Maha Kumbh 2025: ಕುಂಭ ಮೇಳದಿಂದ 'ಐಐಟಿ ಬಾಬಾ' ಹೊರಕ್ಕೆ? ಕಾರಣ ಏನು? Abhey Singh ಹೇಳಿದ್ದೇನು?

ಮಹಾಕು೦ಭ ಮೇಳ ಶುರುವಾದ ಮೊದಲ ದಿನದಿ೦ದಲೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐಐಟಿ ಬಾಬಾ ಎ೦ದೇ ಖ್ಯಾತಿ ಪಡೆದಿದ್ದ ಅಭಯ್‌ ಸಿ೦ಗ್‌ ರನ್ನು ಇದೀಗ ಮಹಾಕುಂಭಮೇಳದಿಂದ ಹೊರಗೆ ಹಾಕಲಾಗಿದೆ.
IITian Baba Expelled
ಐಐಟಿ ಬಾಬಾ ಅಭಯ್ ಸಿಂಗ್
Updated on

ಪ್ರಯಾಗ್ ರಾಜ್: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಆಕರ್ಷಣೆಗಳಲ್ಲಿ ಒಂದಾಗಿದ್ದ 'ಐಐಟಿ ಬಾಬಾ' ಖ್ಯಾತಿಯ ಅಭಯ್ ಸಿಂಗ್ ರನ್ನು ಕುಂಭಮೇಳದಿಂದ ಹೊರ ಕಳುಹಿಸಲಾಗಿದೆ.

ಹೌದು.. ಮಹಾಕು೦ಭ ಮೇಳ ಶುರುವಾದ ಮೊದಲ ದಿನದಿ೦ದಲೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐಐಟಿ ಬಾಬಾ ಎ೦ದೇ ಖ್ಯಾತಿ ಪಡೆದಿದ್ದ ಅಭಯ್‌ ಸಿ೦ಗ್‌ ರನ್ನು ಇದೀಗ ಮಹಾಕುಂಭಮೇಳದಿಂದ ಹೊರಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.

ಇಷ್ಟಕ್ಕೂ ಯಾರು ಈ ಐಐಟಿ ಬಾಬಾ?

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕು೦ಭ ಮೇಳದಲ್ಲಿ ಜನರ ಗಮನ ಸೆಳೆಯುತ್ತಿದ್ದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ ತಮ್ಮ ಅಪಾರ ಜ್ನಾನದಿಂದ ಆಕರ್ಷಣೆಯಾಗಿದ್ದರು.

ಹಲವು ವಿದ್ಯೆಗಳಲ್ಲಿ ಪಂಡಿತರಾಗಿರುವ ಅಭಯ್‌ ಸಿ೦ಗ್‌ (ಐಐಟಿ ಬಾಬಾ), ಹೆಚ್ಚಿನ ಸಂಬಳದ ಉದ್ಯೋಗವನ್ನೂ ಕೂಡ ಬಿಟ್ಟು ಆಧ್ಯಾತ್ಮದತ್ತ ಮುಖ ಮಾಡಿರುವುದು ಅವರ ಬಹುತೇಕರ ಅಚ್ಚರಿಗೆ ಕಾರಣವಾಗಿತ್ತು, ಇದೇ ಕಾರಣಕ್ಕೆ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಐಐಟಿ ಬಾಬಾ ತನ್ನ ವೈಚಾರಿಕತೆ, ಅಧ್ಯಯನ, ಅಪಾರ ಜ್ಞಾನಕ್ಕೆ ಹೆಸರುವಾಸಿ ಆಗಿದ್ದರು.

IITian Baba Expelled
Maha kumbh 2025: 'ನಾನು ಸಾಧ್ವಿ ಅಲ್ಲ.. ಮಾರ್ಗದಲ್ಲಿದ್ದೇನೆ...'; ಕಣ್ಣೀರು ಹಾಕಿದ 'ಸುಂದರ' ಸಾಧ್ವಿ Harsha Richhariya

ಮನೆಗೆ ವಾಪಸ್ ಆಗುವಂತೆ ಪೋಷಕರ ಆಗ್ರಹ

ಇನ್ನು ಮನೆ ಮತ್ತು ಸಂಬಂಧಿಕರನ್ನು ತೊರೆದು ಸನ್ಯಾಸ್ಯತ್ವ ಸ್ವೀಕರಿಸಿರುವ ಅಭಯ್ ಸಿಂಗ್ ರನ್ನು ಅವರ ತಂದೆ ಮನೆಗೆ ಬರುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಕೆಲ ಯೂಟ್ಯೂಬ್ ಚಾನಲ್ ಗಳು ಹಾಗೂ ಕೆಲ ಮಾಧ್ಯಮಗಳು ಅಭಯ್ ಸಿಂಗ್ ಗೆ ಮಾಹಿತಿ ನೀಡಿದಾಗ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸಂದರ್ಶನಗಳಿಂದ ಅಭಯ್ ಸಿಂಗ್ ಮನಃಸ್ಥಿತಿ ಹಾಳು

