Ongoing road works on Major Sandeep Unnikrishnan Road.
ಸಂದೀಪ್ ಉನ್ನಿಕೃಷ್ಣನ್ ರಸ್ತೆ ದುರಸ್ತಿ ಕಾರ್ಯ

Aero India ಬೆಂಗಳೂರು: ಆಮೆಗತಿ ವೇಗದ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ನಾಗರಿಕ ಸಂಸ್ಥೆಗಳು ಮುಂದು!

ಏರೋ ಇಂಡಿಯಾ 2025 ಫೆಬ್ರವರಿ 10 ರಿಂದ 14 ರವರೆಗೆ ಐದು ದಿನ ನಡೆಯಲಿದೆ.
Published on

ಬೆಂಗಳೂರು: ಏರೋ ಇಂಡಿಯಾ 2025ಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗ, ಲಕ್ಷಗಟ್ಟಲೆ ಸಂದರ್ಶಕರು ಮತ್ತು ಭಾಗವಹಿಸುವವರ ಅಗತ್ಯತೆಗಳನ್ನು ಪೂರೈಸಲು ನಾಗರಿಕ ಏಜೆನ್ಸಿಗಳು ಸಜ್ಜಾಗುತ್ತಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಯಲಹಂಕದ ವಾಯುಸೇನೆ ನಿಲ್ದಾಣಕ್ಕೆ ಹೋಗುವ ರಸ್ತೆಗಳನ್ನು ಮೇಲ್ದರ್ಜೆಗೇರಿಸುತ್ತಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಸುಮಾರು 25 ಮಿಲಿಯನ್ ಲೀಟರ್ ಕಾವೇರಿ ನೀರನ್ನು ಪೂರೈಸಲು ಸಿದ್ಧವಾಗಿದೆ. ಐದು ದಿನಗಳ ಈ ಕಾರ್ಯಕ್ರಮ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿದೆ.

ಮುಖ್ಯ ಕಾರ್ಯದರ್ಶಿಗಳು ಈಗಾಗಲೇ ನಾಗರಿಕ ಏಜೆನ್ಸಿಗಳೊಂದಿಗೆ ಅವರ ಸಿದ್ಧತೆ ಬಗ್ಗೆ ತಿಳಿದುಕೊಳ್ಳಲು ಒಂದೆರಡು ಸಭೆಗಳನ್ನು ನಡೆಸಿದ್ದಾರೆ. ಪ್ರತಿ ಏಜೆನ್ಸಿಯು ಕಾರ್ಯಕ್ರಮಕ್ಕಾಗಿ ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಿದೆ.

ಏರ್ ಶೋಗೆ ಪ್ರತಿದಿನ 4 ರಿದ 5 ಮಿಲಿಯನ್ ಲೀಟರ್ (ಎಂಎಲ್‌ಡಿ) ಕಾವೇರಿ ನೀರು ಬೇಕಾಗುತ್ತದೆ ಎಂದು ನಮಗೆ ತಿಳಿಸಲಾಗಿದೆ. ಅದಕ್ಕೆ ಸಂಪೂರ್ಣವಾಗಿ 25 ಎಂಎಲ್ ಡಿ ನೀರು ಪೂರೈಸುವ ಸ್ಥಿತಿಯಲ್ಲಿ ನಾವಿದ್ದೇವೆ. ನಾವು ನಮ್ಮ ನೀರಿನ ಪೂರೈಕೆಯನ್ನು ಸರಿಹೊಂದಿಸುತ್ತೇವೆ . ವಾಯುಪಡೆಗೆ ಮೀಸಲಾದ ನೀರಿನ ಪೈಪ್‌ಲೈನ್ ಇದೆ ಮತ್ತು ಅದರ ಮೂಲಕ ನೀರನ್ನು ಸಾಗಿಸಲಾಗುತ್ತದೆ ಎಂದು BWSSB ಮೂಲವು TNIE ಗೆ ತಿಳಿಸಿದೆ. ಅಲ್ಲದೆ, ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗಾಗಿ ಮರುಬಳಕೆಯ ನೀರನ್ನು ತೃತೀಯ ಶುದ್ಧೀಕರಣ ಘಟಕದ ಮೂಲಕ ಸರಬರಾಜು ಮಾಡಲಾಗುತ್ತದೆ ಎಂದಿದ್ದಾರೆ.

