JDS ಮುಖಂಡನ ಬರ್ಬರ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಲೋಕಸಭಾ ಚುನಾವಣೆಯಲ್ಲಿ ಅರವಿಂದ್ ಎಂಬವರಿಗೆ ಹಣ ನೀಡಲಿಲ್ಲ ಎಂದು ಬಾರ್ ಒಂದರಲ್ಲಿ ಮೃತ ವೆಂಕಟೇಶ್ ಹಾಗೂ ಧನರಾದ್ ನಡುವೆ ಗಲಾಟೆ ನಡೆದಿತ್ತು.
ಜೆಡಿಎಸ್ ಮುಖಂಡ ಎನ್.ವೆಂಕಟೇಶ್
ಜೆಡಿಎಸ್ ಮುಖಂಡ ಎನ್.ವೆಂಕಟೇಶ್
Updated on

ಚಿಕ್ಕಬಳ್ಳಾಪುರ: ಜೆಡಿಎಸ್ ಮುಖಂಡ ವೆಂಕಟೇಶ್ ಅಲಿಯಾಸ್ ಗೋಲ್ಡ್ ವೆಂಕಟೇಶ್ (50) ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಧನು ಅಲಿಯಾಸ್ ಧನರಾಜ್ ಹಾಗೂ ಆತನ ಸಹಚರ ಸತೀಶ್ ಎಂದು ಗುರುತಿಸಲಾಗಿದೆ. ಹಳೆ ದ್ವೇಷ ಹಿನ್ನಲೆ ಹತ್ಯೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಲೋಕಸಭಾ ಚುನಾವಣೆಯಲ್ಲಿ ಅರವಿಂದ್ ಎಂಬವರಿಗೆ ಹಣ ನೀಡಲಿಲ್ಲ ಎಂದು ಬಾರ್ ಒಂದರಲ್ಲಿ ಮೃತ ವೆಂಕಟೇಶ್ ಹಾಗೂ ಧನರಾದ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಧನುಗೆ ವೆಂಕಟೇಶ್ ಹಿಗ್ಗಾ ಮುಗ್ಗಾ ಹೊಡೆದಿದ್ದ ಎನ್ನಲಾಗಿದೆ.

ನಂತರ ಧನು ಪರವಾಗಿ ರಾಜೀ ಮಾಡಲು ಮುಂದಾಗಿದ್ದ ಸತೀಶ್‍ಗೂ ವೆಂಕಟೇಶ್ ಹೊಡೆದು ಕಳಿಸಿದ್ದು, ಇದಾದ ಬಳಿಕ ಧನು, ಸತೀಶ್ ಎಲ್ಲಿ ಸಿಕ್ಕರೂ ವೆಂಕಟೇಶ್ ವಾರ್ನಿಂಗ್ ಕೊಡಲು ಶುರು ಮಾಡಿದ್ದು, ದೂರು ಕೊಟ್ಟರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಆವಾಜ್ ಹಾಕುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಇದೇ ವಿಚಾರಕ್ಕೆ ವೆಂಕಟೇಶ್‍ನನ್ನು ಆರೋಪಿಗಳು ಜ.3ರ ರಾತ್ರಿ ಹತ್ಯೆ ಮಾಡಿದ್ದರು ಎಂದು ವರದಿಗಳು ತಿಳಿದುಬಂದಿದೆ.

ಜೆಡಿಎಸ್ ಮುಖಂಡ ಎನ್.ವೆಂಕಟೇಶ್
ಚಿಕ್ಕಬಳ್ಳಾಪುರ: ನಡುರಸ್ತೆಯಲ್ಲೇ ಕೊಚ್ಚಿ ಜೆಡಿಎಸ್​ ಮುಖಂಡನ ಬರ್ಬರ ಕೊಲೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com