ಬೆಂಗಳೂರು: ಅರಮನೆ ಮೈದಾನದಲ್ಲಿ ಬ್ರಾಹ್ಮಣ ಸಮಾವೇಶ; ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬದಲಿ ಮಾರ್ಗ ಸೂಚನೆ

ಈ ಸಂದರ್ಭದಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಲಿರುವುದರಿಂದ ಬೆಂಗಳೂರು ಸಂಚಾರಿ ಪೊಲೀಸರು ಅರಮನೆ ಮೈದಾನ ರಸ್ತೆ ಮತ್ತು ಬಳ್ಳಾರಿ ರಸ್ತೆಯಲ್ಲಿ ಸಂಚಾರ ನಿಯಂತ್ರಣ ಮಾಡಿ ಪರ್ಯಾಯ ಮಾರ್ಗಗಗಳನ್ನು ಜನತೆಗೆ ಸೂಚಿಸಿದ್ದಾರೆ.
Road in front of palace ground in Bengaluru
ಬೆಂಗಳೂರಿನ ಅರಮನೆ ಮೈದಾನದ ಮುಂದಿನ ರಸ್ತೆ
Updated on

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಇಂದು ಶನಿವಾರ ಮತ್ತು ನಾಳೆ ಭಾನುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ “ಬ್ರಾಹ್ಮಣ ಮಹಾ ಸಮ್ಮೇಳನ” ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸರ್ಕಾರದಿಂದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​, ಇತರೆ ಸಚಿವರುಗಳು, ಸಮಾಜದ ವಿವಿಧ ಮಠಾಧೀಶರು, ಗಣ್ಯರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಹಸ್ರ ಸಂಖ್ಯೆಯಲ್ಲಿ ವಿಪ್ರ ಬಾಂಧವರು ಸೇರಲಿದ್ದಾರೆ.

ಈ ಸಂದರ್ಭದಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಲಿರುವುದರಿಂದ ಬೆಂಗಳೂರು ಸಂಚಾರಿ ಪೊಲೀಸರು ಅರಮನೆ ಮೈದಾನ ರಸ್ತೆ ಮತ್ತು ಬಳ್ಳಾರಿ ರಸ್ತೆಯಲ್ಲಿ ಸಂಚಾರ ನಿಯಂತ್ರಣ ಮಾಡಿ ಪರ್ಯಾಯ ಮಾರ್ಗಗಗಳನ್ನು ಜನತೆಗೆ ಸೂಚಿಸಿದ್ದಾರೆ.

ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ವಿಂಡ್ಸರ್​ಮ್ಯಾನರ್ ಜಂಕ್ಷನ್-ಬಿ.ಡಿ.ಎ ಅಪ್‌ರ್ಯಾಂವ್-ರಮಣಮಹರ್ಷಿ ರಸ್ತೆಯ ಪಿ.ಜಿ.ಹಳ್ಳಿ ಬಸ್ ನಿಲ್ದಾಣ-ಕಾವೇರಿ ಜಂಕ್ಷನ್ ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆ-ಮೇಕ್ರಿ ಸರ್ಕಲ್ ಬಲ ಯೂತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಗೇಟ್ ನಂ-01 ಕೃಷ್ಣವಿಹಾರ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.

ವಾಪಾಸು ಹೋಗುವಾಗ ಗೇಟ್ ನಂ-01 ಕೃಷ್ಣವಿಹಾರ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ಅಮಾನುಲ್ಲಾ ಖಾನ್ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು, ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.

ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಕ್ರಿ ಸರ್ಕಲ್ ಅಂಡರ್ ಪಾಸ್‌ನಲ್ಲಿ ಬಂದು ಗೇಟ್ ನಂ-01 ಕೃಷ್ಣವಿಹಾರ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕ್​ ಮಾಡಿ, ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.

ವಾಪಾಸ್ಸು ಹೋಗುವಾಗ ಗೇಟ್ ನಂ-01 ಕೃಷ್ಣವಿಹಾರ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ಅಮಾನುಲ್ಲಾ ಖಾನ್ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು, ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.

ಯಶವಂತಪುರ ಕಡೆಯಿಂದ ಬರುವ ವಾಹನಗಳು ಸರ್.ಸಿ.ವಿ.ರಾಮನ್ ರಸ್ತೆಯ ಬಿ.ಹೆಚ್.ಇ.ಎಲ್ ಸರ್ಕಲ್-ಸದಾಶಿವನಗರ ಪಿ.ಎಸ್ ಜಂಕ್ಷನ್-ಮೇಕ್ರಿ ಸರ್ಕಲ್ ಬಲತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಗೇಟ್ ನಂ-01 ಕೃಷ್ಣ ವಿಹಾರ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಸ್ಥಳ ತಲುಪಬಹುದು.