ಮಹಾಕು೦ಭ ಮೇಳದಲ್ಲಿ ಕಾಣಿಸಿಕೊ೦ಡ ಅಭಯ್‌ ಸಿ೦ಗ್‌, ಕೇವಲ ಒ೦ದೇ ದಿನಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಐಐಟಿ ಬಾಬಾ ಎ೦ಬ ಹೆಸರಿನಿ೦ದ ಭಾರೀ ವೈರಲ್‌ ಆದರು. ಇದರಿ೦ದ ಕು೦ಭ ಮೇಳದಲ್ಲಿ ಜನರಿ೦ದ ಹೆಚ್ಚಿನ ಪ್ರಶ೦ಸೆ ಮತ್ತು ಜನಪ್ರಿಯತೆ ಗಳಿಸಿದ ಐಐಟಿ ಬಾಬಾ, ನಿರಂತರ ಸಂದರ್ಶಕರ ಹಾವಳಿಯಿಂದ ತೀವ್ರ ಗೊಂದಲಕ್ಕೊಳಗಾಗಿದ್ದರು. ಮನೆಗೆ ಹಿಂತಿರುಗುವಂತೆ ಹೆತ್ತವರು ಕಣ್ಣೀರಿಟ್ಟಿದ್ದು ಹಾಗೂ ಇದೇ ವಿಚಾರವಾಗಿ ಕೆಲವು ಮಾಧ್ಯಮಗಳ ನಿರ೦ತರ ಪ್ರಶ್ನೆಗಳು ಅಭಯ್‌ರ ಮನಸ್ಥಿತಿ, ನೆಮ್ಮದಿ ಹಾಳು ಮಾಡಿದೆ. ಇದರಿ೦ದ ಬೇಸತ್ತ ಅಭಯ್ ಸಿಂಗ್ ಡ್ರಗ್ಸ್‌ ಮೊರೆ ಕೂಡ ಹೋಗಿದ್ದಾರೆ ಎ೦ದು ಕೆಲವು ಆಶ್ರಮದ ಸಾಧುಗಳು ಹೇಳಿದ್ದಾರೆ.

ಕುಂಭಮೇಳದಿಂದ ಹೊರಹೋಗಲು ಕಾರಣ ಹೇಳಿದ ಅಭಯ್ ಸಿಂಗ್

ಇನ್ನು ನಾಪತ್ತೆ ವದಂತಿಗಳಿಗೆ ಪ್ರತಿಕ್ರಿಯೆ ನೀಡಿರುವ ಅಭಯ್ ಸಿಂಗ್, 'ಇವೆಲ್ಲವೂ ಶುದ್ಧ ಸುಳ್ಳು. ನಾನಿನ್ನು ಮಹಾಕು೦ಭ ಮೇಳದ ಭಾಗವಾಗಿದ್ದೇನೆ. ಅಷ್ಟಕ್ಕೂ ನನ್ನನ್ನು ಆಶ್ರಮದಿ೦ದ ಹೊರಟು ಹೋಗುವಂತೆ ಒತ್ತಾಯಿಸಿದರು. ಹಾಗಾಗಿ ಅಲ್ಲಿಂದ ಹೊರಬ೦ದೆ ಅಷ್ಟೇ. ಆಶ್ರಮದ ನಿರ್ವಾಹಕರು ರಾತ್ರಿಯ೦ದು ನನ್ನನ್ನು ಹೊರ ಹೋಗುವಂತೆ ಆದೇಶಿಸಿದರು. ನನಗೆ ಜನಪ್ರಿಯತೆ ಸಿಗುತ್ತಿರುವ ಹಿನ್ನಲೆ, ಅವರ ಬಗ್ಗೆಗಿನ ಯಾವುದಾದರೂ ವಿಷಯಗಳನ್ನು ನಾನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಬಹುದು ಎ೦ಬುದು ಅವರ ಚಿಂತೆ. ಅದಕ್ಕೆ ಹೋಗಿ ಎ೦ದಿದ್ದಾರೆ” ಎ೦ದು ಐಐಟಿ ಬಾಬಾ ಅಭಯ್ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com