BBMP: ಟ್ರಾಫಿಕ್ ನಿರ್ವಹಣೆಗೆ ₹15,000 ಕೋಟಿ ವೆಚ್ಚದಲ್ಲಿ ಹೊಸ ಪ್ಲಾನ್; ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್, ಅಂಡರ್ ಪಾಸ್ ಪ್ರಸ್ತಾಪ!
ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಕಾಡುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ನಿರ್ವಹಣೆಗೆ 46 ಕಿ. ಮೀ ಉದ್ದದ ಸುರಂಗ ಮಾರ್ಗ ಯೋಜನೆಯನ್ನು ತಜ್ಞರು ರೂಪಿಸುವಂತೆಯೇ ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್, ಅಂಡರ್ ಪಾಸ್ ಒಳಗೊಂಡಂತೆ ಸುಮಾರು ರೂ. 15,000 ಕೋಟಿ ವೆಚ್ಚದ ಒಂದು ಡಜನ್ ಯೋಜನೆಗಳನ್ನು ಬಿಬಿಎಂಪಿ ಪ್ರಸ್ತಾಪಿಸಿದೆ.
ಪ್ರಸ್ತಾವಿತ ಯೋಜನೆಗಳು ಬಿಬಿಎಂಪಿ ಮತ್ತು 124.7 ಕಿಮೀ ವ್ಯಾಪ್ತಿಯನ್ನು ಒಳಗೊಂಡಿವೆ. ಅದರ ಸಮಗ್ರ ಸಂಚಾರ ನಿರ್ವಹಣಾ ಯೋಜನೆಯಲ್ಲಿ ನಗರದ ಸಂಚಾರ ದಟ್ಟಣೆಯನ್ನು ನಿವಾರಿಸುತ್ತದೆ ಎಂದು ಹೇಳಲಾಗಿದೆ.
ನವದೆಹಲಿ ಮೂಲದ ಅಲ್ಟಿನೋಕ್ ಕನ್ಸಲ್ಟಿಂಗ್ ಇಂಜಿನಿಯರಿಂಗ್ ಇಂಕ್ ಸಿದ್ಧಪಡಿಸಿರುವ ಕಾರ್ಯಸಾಧ್ಯತಾ ವರದಿಯ ಪ್ರಕಾರ 11 ಎಲಿವೇಟೆಡ್ ಕಾರಿಡಾರ್ ಯೋಜನೆಗಳಿವೆ. ಅವುಗಳಲ್ಲಿ ಐದಕ್ಕೆ ಸುಮಾರು 10,000 ಕೋಟಿ ರೂ. ವೆಚ್ಚವಾಗಲಿದೆ.
ಐದು ಪ್ರಮುಖ ಎಲಿವೇಟೆಡ್ ಕಾರಿಡಾರ್ ಗಳು: ಯಶವಂತಪುರ (ಮತ್ತಿಕೆರೆ ಕ್ರಾಸ್) IISc-ಮೇಖ್ರಿ ಸರ್ಕಲ್- ಜಯಮಹಲ್-ಸೆಂಟ್ ಜಾನ್ಸ್ ರೋಡ್- ಹಲಸೂರು ಕೆರೆ- ಹಳೆ ಮದ್ರಾಸ್ ರೋಡ್- ಕೆಆರ್ ಪುರಂ ಎಲಿವೇಟೆಡ್ ಕಾರಿಡಾರ್ 27 ಕಿ.ಮೀ ವ್ಯಾಪಿಸಲಿದೆ.
ನಾಗವಾರ ಜಂಕ್ಷನ್-ರಾಮಕೃಷ್ಣ ಹೆಗ್ಡೆ ನಗರ ಜಂಕ್ಷನ್- ಸಂಪಿಗೆಹಳ್ಳಿ- ತಿರುಮೇನಹಳ್ಳಿ- ಬೆಲ್ಲಹಳ್ಳಿ ಜಂಕ್ಷನ್- ಬಾಗಲೂರು ಮುಖ್ಯ ರಸ್ತೆ ಎಲಿವೇಟೆಡ್ ಕಾರಿಡಾರ್ 15 ಕಿ. ಮೀ ಇರಲಿದೆ. KIA ಸಂಪರ್ಕಿಸುವ ಲಿಂಕ್ ರೋಡ್ ಕೂಡಾ ಎಲಿವೇಟೆಡ್ ಕಾರಿಡಾರ್ ಆಗಿದ್ದು, ಅದು ORR- ಹೆಣ್ಣೂರು ಮುಖ್ಯರಸ್ತೆ ಜಂಕ್ಷನ್ ನಿಂದ ಬಾಗಲೂರು ಜಂಕ್ಷನ್ ವರೆಗೂ ಇರಲಿದೆ.
ಮಾರೇನಹಳ್ಳಿ ಮುಖ್ಯ ರಸ್ತೆಯಿಂದ ರಾಗಿಗುಡ್ಡ 7ನೇ ಮುಖ್ಯರಸ್ತೆ, ಕನಕಪುರ ಮುಖ್ಯರಸ್ತೆ ತಲಘಟ್ಟ ಪುರ ನೈಸ್ ರಸ್ತೆವರೆಗೂ 15 ಕಿ.ಮೀ ಎಲಿವೇಟೆಡ್ ಕಾರಿಡಾರ್, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಇಂದಿರಾನಗರ-ದೊಮ್ಮಲೂರು- ಮಡಿವಾಳ ಮಾರ್ಗವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ 10.5 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಪ್ರಸ್ತಾಪಿಸಲಾಗಿದೆ.