ವಾಪಾಸ್ಸು ಹೋಗುವಾಗ ಗೇಟ್ ನಂ- 01 ಕೃಷ್ಣವಿಹಾರ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ಅಮಾನುಲ್ಲಾ ಖಾನ್ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು, ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.

ಕಂಟೋನ್‌ಮೆಂಟ್ (ದಂಡು) ರೈಲ್ವೆ ಸ್ಟೇಷನ್ ಕಡೆಯಿಂದ ಬರುವ ವಾಹನಗಳು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿ.ವಿ.ಟವರ್ ಜಂಕ್ಷನ್-ಮೇಕ್ರಿ ಸರ್ಕಲ್ ಎಡತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಗೇಟ್ ನಂ-01 ಕೃಷ್ಣವಿಹಾರ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.

ವಾಪಾಸ್ಸು ಹೋಗುವಾಗ ಗೇಟ್ ನಂ-01 ಕೃಷ್ಣ-ವಿಹಾರ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ಅಮಾನುಲ್ಲಾ ಖಾನ್ ಗೇಟ್ ಜಯಮಹಲ್ ರಸ್ತೆಯಲ್ಲಿ, ಹೊರಬಂದು ಕಂಟೋನ್‌ಮೆಂಟ್ (ದಂಡು) ರೈಲ್ವೆ ಸ್ಟೇಷನ್ ಕಡೆಗೆ ಹೋಗಬಹುದಾಗಿದೆ.

ಟೆಂಪೋ ಟ್ರಾವೆಲರ್, ಕಾರುಗಳು ಮತ್ತು ದ್ವಿಚಕ್ರ ವಾಹನಗಳಲ್ಲಿ ಬರುವವರು ಬಳಸಬೇಕಾದ ಮಾರ್ಗ

ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ವಿಂಡ್ಕರ್​ಮ್ಯಾನರ್ ಜಂಕ್ಷನ್‌-ಬಿ.ಡಿ.ಎ ರ್ಯಾಂಪ್​-ರಮಣಮಹರ್ಷಿ ರಸ್ತೆಯ ಹಿಜೆ ಹಳ್ಳಿ ಬಸ್ ನಿಲ್ದಾಣ-ಕಾವೇರಿ ಜಂಕ್ಷನ್ ಮೇತ್ರಿ ಸರ್ಕಲ್ ಸರ್ವಿಸ್ ರಸ್ತೆ-ಮೇಕ್ರಿ ಸರ್ಕಲ್ ಬಲ ಯೂಟರ್ನ್​​ ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ, ಗೇಟ್ ನಂ-01 ತ್ರಿಮರವಾಸಿನಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.

ವಾಪಾಸ್ಸು ಹೋಗುವಾಗ ಗೇಟ್ ನಂ-01 ಕೃಷ್ಣವಿಹಾರ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ಅಮಾನುಲ್ಲಾ ಖಾನ್ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು, ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.

ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಕ್ರಿ ಸರ್ಕಲ್ ಅಂಡರ್ ಪಾಸ್‌ನಲ್ಲಿ ಬಂದು- ಗೇಟ್ ನಂ 01 ಕೃಷ್ಣ ವಿಹಾರ ಅರಮನೆ ಮೈದಾನದಲ್ಲಿ ವಾಹನಗಳನ್ನು ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ಸೂಚಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.

ವಾಪಾಸ್ಸು ಹೋಗುವಾಗ ಗೇಟ್ ನಂ-01 ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ಅಮಾನುಲ್ಲಾ ಖಾನ್ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು. ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.

ಯಶವಂತಪುರ ಕಡೆಯಿಂದ ಬರುವ ವಾಹನಗಳು ಸರ್.ಸಿ.ವಿ.ರಾಮನ್ ರಸ್ತೆಯ ಬಿಹೆಚ್​ಇಎಲ್​ ಸರ್ಕಲ್-ಸದಾಶಿವನಗರ ಪಿ.ಎಸ್ ಜಂಕ್ಷನ್-ಮೇಕ್ರಿ ಸರ್ಕಲ್ ಬಲತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ನಂ-01 ಕೃಷ್ಣವಿಹಾರ ಅರಮನೆ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.

ವಾಪಾಸ್ಸು ಹೋಗುವಾಗ ಗೇಟ್ ನಂ-01 ಕೃಷ್ಣವಿಹಾರ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ವೈಟ್ ಪೆಟಲ್ಸ್ ಹುಣಿಸೆಮರ ಗೇಟ್ ಜಯಮಹಲ್ ರಸ್ತೆಯಲ್ಲಿ ಹೊರಬಂದು. ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಮತ್ತು ಒಳಗಡೆ ಹೋಗಬಹುದಾಗಿದೆ.

