ ತಮ್ಮ ಗ್ರಾಹಕರಿಗೆ ಕೇವಲ ಡಮ್ಮಿ ರಿಟರ್ನ್ ಟಿಕೆಟ್‌ ಒದಗಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಏಜೆನ್ಸಿಗಳ ಪರವಾನಿಗೆಯನ್ನು ರದ್ದುಪಡಿಸಬೇಕು, ವಂಚನೆಗೆ ಅನುಕೂಲ ಮಾಡಿಕೊಡುವ ಅಧಿಕಾರಿಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಬಾವಾ ಒತ್ತಾಯಿಸಿದ್ದಾರೆ.

ಹಲವು ಸಂತ್ರಸ್ತರು ಘಟನೆಯ ಬಗ್ಗೆ ದೂರುಗಳನ್ನು ಸಲ್ಲಿಸಿದ್ದು, ಸ್ಥಳೀಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ದೂರುಗಳನ್ನು ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com