ಈ ಐದು ಎಲಿವೇಟೆಡ್ ಕಾರಿಡಾರ್ ಗಳಿಗೆ ರೂ. 9,400 ಕೋಟಿ ವೆಚ್ಚವಾಗಲಿದೆ ಎಂದು ಇಂಜಿನಿಯರ್ ಒಬ್ಬರು ಹೇಳಿದ್ದಾರೆ.
ರಾಜ್ಯ ಬಜೆಟ್ ನಲ್ಲಿ ಅನುದಾನ: ಹೊಸಹಳ್ಳಿಯಿಂದ ಕಡಬಗೆರೆ ಕ್ರಾಸ್‌ವರೆಗೆ ಮಾಗಡಿ ರಸ್ತೆಯಲ್ಲಿ 13 ಕಿಮೀ ಉದ್ದದ ಮೆಟ್ರೊ ಮಾರ್ಗದೊಂದಿಗೆ ಡಬಲ್ ಡೆಕ್ಕರ್ ಎಲಿವೇಟೆಡ್ ಕಾರಿಡಾರ್‌ನಂತಹ ದೊಡ್ಡ ಯೋಜನೆಗಳಿಗೆ 1,560 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಬಿಬಿಎಂಪಿಯ ಹಿರಿಯ ಎಂಜಿನಿಯರ್ ತಿಳಿಸಿದ್ದಾರೆ.
ಪಾಲಿಕೆಯು ಭಾರತೀಯ ರೈಲ್ವೆಯ ಸಹಯೋಗದೊಂದಿಗೆ ಮತ್ತೊಂದು ಡಬಲ್ ಡೆಕ್ಕರ್ ಕಾರಿಡಾರ್ ಅನ್ನು ಪ್ರಸ್ತಾಪಿಸಿದೆ. ಇದು ಮೋಹನ್ ಕುಮಾರ್ ರಸ್ತೆ ಮೂಲಕ ಯಶವಂತಪುರ ರೈಲು ನಿಲ್ದಾಣದ ಹಿಂಭಾಗಕ್ಕೆ BEL ರಸ್ತೆ ಛೇದಕವನ್ನು ಸಂಪರ್ಕಿಸುತ್ತದೆ. 2.2 ಕಿಮೀ ಯೋಜನೆಗೆ 294 ಕೋಟಿ ರೂ.ವೆಚ್ಚವಾಗಲಿದೆ.
ಟ್ರಾಫಿಕ್ ಸುಗಮಗೊಳಿಸಲು ಬಿಬಿಎಂಪಿಯು ಕಡಿಮೆ-ದೂರದ ಎಲಿವೇಟೆಡ್ ಕಾರಿಡಾರ್ ಯೋಜನೆಗಳು, ಫ್ಲೈಓವರ್‌ಗಳು ಮತ್ತು ಅಂಡರ್‌ಪಾಸ್‌ಗಳನ್ನು ಸಹ ಪ್ರಸ್ತಾಪಿಸಿದೆ. ಮುಂಬರುವ ರಾಜ್ಯ ಬಜೆಟ್‌ನಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಗಳು, ಡಬಲ್ ಡೆಕ್ಕರ್ ಮತ್ತು ಅಂಡರ್‌ಪಾಸ್ ಯೋಜನೆಗಳಿಗೆ ಅನುದಾನವನ್ನು ಸೇರಿಸುವ ಸಾಧ್ಯತೆಯಿದೆ.
ಇತರ ಯೋಜನೆಗಳು:
ಮಾಧವ ಮುದಲಿಯಾರ್ ರಸ್ತೆ (ಟ್ಯಾನರಿ ರಸ್ತೆ)ಯಿಂದ ನಾಗವಾರ ಜಂಕ್ಷನ್ ವರೆಗೂ 5.5 ಕಿಮೀ ದೂರದ 660 ಕೋಟಿ ರೂ. ವೆಚ್ಚದ ಯೋಜನೆ
ಯಲಹಂಕ ನ್ಯೂ ಟೌನ್‌ನಿಂದ KIA ಗೆ 4-ಕಿಮೀ ದೂರದ ಎಲಿವೇಟೆಡ್ ಕಾರಿಡಾರ್
ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ ಪೈಪ್‌ಲೈನ್ ರಸ್ತೆ (ನಂದಿನಿ ಲೇಔಟ್) ಮೂಲಕ ಹೊರ ವರ್ತುಲ ರಸ್ತೆಗೆ ರೂ.480 ಕೋಟಿ ವೆಚ್ಚದ ಎಲಿವೇಟೆಡ್ ಕಾರಿಡಾರ್
ಕನಕಪುರದಿಂದ ಬನಶಂಕರಿವರೆಗಿನ ಕೋಣನಕುಂಟೆ ಕ್ರಾಸ್‌ನಲ್ಲಿ 0.9ಕಿಮೀ ಕೆಳಸೇತುವೆ, ಕನಕಪುರ ರಸ್ತೆಯ ಆಡ್ಯಾರ್ ರಘುವನಹಳ್ಳಿಯಲ್ಲಿ 0.8 ಕಿ.ಮೀ ಫ್ಲೈ ಓವರ್
ಆನಂದ ರಾವ್ ಸರ್ಕಲ್ ಮೇಲ್ಸೇತುವೆ ಕೆ.ಆರ್.ವೃತ್ತದವರೆಗೆ ಮುಂದುವರಿಕೆ