ಬಳ್ಳಾರಿ: 6 ಕೋಟಿ ರೂ ಮೌಲ್ಯದ 24 ಕ್ವಿಂಟಾಲ್ ಜೋಳದ ಚೀಲದಲ್ಲಿ ಹುಳಗಳು ಪತ್ತೆ, ಉಪ ಲೋಕಾಯುಕ್ತ ಪರಿಶೀಲನೆ

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ನಿನ್ನೆ ಶುಕ್ರವಾರ ಕೆಎಸ್‌ಡಬ್ಲ್ಯೂಸಿಯ ಯುನಿಟ್ -2 ರ ಗೋದಾಮಿಗೆ ಭೇಟಿ ನೀಡಿದಾಗ ಇದು ಬೆಳಕಿಗೆ ಬಂದಿತು. ಒಟ್ಟಾರೆಯಾಗಿ, ತಲಾ 50 ಕೆಜಿ ತೂಕದ 48,000 ಚೀಲ ಜೋಳದಲ್ಲಿ ಹುಳು ಪತ್ತೆಯಾಗಿದೆ.
Upa Lokayukta Justice B Veerappa at a godown in Ballari on Friday
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಗೋದಾಮಿನಲ್ಲಿ ಪರಿಶೀಲನೆ
Updated on

ಬೆಂಗಳೂರು: ಬಳ್ಳಾರಿಯಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ (KSWC) ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಸುಮಾರು 24,000 ಕ್ವಿಂಟಾಲ್ ಜೋಳ ಸೇವನೆಗೆ ಯೋಗ್ಯವಲ್ಲ ಎಂದು ತಿಳಿದುಬಂದಿದೆ. ಹುಳದಿಂದ ಕೂಡಿದ ಜೋಳವನ್ನು ಬಳ್ಳಾರಿ ಜಿಲ್ಲೆ ಮತ್ತು ಸುತ್ತಮುತ್ತಲಿನ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಸಲಾಗಿದೆ.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ನಿನ್ನೆ ಶುಕ್ರವಾರ ಕೆಎಸ್‌ಡಬ್ಲ್ಯೂಸಿಯ ಯುನಿಟ್ -2 ರ ಗೋದಾಮಿಗೆ ಭೇಟಿ ನೀಡಿದಾಗ ಇದು ಬೆಳಕಿಗೆ ಬಂದಿತು. ಒಟ್ಟಾರೆಯಾಗಿ, ತಲಾ 50 ಕೆಜಿ ತೂಕದ 48,000 ಚೀಲ ಜೋಳದಲ್ಲಿ ಹುಳ ಪತ್ತೆಯಾಗಿದೆ.

ನ್ಯಾಯಮೂರ್ತಿ ವೀರಪ್ಪ, ಉಪ ನೋಂದಣಾಧಿಕಾರಿ ಅರವಿಂದ್ ಎನ್.ವಿ ಮತ್ತು ಇತರರು ಪ್ರಶ್ನಿಸಿದಾಗ, ಕೆಎಸ್‌ಡಬ್ಲ್ಯುಸಿಯ ಬಳ್ಳಾರಿ ಘಟಕದ ವ್ಯವಸ್ಥಾಪಕಿ ಶರಾವತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸಕಿನಾ ಅವರು ಮಾರ್ಚ್ 29, 2024 ರಂದು ಭಾರತೀಯ ಆಹಾರ ನಿಗಮದಿಂದ (FCI) ಜೋಳ ಸೇವನೆಗೆ ಯೋಗ್ಯವಾಗಿದೆ ಎಂದು ಪ್ರಮಾಣಪತ್ರವನ್ನು ಪಡೆದಿದ್ದೇವೆ ಎಂದು ಹೇಳಿದರು. ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲು ಜೋಳವನ್ನು ಹಾವೇರಿ ಮತ್ತು ಇತರ ಜಿಲ್ಲೆಗಳಿಗೆ ಕಳುಹಿಸಲಾಗಿದೆ.

Upa Lokayukta Justice B Veerappa at a godown in Ballari on Friday
ಬೆಂಗಳೂರು: ಪ್ರಯಾಣಿಕರಿಗೆ ಮತ್ತೊಂದು ಹೊರೆ! ಮೆಟ್ರೋ ಪ್ರಯಾಣ ದರ ಶೇ.43ರಷ್ಟು ಏರಿಕೆ ಸಾಧ್ಯತೆ

ಉಪ ಲೋಕಾಯುಕ್ತರು, ಜೋಳವು ಪ್ರಾಣಿಗಳು ಸಹ ತಿನ್ನಲು ಯೋಗ್ಯವಲ್ಲ ಎಂದು ಹೇಳಿದರು. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಟ್ಟಾರೆಯಾಗಿ 48,000 ಚೀಲ ಜೋಳ ವ್ಯರ್ಥವಾಯಿತು ಎಂದು ಅವರು ಹೇಳಿದರು. ನ್ಯಾಯಮೂರ್ತಿ ವೀರಪ್ಪ ಅವರ ವಾಗ್ವಾದದಿಂದ ಅಸಮಾಧಾನಗೊಂಡ ಶರಾವತಿ, ಗೋದಾಮಿಗೆ ಭೇಟಿ ನೀಡಿದ್ದನ್ನು ದೃಢೀಕರಿಸಲು ಜಿಪಿಎಸ್‌ಗೆ ಲಿಂಕ್ ಮಾಡುವ ಫೋಟೋವನ್ನು ಒದಗಿಸುವಂತೆ ಕೇಳಿದರು.

ಇದಕ್ಕೆ ನ್ಯಾಯಮೂರ್ತಿ ವೀರಪ್ಪ, ವ್ಯವಸ್ಥಾಪಕರು ತಮ್ಮ ಭೇಟಿಯ ಪುರಾವೆಯನ್ನು ಕೋರಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಇದು ಅವರು ನಮ್ಮನ್ನು ಪ್ರಶ್ನಿಸುವ ಹಂತವನ್ನು ತಲುಪಿದ್ದಾರೆಂದು ತೋರಿಸುತ್ತದೆ ಎಂದು ಹೇಳಿದರು.

ಈ ಪರಿಸ್ಥಿತಿ ದುರದೃಷ್ಟಕರ. ಸಂಬಂಧಪಟ್ಟ ಸಚಿವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ತೆರಿಗೆದಾರರ ಹಣವನ್ನು ಬಳಸಿ ಜೋಳವನ್ನು ಖರೀದಿಸಲಾಗಿದ್ದು ಅದನ್ನು ಈ ರೀತಿ ವ್ಯರ್ಥ ಮಾಡಬಾರದು ಎಂದು ಹೇಳಿದರು. ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com