HMPV ಹೊಸ ವೈರಸ್ ಅಲ್ಲ, ಭಾರತದಲ್ಲಿ ಮೊದಲ ಕೇಸ್ ಪತ್ತೆ ಎಂಬುದು ನಿಜವಲ್ಲ: ಆರೋಗ್ಯ ಸಚಿವ

ಭಾರತದಲ್ಲಿ ಇದು ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಆದರೆ, ಇದು ನಿಜವಲ್ಲ. ಎಚ್‌ಎಂಪಿವಿ ಹೊಸ ವೈರಸ್ ಅಲ್ಲ. ಅಸ್ತಿತ್ವದಲ್ಲಿರು ವೈರಸ್. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ.
Dinesh Gundu Rao
ದಿನೇಶ್ ಗುಂಡೂರಾವ್
Updated on

ಬೆಂಗಳೂರು: ಎಚ್‌ಎಂಪಿವಿ ಹೊಸ ವೈರಸ್ ಅಲ್ಲ. ಇದು ಅಸ್ತಿತ್ವದಲ್ಲಿರುವ ವೈರಸ ಆಗಿದೆ. ಆಂತಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಗುವೊಂದರಲ್ಲಿ ಎಚ್‌ಎಂಪಿವಿ ಸೋಂಕು ಪತ್ತೆಯಾಗಿರುವ ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಭಾರತದಲ್ಲಿ ಇದು ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಆದರೆ, ಇದು ನಿಜವಲ್ಲ. ಎಚ್‌ಎಂಪಿವಿ ಹೊಸ ವೈರಸ್ ಅಲ್ಲ. ಅಸ್ತಿತ್ವದಲ್ಲಿರು ವೈರಸ್. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಈ ವೈರಸ್ ನಿಂದ ಉಸಿರಾಟದ ತೊಂದರೆ ಸಮಸ್ಯೆ ಸಾಧ್ಯತೆ ಇದೆ. ಈ ವೈರಸ್​ ಕಡಿಮೆ ಇಮ್ಯೂನಿಟಿ ಹೊಂದಿರುವ ಮಕ್ಕಳಿಗೆ ಬರುತ್ತೆ. ಮಗುವಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಮಗು ಹಾಗೂ ಪೋಷಕರು ಸ್ಥಳೀಯರಾಗಿದ್ದಾರೆ. ಇಲ್ಲಿ ಕಂಡುಬಂದಿರುವ ವೈರಸ್​ಗೂ, ಚೀನಾ ವೇರಿಯಂಟ್​ಗೂಐ ಸಂಬಂಧವಿಲ್ಲ. ಇದರ ಬಗ್ಗೆ ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

Dinesh Gundu Rao
ಭಾರತಕ್ಕೂ ಕಾಲಿಟ್ಟ HMPV ವೈರಸ್: ಬೆಂಗಳೂರಿನ ಆಸ್ಪತ್ರೆಯಲ್ಲಿ ಮೊದಲ ಪ್ರಕರಣ ಪತ್ತೆ; 8 ತಿಂಗಳ ಮಗುವಿಗೆ ಸೋಂಕು

ಪ್ರಸ್ತುತ ಮಗುವಿಗೆ ಯಾವುದೇ ಸಮಸ್ಯೆ ಇಲ್ಲ. ಸ್ಯಾಂಪಲ್​ನ್ನು ಪುಣೆ ಲ್ಯಾಬ್​ಗೆ ಕಳುಹಿಸುತ್ತೇವೆ. ಇದರ ಬಗ್ಗೆ ಐಸಿಎಂಆರ್, ಕೇಂದ್ರದಿಂದ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡುತ್ತೇವೆ. ಎಲ್ಲಾ ಕಡೆ ಟೆಸ್ಟ್​ ಮಾಡುತ್ತೇವೆ. ಇದರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುತ್ತೇವೆ ಎಂದು ಹೇಳದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com