ಕಂಟೋನ್‌ಮೆಂಟ್ (ದಂಡು) ರೈಲ್ವೆ ಸ್ಟೇಷನ್ ಕಡೆಯಿಂದ ಬರುವ ವಾಹನಗಳು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿ.ವಿ.ಟವರ್ ಜಂಕ್ಷನ್-ಮೇಕ್ರಿ ಸರ್ಕಲ್ ಎಡ ತಿರುವು ಪಡೆದು ಮೇಕ್ರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ- ಅರಮನೆ ಮೈದಾನದಲ್ಲಿ ವಾಹನಗಳನ್ನು ಗೇಟ್ ನಂ-01 ಕೃಷ್ಣವಿಹಾರ ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದು.

ವಾಪಾಸ್ಸು ಹೋಗುವಾಗ ಗೇಟ್ ಗೇಟ್ ನಂ-01 ಕೃಷ್ಣ ವಿಹಾರ ಅರಮನೆ ಮೈದಾನದಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳು ಗೇಟ್ ಅಮಾನುಲ್ಲಾ ಖಾನ್ ಗೇಟ್ ಜಯಮಹಲ್ ರಸ್ತೆಯಲ್ಲಿ, ಹೊರಬಂದು ಕಂಟೋನ್ಮೆಂಟ್ (ದಂಡು) ರೈಲ್ವೆ ಸ್ಟೇಷನ್ ಕಡೆಗೆ ಹೋಗಬಹುದಾಗಿರುತ್ತದೆ.

ಬದಲಿ ಮಾರ್ಗಗಳು

ಅರಮನೆ ರಸ್ತೆ : ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ವಸಂತನಗರ ಅಂಡರ್‌ಪಾಸ್​ವರೆಗೆ

ಎಂ.ವಿ.ಜಯರಾಮರಸ್ತೆ : ಅರಮನೆರಸ್ತೆ, ಬಿ.ಡಿ.ಎ.ಜಂಕ್ಷನ್ ನಿಂದ ಚಕ್ರವರ್ತಿ ಲೇಔಟ್​ ಸೇರಿದಂತೆ ವಸಂತನಗರ ಅಂಡರ್ ಪಾಸ್ ನಿಂದ ಹಳೆ ಉದಯ ಟಿ.ವಿ. ಜಂಕ್ಷನ್ ವರೆಗೆ. (ಎರಡು ದಿಕ್ಕಿನಲ್ಲಿ)

ಬಳ್ಳಾರಿ ರಸ್ತೆ: ಎಲ್.ಆರ್.ಡಿ.ಇ. ಯಿಂದ ಹೆಬ್ಬಾಳವರೆಗೆ

ಕನ್ನಿಂಗ್ ಹ್ಯಾಂ ರಸ್ತೆ: ಬಾಳೇಕುಂದ್ರಿ ಸರ್ಕಲ್‌ನಿಂದ ಲಿ ಮೆರಿಡಿಯನ್ ಅಂಡರ್​​ ಪಾಸ್​​ವರೆಗೆ

ಮಿಲ್ಲರ್​ ರಸ್ತೆ: ಹಳೆ ಉದಯ ಟಿವಿ ಜಂಕ್ಷನ್​ನಿಂದ ಎಲ್.ಆ‌ರ್.ಡಿ.ಇ ಜಂಕ್ಷನ್​ವರೆಗೆ.

ಜಯಮಹಲ್‌ ರಸ್ತೆ : ಜಯಮಹಲ್‌ ರಸ್ತೆ ಹಾಗೂ ಬೆಂಗಳೂರು ಅರಮನೆಯ ಸುತ್ತಮುತ್ತಲ ರಸ್ತೆಗಳು

ಯಶವಂತಪುರ ಮತ್ತು ಮೇಖಿ ಸರ್ಕಲ್ ರಸ್ತೆ : ಯಶವಂತಪುರ-ಟಾಟಾ ವಿಜ್ಞಾನ ಸಂಸ್ಥೆ-ಮೇಖಿ ಸರ್ಕಲ್‌ವರೆಗೆ

ವಾಹನ ನಿಲುಗಡೆ ನಿಷೇಧ ಮಾಡಿರುವ ರಸ್ತೆಗಳು

ಪ್ಯಾಲೇಸ್‌ ರಸ್ತೆ, ಎಂ.ವಿ. ಜಯರಾಮರಸ್ತೆ, ಜಯಮಹಲ್ ರಸ್ತೆ, ಸಿ.ಎ. ರಾಮನ್ ರಸ್ತೆ, ವಸಂತನಗರರಸ್ತೆ, ರಮಣಮಹರ್ಷಿರಸ್ತೆ, ನಂದಿದುರ್ಗರಸ್ತೆ, ಬಳ್ಳಾರಿ ರಸ್ತೆ, ಮೌಂಟ್‌ ಕಾರ್ಮೆಲ್ ಮೇಖಿ ಸರ್ಕಲ್​ನಿಂದ ತರಳಬಾಳು ರಸ್ತೆ, ಕಾಲೇಜ್ ರಸ್ತೆ, ಯಶವಂತಪುರ ರಸ್ತೆವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com