
ರಾಯಚೂರು: ಅತ್ಯುನ್ನತ ವ್ಯಾಸಂಗ, ಐಎಎಸ್-ಐಪಿಎಸ್ ಗಳೇ ಭವಬಂಧನಗಳನ್ನು ತೊರೆದು ಸನ್ಯಾಸಿಗಳಾಗುತ್ತಿದ್ದರೆ. ಅದೇ ರೀತಿ ರಾಯಚೂರಿನ ಜಿಲ್ಲಾಧಿಕಾರಿಯಾಗಿದ್ದ ಐಆರ್ ಪೆರಮಾಳ್ ಅವರು ಮಹಾಕುಂಭ ಮೇಳದಲ್ಲಿ ಪ್ರತ್ಯಕ್ಷರಾಗಿದ್ದು ಅವರ ಫೋಟೋ ವೈರಲ್ ಆಗಿದೆ.
ಹೌದು... 1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್ ಪೆರುಮಾಳ್ ಅವರು ಈಗ ಸನ್ಯಾಸಿಯಾಗಿ ಮಹಾಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜೀವನದ ಪಾರಮಾರ್ಥ ಅರಿತು ಸನ್ಯಾಸ ಸ್ವೀಕರಿಸಿದ್ದಾರೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ.
ಐ.ಆರ್ ಪೆರುಮಾಳ್ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಇನ್ನು ರಾಜ್ಯದ ನಾನಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು 2012ರಲ್ಲಿ ನಿವೃತ್ತರಾಗಿದ್ದು 2014ರಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯ ಇರಂಜುಮುಡಿ ಶಿವನ ದೇವಾಲಯ ಬಳಿ ಮಠ ಕಟ್ಟಿಕೊಂಡಿದ್ದರು. ನಂತರಸನ್ಯಾಸತ್ವ ಸ್ವೀಕರಿಸಿ ಶಿವಯೋಗಿ ಪೆರುಮಾಳ್ ಸ್ವಾಮೀಜಿ ಆಗಿದ್ದು ಇದೀಗ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
Advertisement