Ongoing road works on Major Sandeep Unnikrishnan Road.
Aero India 2025: ಏರೋ ಇಂಡಿಯಾ ಏರ್ ಶೋಗೆ ಡೇಟ್ ಫಿಕ್ಸ್; ರಕ್ಷಣಾ ಇಲಾಖೆ ಮಾಹಿತಿ

ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಸಂಸ್ಥೆ 15 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಇಂಜಿನಿಯರ್ ಇನ್ ಚೀಫ್ ಬಿಎಸ್ ಪ್ರಹ್ಲಾದ್ ತಿಳಿಸಿದ್ದಾರೆ. ನಾವು ಹೇಗಾದರೂ ಅವುಗಳನ್ನು ಸುಧಾರಿಸಲು ಯೋಜಿಸುತ್ತಿದ್ದೆವು ಆದರೆ ಮುಂಬರುವ ಏರ್ ಶೋನಿಂದಾಗಿ ಈಗ ಕೆಲಸದ ವೇಗವನ್ನು ಹೆಚ್ಚಿಸುತ್ತಿದ್ದೇವೆ. ಜನವರಿ 30 ರೊಳಗೆ ನಾವು ಮೂರು ಪ್ರಮುಖ ರಸ್ತೆಗಳ ಒಟ್ಟು 18.5 ಕಿಲೋಮೀಟರ್‌ಗಳ ಕೆಲಸವನ್ನು ಪೂರ್ಣಗೊಳಿಸುತ್ತೇವೆ, ಈ ರಸ್ತೆಗಳು ಏರ್ ಶೋ ನಡೆಯುವ ಸ್ಥಳಕ್ಕೆ ಹೋಗುವ ನಿರ್ಣಾಯಕವಾಗಿವೆ ಎಂದು ಅವರು ಹೇಳಿದರು.

ಸಂದೀಪ್ ಉನ್ನಿಕೃಷ್ಣನ್ ರಸ್ತೆಯು ರಾಜಾಜಿನಗರ ಮತ್ತು ಮಹಾಲಕ್ಷ್ಮಿ ಲೇಔಟ್‌ನಿಂದ ಯಲಹಂಕಕ್ಕೆ ಸುಮಾರು 13 ಕಿಲೋಮೀಟರ್‌ಗಳವರೆಗೆ ಚಲಿಸುತ್ತದೆ, ಇದು ನಗರದ ಪಶ್ಚಿಮ ಭಾಗದಿಂದ ಹೋಗುವವರಿಗೆ ಪ್ರಮುಖ ಸಂಪರ್ಕ ಕಲ್ಪಿಸುತ್ತದೆ.

ಒಟ್ಟು 7 ಕಿ.ಮೀ ರಸ್ತೆ ಸುಸ್ಥಿತಿಯಲ್ಲಿದೆ. ಹಲವೆಡೆ ರಸ್ತೆ ಕಡಿತಗೊಂಡಿದ್ದು, 10 ಕೋಟಿ ರೂಪಾಯಿ ವೆಚ್ಚವಾಗಬಹುದಾದ್ದರಿಂದ ಉಳಿದ ಭಾಗಕ್ಕೆ ಡಾಂಬರೀಕರಣ ಮಾಡುತ್ತೇವೆ. ಬಾಗಲೂರು ಮುಖ್ಯರಸ್ತೆಯಲ್ಲಿ 3.5 ಕಿ.ಮೀ ಹಾಗೂ ಕೋಗಿಲು ರಸ್ತೆಯಲ್ಲಿ 2 ಕಿಲೋಮೀಟರ್‌ವರೆಗೆ ಲೇನ್‌ ಮಾರ್ಕಿಂಗ್‌ ಮಾಡಲಿದ್ದೇವೆ ಎಂದು ಹೇಳಿದರು. ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿರುವ ಕೆಲವು ರಸ್ತೆಗಳನ್ನು PWD ನವೀಕರಿಸಲಿದೆ ಎಂದು ಪ್ರಹ್ಲಾದ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com