ಬೆಂಗಳೂರಿನಲ್ಲಿ ಬಾಂಗ್ಲಾದೇಶಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ

ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದು, ಈ ಸಂಬಂಧ ರಾಮಮೂರ್ತಿನಗರ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಜ್ಮಾ - ಕಲ್ಕೆರೆ ಕೆರೆ
ನಜ್ಮಾ - ಕಲ್ಕೆರೆ ಕೆರೆ
Updated on

ಬೆಂಗಳೂರು: ಕಲ್ಕೆರೆಯ ದುಬಾರಿ ವಸತಿ ಅಪಾರ್ಟ್‌ಮೆಂಟ್‌ನಲ್ಲಿ ಮನೆಗೆಲಸ ಮಾಡುತ್ತಿದ್ದ ಬಾಂಗ್ಲಾದೇಶದ 28 ವರ್ಷದ ಮಹಿಳೆ ಶುಕ್ರವಾರ ಬೆಳಗ್ಗೆ ಕಲ್ಕೆರೆ ಕೆರೆ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದು, ಈ ಸಂಬಂಧ ರಾಮಮೂರ್ತಿನಗರ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ತೆಯನ್ನು ನಜ್ಮಾ ಎಂದು ಗುರುತಿಸಲಾಗಿದ್ದು, ಕಲ್ಕೆರೆ ನಿವಾಸಿಯಾಗಿದ್ದರು. ಆಕೆಯ ಪತಿ ಸುಮನ್ ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿದ್ದಾರೆ.

ಮೂರು ಮಕ್ಕಳ ತಾಯಿಯಾಗಿರುವ ನಜ್ಮಾ ಗುರುವಾರ ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.

ಪತ್ನಿ ಮನೆಗೆ ಹಿಂತಿರುಗದ ಕಾರಣ, ಆಕೆಯ ಪತಿ ಹುಡುಕಾಟ ನಡೆಸಿದ್ದರು ಮತ್ತು ನಂತರ ಹಿಂತಿರುಗಬಹುದೆಂದು ಭಾವಿಸಿ ಮನೆಗೆ ಹಿಂತಿರುಗಿ ಕಾಯುತ್ತಿದ್ದರು. ಆದರೆ ಶುಕ್ರವಾರ ಬೆಳಗ್ಗೆ, ಬೆಳಗಿನ ವಾಕರ್ ಒಬ್ಬರು ಕೆರೆಯ ಬಳಿ ಶವವನ್ನು ನೋಡಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ನಜ್ಮಾ - ಕಲ್ಕೆರೆ ಕೆರೆ
ಮುಂಬೈ: ಯುವತಿ ಮೇಲೆ ಅತ್ಯಾಚಾರ, ಗುಪ್ತಾಂಗಕ್ಕೆ ಕಲ್ಲು, ಬ್ಲೇಡ್‌ ಹಾಕಿ ವಿಕೃತಿ!

"ಮೊದಲ ನೋಟದಲ್ಲೇ ಕೊಲೆಗೂ ಮುನ್ನ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಕಂಡುಬರುತ್ತಿದೆ. ಘಟನೆ ಗುರುವಾರ ಸಂಜೆ ಅಥವಾ ರಾತ್ರಿ ನಡೆದಿರಬೇಕು. ಸಂತ್ರಸ್ತೆ ಅಕ್ರಮ ಮಾರ್ಗದ ಮೂಲಕ ದೇಶ ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದೆ. ಆಕೆಯ ಬಗ್ಗೆ ಯಾವುದೇ ಸ್ಥಳೀಯ ದಾಖಲೆ ಪುರಾವೆಗಳಿಲ್ಲ ಎಂದು ಪೊಲೀಸರ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದಾಗ್ಯೂ, ಆಕೆಯ ಪತಿ ಬಳಿ ದಾಖಲೆಗಳಿದ್ದು, ಅವರು ಬಾಂಗ್ಲಾದೇಶದವರೇ ಎಂದು ನಾವು ಪರಿಶೀಲಿಸುತ್ತಿದ್ದೇವೆ. ಕುಟುಂಬವು ಕಳೆದ ಐದು ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆವಲಹಳ್ಳಿಯ ವಿರ್ಗೋ ನಗರದಲ್ಲಿರುವ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com