ಮಂಗಳೂರು: ಪೆಟ್ರೋಲ್​ ಬಂಕ್​ ನಲ್ಲಿ ಸ್ಕ್ಯಾನಿಂಗ್ ಗೆ ತನ್ನದೇ QR ಕೋಡ್ ಇಟ್ಟ ಸಿಬ್ಬಂದಿ; 58 ಲಕ್ಷ ರೂ ವಂಚನೆ

ಬಂಗ್ರಕೂಳೂರಿನಲ್ಲಿರುವ ರಿಯಲನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ 15 ವರ್ಷಗಳಿಂದ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಮೋಹನದಾಸ್ ಎಂಬಾತ ಕೃತ್ಯಎಸಗಿದ್ದಾನೆ.
Representational image
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ಬಂಕ್‌ನ ಸಿಬ್ಬಂದಿಯೇ ಸಂಸ್ಥೆಯ QR ಕೋಡ್ ಬದಲಿಗೆ ತನ್ನ ವೈಯಕ್ತಿಕ QR ಕೋಡ್ ಬಳಸಿ ಮಾಲೀಕನಿಗೆ 58ಲಕ್ಷ ರೂ. ವಂಚಿಸಿರುವ ಘಟನೆ ನಗರದ ಬಂಗ್ರಕೂಳೂರಿನ ರಿಲಯನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.

ಬಂಗ್ರಕೂಳೂರಿನಲ್ಲಿರುವ ರಿಯಲನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ 15 ವರ್ಷಗಳಿಂದ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಮೋಹನದಾಸ್ ಎಂಬಾತ ಕೃತ್ಯಎಸಗಿದ್ದಾನೆ.

ಈತನು ಬಂಕ್‌ನ ಹಣಕಾಸು ವ್ಯವಹಾರ ನಿರ್ವಹಣೆ ಮಾಡಿಕೊಳ್ಳುತ್ತಿದ್ದ. ಆರೋಪಿಯು 2023 ಮಾರ್ಚ್ 1 ರಿಂದ 2023 ಜುಲೈ 31ರವರೆಗೆ ರಿಯಲನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ QR Code ತೆಗೆದು ತನ್ನ ವೈಯಕ್ತಿಕ ಖಾತೆಯ QR Code ಹಾಕಿದ್ದನು.

ಗ್ರಾಹಕರು ಬಂಕ್‌ ಕ್ಯೂಆರ್ ಕೋಡ್ ಎಂದು ನಂಬಿ “Mohandas Kulur Retail Outlet” ಲಿಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೊಟ್ಟಾರ ಶಾಖೆಗೆ ಹಣ ಜಮೆ ಮಾಡುತ್ತಿದ್ದರು. ಹೀಗೆ ಖಾತೆಗೆ ಒಟ್ಟು 58,85,333 ರೂ. ಹಣವನ್ನು ವರ್ಗಾಯಿಸಿದ್ದಾನೆ.

Representational image
ಬೆಂಗಳೂರು: ವಂಚನೆ ಪ್ರಕರಣದಲ್ಲಿ ಐಶ್ವರ್ಯಾ ಗೌಡ, ಅವರ ಪತಿ ಮತ್ತೆ ಬಂಧನ

ಈ ರೀತಿ ಜಮೆ ಮಾಡಿಕೊಂಡು ದ್ರೋಹ ಎಸಗಿದ್ದಾನೆ ಎಂದು ಇದೀಗ ಮಂಗಳೂರು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಆರೋಪಿ ವಿರುದ್ಧ ರಿಲಯನ್ಸ್​​ ಕಂಪನಿ ಮ್ಯಾನೇಜರ್​ ಸಂತೋಷ್​​ ಮ್ಯಾಥ್ಯೂ ದೂರು ನೀಡಿದ್ದು, ಮಂಗಳೂರಿನ ಸೈಬರ್​ ಕ್ರೈಂ ಮತ್ತು ಎಕನಾಮಿಕ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮೋಹನದಾಸನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com